ಸಿನಿಮಾ ರಿಲೀಸ್ ಇಲ್ಲದೇ ತಣ್ಣಗಿರೋ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋದು ಸ್ಟಾರ್ ಮಕ್ಕಳು ಮಾತ್ರ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಮಕ್ಕಳ ರಾಖಿ ಹಬ್ಬದ ಹವಾ ಜೋರಾಗಿದೆ.

ಅವಳ-ಜವಳಿಯಷ್ಟೇ ಕ್ಯೂಟಾಗಿ ಕಾಣೋ ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಸೋಷಿಯಲ್ ಮೀಡಿಯಾ ಸ್ಟಾರ್ಸ್ ಆಗಿದ್ದಾರೆ. ಆಗಾಗ ವೈರಲ್ ಆಗೋ ಆಯ್ರಾ ಹಾಗೂ ಯಥರ್ವ್ ನ ವಿಡಿಯೋಗಳೇ ಇದಕ್ಕೆ ಸಾಕ್ಷಿ.

ಮೊನ್ನೆಯಷ್ಟೇ ಅದ್ದೂರಿಯಾಗಿ ವರಲಕ್ಷ್ಮೀ ಹಬ್ಬ ಅಚರಿಸಿದ ಯಶ್ ಕುಟುಂಬ ರಕ್ಷಾಬಂಧನವನ್ನೂ ಕ್ಯೂಟಾಗಿ ಸೆಲಿಬ್ರೇಟ್ ಮಾಡಿದೆ. ಅಕ್ಕ ಆಯ್ರಾ ತನ್ನ ಪುಟ್ಟ ತಮ್ಮ ಯಥರ್ವ್ ನಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಮುತ್ತು ಕೊಟ್ಟು ಸಂಭ್ರಮಿಸಿದ್ದಾಳೆ.

ಇನ್ನು ಈಗಷ್ಟೇ ಹೆಜ್ಜೆ ಇಡಲು ಕಲಿತಿರೋ ಯಥರ್ವ್ ಅಕ್ಕನಿಗೆ ಗಿಫ್ಟ್ ಕೊಟ್ಟು ಮುದ್ದು ಮಾಡ್ತಿರೋ ಪೋಟೋಗಳು ಸಖತ್ ವೈರಲ್ ಆಗಿದೆ. ರಕ್ಷಾಬಂಧನಕ್ಕಾಗಿ ರಾಧಿಕಾ ಇಬ್ಬರೂ ಮಕ್ಕಳಿಗೆ ಒಂದೇ ಡಿಸೈನ್ ಡ್ರೆಸ್ ಹಾಕಿದ್ದು ಮುದ್ದಾಗಿ ಕಾಣ್ತಿರೋ ಮಕ್ಕಳ ಪೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

ಇತ್ತೀಚೆಗಷ್ಟೆ ಯಶ್ ರಾಧಿಕಾ ತಮ್ಮ ಕನಸಿನ ಮನೆಗೆ ಶಿಫ್ಟ್ ಆಗದ್ದು ಹೊಸ ಮನೆಯಲ್ಲಿ ಒಂದೊಂದೇ ಸಂಭ್ರಮಗಳ ಪೋಟೋ ಶೇರ್ ಮಾಡುತ್ತಾ ರಾಧಿಕಾ- ಯಶ್ ಅಭಿಮಾನಿಗಳಿಗೆ ಸಪ್ರೈಸ್ ನೀಡ್ತಿದ್ದಾರೆ.