Sudeep: ಬಡ ಪ್ರೇಮಿಗಳ ಪ್ರೀತಿಗೆ ಶಕ್ತಿ ತುಂಬಿದ ಸುದೀಪ್: ಕಿಚ್ಚ ಟ್ರಸ್ಟ್ ನಿಂದ ಸಿಕ್ತು ಮದುವೆಗೆ ನೆರವು!!

ಸಿನಿಮಾಗಳ ಜೊತೆ ಜೊತೆಗೆ ತಮ್ಮ ಒಳ್ಳೆ ಕೆಲಸದಿಂದಲೂ ಸುದ್ದಿಯಾಗೋ ನಟ ಸುದೀಪ್ ಪ್ರೇಮಿ ಗಳನ್ನು ಒಂದುಗೂಡಿಸಿ ಹೃದಯವೈಶ್ಯಾಲತೆ ಮೆರೆದಿದ್ದಾರೆ.ಪರಸ್ಪರ ಪ್ರೀತಿಸಿ ಮದುವೆಯಾಗೋಕೆ ಆರ್ಥಿಕ ಚೈತನ್ಯವಿಲ್ಲದೇ ಒದ್ದಾಡುತ್ತಿದ್ದ ಪ್ರೇಮಿಗಳ ಮದುವೆಗೆ ಸುದೀಪ್ ಸಹಾಯಹಸ್ತ ಚಾಚಿದ್ದಾರೆ. ಮದುವೆಗೆ ಬೇಕಿರೋ ಬಟ್ಟೆ,ಒಡವೆ ಕೊಡಿಸಿರೋ ಸುದೀಪ್ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗದ ರಾಜು ಎಂಬ ಹುಡುಗ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಮಂಡ್ಯ ಮೂಲದ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವ ಪವಿತ್ರಾ ಎಂಬ ಹುಡುಗಿಯೊಂದಿಗೆ ಲವ್ವಾಗಿದೆ.

ಪರಸ್ಪರ ಪ್ರೀತಿಸಿದ ಈ ಜೋಡಿ ಹೆತ್ತವರ ಒಪ್ಪಿಗೆ ಪಡೆದು ಮದುವೆಗೂ ಸಿದ್ಧವಾಗಿದೆ. ಆದರೆ ಕೊರೋನಾ ಎಫೆಕ್ಟ್ ನಿಂದ ಮದುವೆಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಯುವಜೋಡಿಗಳು ಸುದೀಪ್ ಅಭಿಮಾನಿಯಾಗಿರೋದರಿಂದ ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಸಂಪರ್ಕಿಸಿದ್ದರು. ‘ತಕ್ಷಣ ನೆರವಿಗೆ ಬಂದಿರೋ ಸುದೀಪ್ ಸಹಾಯ ನೀಡಿದ್ದಾರೆ.

ಹೀಗಾಗಿ ಸಪ್ಟೆಂಬರ್ 1 ರಂದು ರಾಜು ಹಾಗೂ ಪವಿತ್ರಾ ಧರ್ಮಸ್ಥಳದಲ್ಲಿ ಸರಳವಾಗಿಮದುವೆಯಾಗಲಿದ್ದಾರೆ.  ಅಲ್ಲದೇ ಸುದೀಪ್ ಮೇಲಿನ ಅಭಿಮಾನದಿಂದ ಸಪ್ಟೆಂಬರ್ 2 ಸುದೀಪ್ ಹುಟ್ಟುಹಬ್ಬದಂತು ತಮ್ಮ ಊರಿನಲ್ಲಿ ಚಿಕ್ಕದಾಗಿ ಆರತಕ್ಷತೆ ಕೂಡ ನಡೆಸಲಿದ್ದಾರೆ.

ಈಗಾಗಲೇ ಕೊರೋನಾದಿಂದ ಕಂಗೆಟ್ಟ ಶಿಕ್ಷಕರಿ, ಹಿರಿಯ ಕಲಾವಿದರಿಗೆ, ಚಾಮರಾಜನಗರ ಆಕ್ಸಿಜನ್ ಸಂತ್ರಸ್ಥರಿಗೆ ಸೇರಿದಂತೆ ಹಲವರಿಗೆ ಸಹಾಯ ನೀಡಿರುವ ಸುದೀಪ್ ಯುವಜೋಡಿಯ ಪ್ರೇಮಗೀತೆಗೆ ಜೀವತುಂಬಿ ಮತ್ತೆ ಫ್ಯಾನ್ಸ್ ಮನಗೆದ್ದಿದ್ದಾರೆ.

Comments are closed.