ಭಾನುವಾರ, ಏಪ್ರಿಲ್ 27, 2025
HomeCinemaSavi Madappa : ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ Love u ! ಕಿರುತೆರೆ ನಟಿ...

Savi Madappa : ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ Love u ! ಕಿರುತೆರೆ ನಟಿ ಸೌಜನ್ಯ ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ ?

- Advertisement -

ಬೆಂಗಳೂರು : ಖ್ಯಾತ ಕಿರುತೆರೆ ನಟಿ ಸೌಜನ್ಯ ( ಸವಿ ಮಾದಪ್ಪ) ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅನಾರೋಗ್ಯದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದೇನೆ ಎಂದು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇನ್ನಷ್ಟೇ ಕನ್ನಡ ಕಿರುತೆರೆ, ಚಿತ್ರರಂಗದಲ್ಲಿ ಮಿಂಚ ಬೇಕಾಗಿದ್ದ ಕೊಡಗು ಜಿಲ್ಲೆಯ ಕುಶಾಲನಗರದ ನಟಿ ಸೌಜನ್ಯ ( ಸವಿ ಮಾದಪ್ಪ) ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸೌಜನ್ಯ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ. ದೊಡ್ಡಬೆಲೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಸೌಜನ್ಯ ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮೊದಲು ಬರೆದಿದ್ದಾರೆ ಎನ್ನಲಾಗುತ್ತಿರುವ ಡೆತ್‌ ನೋಟ್‌ ನಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸವಿ ಮಾದಪ್ಪ ಹೆಸರಲ್ಲಿ ಖಾತೆಯನ್ನು ಹೊಂದಿದ್ದ ನಟಿ ಸೌಜನ್ಯ ಖಷಿ ಖುಷಿಯಾಗಿಯೇ ವಿಡಿಯೋ, ಪೋಟೊಗಳನ್ನು ಪೋಸ್ಟ್‌ ಮಾಡಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದಲೂ ಸಾಮಾಜಿಕ ಜಾಲತಾಣಗಳಿಂದ ಅವರು ದೂರವಾಗಿದ್ರು ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ತನ್ನ ಪಿಎಯ ಬಳಿಯಲ್ಲಿ ತಿಂಡಿಯನ್ನು ತರಲು ತಿಳಿಸಿದ್ದಾರೆ. ತಿಂಡಿಯನ್ನು ತೆಗೆದುಕೊಂಡು ವಾಪಾಸ್‌ ಬಂದ ವೇಳೆಯಲ್ಲಿ ನಟಿ ಸೌನಜ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಡೆತ್‌ ನೋಟ್‌ ನಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ತನ್ನ ತಂದೆ ತಾಯಿಗೆ ಕ್ಷಮೆಯಾಚನೆಯನ್ನು ಮಾಡಿದ್ದಾರೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿಯಿದೆ. ತನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದ್ದಾರೆ. ತನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕುಂಬಳಗೋಡು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸೌಜನ್ಯ ಪೋಷಕರಿಗೂ ಮಾಹಿತಿಯನ್ನು ನೀಡಲಾಗಿದ್ದು, ಅವರು ಕುಶಾಲನಗರದಿಂದ ಬರುತ್ತಿದ್ದಾರೆ ಎನ್ನಲಾಗುತ್ತಿದೆ.

ಡೆತ್‌ ನೋಟ್‌ನಲ್ಲಿ ಏನಿದೆ ?

ನನ್ನ ಪ್ರೀತಿಯ ಕುಟುಂಬ. ನನ್ನನ್ನು ಕ್ಷಮಿಸಿ. ನನಗೆ ಕಷ್ಟ ಆಗ್ತಿದೆ. ಸಾರಿ ಮಮ್ಮಿ, ಸಾರಿ ಪಪ್ಪಾ, ಮಾಚು ಸಾರಿ. ಅಪ್ಪ ಅಮ್ಮನ ಚೆನ್ನಾಗಿ ನೋಡಿಕೋ. ಜವಾಬ್ದಾರಿ ತುಂಬಾ ಇದೆ. ಜೀವನ ಕಷ್ಟ ಇದೆ. ಲವ್‌ ಯೂ ಸೋ ಮಚ್.‌ ಯಶು ಅಕ್ಕಾ, ನಿಮ್ಮ ಲೈಪ್‌ ನೀನು ನೋಡಿಕೊಳ್ತಿದ್ದೀಯಾ. ಅಪ್ಪ, ಅಮ್ಮನನ್ನೂ ನೋಡಿಕೋ. ನಾನು ಈ ರೀತಿ ಮಾಡಿಕೊಳ್ತಿರೋದಕ್ಕೆ ಸಾರಿ. ನನ್ನ ಮಾನಸಿಕ ಸ್ಥಿತಿ ಸರಿಯಿಲ್ಲ. ನನ್ನ ಆರೋಗ್ಯ ಸಮಸ್ಯೆ ನನ್ನನ್ನು ಕೊಲ್ಲುತ್ತಿದೆ. ನಾನು ನಿನ್ನೆಯೇ ಆತ್ಮಹತ್ಯೆ ಮೊಡಿಕೊಳ್ತಿದ್ದೆ. ಆದ್ರೆ ಮಾಮ ತಡೆದ್ರು. ಬಟ್‌ ಇವತ್ತು ನನಗೆ ಹೆಚ್ಚು ಸಮಯ ಇಲ್ಲ. ನಾನ್ಯಾವುದೇ ನಾಟಕ ಮಾಡ್ತಿಲ್ಲ. ಎಲ್ರಿಗೂ ಸಾರಿ. ಬರೆಯೋಕೆ ತುಂಬಾ ಇದೆ. ಆದ್ರೆ ಸಾಕು. ನಾನು ಇದ್ರೆ ಕಷ್ಟ. ನನಗೆ ಆಗುತ್ತಿಲ್ಲ. ಮತ್ತೆ ಎಲ್ಲರೂ ಹುಷಾರಾಗಿರಿ. ಅಪ್ಪಾ ತಲೆ ಬಹಳ ನೋಯ್ತಿದೆ. ಬರೆದು ಬರೆದು ಸುಸ್ತಾಗಿದೆ. ಸಾಕು ನಾನು ಹೋಗ್ತೇನೆ. ಎಲ್ಲರಿಗೂ ಸಾರಿ. ಈ ಪತ್ರವನ್ನು ಸೂಸೈಡ್‌ ಪತ್ರ ಅಂತ ಅಂದುಕೊಳ್ಳಬೇಡಿ. ನನಗೆ ಡೆತ್‌ ಬರೆಯೋಕೆ ಇಷ್ಟವಿಲ್ಲ. ನಾನು ಅಂದುಕೊಂಡಿರಲಿಲ್ಲ. ನಾನಿದನ್ನು ಬರೆಯುತ್ತೇನೆ ಅಂತಾ. ನನ್ನ ಅಪಾಲಜಿ ಪತ್ರ ಅಂತಾ ಅಂದ್ಕೊಳ್ಳಿ. ನನ್ನ ಈ ನಿರ್ಧಾರಕ್ಕೆ ಕ್ಷಮೆ ಇರಲಿ. ಐ ಲವ್‌ ಯೂ ಪಪ್ಪಾ, ಮಮ್ಮಿ, ಮಾಚು, ಯಶು ಅಕ್ಕಾ. ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ ಲವ್‌ ಯೂ. ಯಾಕಂದ್ರೆ ಎಲ್ಲರೂ ಚೆನ್ನಾಗಿದ್ರಿ. ಹ್ಯಾಪಿ, ಸ್ಟೈಲಿಂಗ್‌ ಫೇಸ್‌ ಜೊತೆ ನಾನು ಹೋಗ್ತಿದ್ದೇನೆ.

ಇದನ್ನೂ ಓದಿ : ಖ್ಯಾತ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ : ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆ

ಇದನ್ನೂ ಓದಿ : ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಜೊತೆ ಜೊತೆಯಲಿ ಬೆಡಗಿ ಮೇಘಾ ಶೆಟ್ಟಿ

ಇದನ್ನೂ ಓದಿ : ಕಬಾಬ್‌ ತಿನ್ನುವ ಚಟದಿಂದ ಪೋಲಿಸರ ಅಥಿತಿಯಾದ ISIS ಉಗ್ರ !

ಇದನ್ನೂ ಓದಿ : ವಾಟರ್ ಪಾರ್ಕ್ ಗಳಿಗೆ ಹೋಗುತ್ತೀರಾ ? ಎಚ್ಚರ ಕೊಳಕು ನೀರಲ್ಲಿರುತ್ತೆ ಮೆದುಳು ತಿನ್ನುವ ಅಮೀಬಾ

( Love u! You know what’s on the TV actress Sowjanya (savi madappa)courtesy Death Note ?)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular