ಕಬಾಬ್‌ ತಿನ್ನುವ ಚಟದಿಂದ ಪೋಲಿಸರ ಅಥಿತಿಯಾದ ISIS ಉಗ್ರ !

ನವದೆಹಲಿ : ತಿನ್ನುವ ಆಸೆ ಯಾರಿಗೆ ಇರಲ್ಲಾ ಹೇಳಿ. ಅದರಲ್ಲೂ ನಾನ್‌ ವೆಜ್‌ ಪ್ರಿಯರಿಗಂತೂ ಮಾಂಸಹಾರ ಇಲ್ಲವೆಂದರೆ ಊಟವೆ ಸೇರೋದಿಲ್ಲ. ಇಲ್ಲೋಬ್ಬ ISIS ಉಗ್ರ ಕಬಾಬ್‌ ತಿನ್ನುವ ಆಸೆಯಿಂದಾಗಿ ಪೋಲಿಸರ ಅಥಿತಿಯಾಗಿದ್ದಾನೆ.

31 ವರ್ಷದ ಅಬ್ದುಲ್ ಮಜೀದ್ ಐಸಿಸ್ ನ ಉಘ್ರಗಾಮಿ ಒಬ್ಬ. ಸಿರಿಯಾದಲ್ಲಿ ಐಸಿಸ್ ನ ಕಾರ್ಯ ನಿರ್ವಹಣೆಗೆ ಹೋಗಿದ್ದ ಅಬ್ದುಲ್ ಅಲ್ಲಿಂದ ಸ್ಪೇನ್‌ ಗೆ ಹೋಗಿ ಸ್ಪೇನ್ (Spain) ಅಡಗಿ ಕುಳಿತಿದ್ದ. ಆದರೆ ಈ ಮಧ್ಯೆ, ಕಬಾಬ್ ಗಳನ್ನು ಆರ್ಡರ್ ಮಾಡುವ ಪ್ರಯತ್ನದಲ್ಲಿ ಸ್ಪೇನ್ ಪೊಲೀಸರು ಅವನನ್ನು ಬಂದಿಸಿದ್ದಾರೆ.

ಇದನ್ನೂ ಓದಿ: Afghanistan : ಭಾರತಕ್ಕೆ ಪತ್ರ ಬರೆದ ತಾಲಿಬಾನ್‌ !

ಬ್ರಿಟನ್ ನಿವಾಸಿಯಾಗಿದ್ದ ಅಬ್ದುಲ್ ಮಜೀದ್ 2013ರ ಮೊದಲು ಸಿರಿಯಾಕ್ಕೆ ಪಲಾಯನ ಮಾಡಿದ್ದಾನೆ. ಆದರೆ ಕೆಲವು ವರ್ಷಗಳ ನಂತರ ಅಬ್ದುಲ್ ಮಜೀದ್ ಸ್ಪೇನ್ ನ ಅಲ್ಜೀರಿಯಾಕ್ಕೆ ಹೋಗಿದ್ದಾನೆ. ಅವನು ಸ್ಪೇನ್ ಗೆ ಆಗಮಿಸಿರುವ ಬಗ್ಗೆ ಸ್ಪ್ಯಾನಿಷ್ ಪೊಲೀಸರ (Spanish Police) ಗುಪ್ತಚರ ಇಲಾಖೆಗೆ ಸುದ್ದಿ ಬಂದಿತು. ಆದರೆ ಅವನು ಎಲ್ಲಿ ವಾಸಿಸುತ್ತಿದ್ದನೆಂದು ಪೊಲೀಸರಿಗೆ ತಿಳಿದಿರಲಿಲ್ಲ.

ಸ್ಪ್ಯಾನಿಷ್ ಅಧಿಕಾರಿಗಳ ಪ್ರಕಾರ, ಇಬ್ಬರು ಶಂಕಿತರು ಆನ್ ಲೈನ್ ನಲ್ಲಿ ಕಬಾಬ್ ಗಳನ್ನು ಆರ್ಡರ್ ಮಾಡುವ ಬಗ್ಗೆ ಮಾಹಿತಿ ದೊರಕಿದೆ. ನಂತರ ಪೊಲೀಸರು ಆ ವ್ಯಕ್ತಿಯನ್ನು ಹುಡುಕಲು ಪ್ರಾರಂಭಿಸಿದರು. ಅವರು ಆಗ್ನೇಯ ಸ್ಪೇನ್ ನ ಅಲ್ಮೇರಿಯಾದಿಂದ ವಿಳಾಸವನ್ನು ಕಲೆಹಾಕಿ. ಕಬಾಬ್ ವಿತರಣೆಯ ಸಮಯದಲ್ಲಿ ಅವನ ಭಯೋತ್ಪಾದಕ ತಂಡವನ್ನು ಬಂದಿಸಲಾಯಿತು. ಸಿದ್ದಿಕಿ ಎಂಬ ವ್ಯಕ್ತಿ ಬಂಧನಕ್ಕೆ ಐದು ದಿನಗಳ ಮೊದಲು ಕಬಾಬ್ ಆರ್ಡರ್ ಮಾಡಿದ. ಎರಡನೇ ಆರ್ಡರ್ ಒಂದು ದಿನದ ನಂತರ ರಾತ್ರಿಯಲ್ಲಿ ಇರಿಸಲಾಯಿತು. ಮೂರನೇ ಆರ್ಡರ್ ಅನ್ನು ಉಬರ್ ಈಟ್ಸ್ ಮೂಲಕ ಮಾಡಲಾಗಿದೆ.

ಕಬಾಬ್ ವಿತರಣೆಯ ಸಮಯದಲ್ಲಿ ಪೊಲೀಸರಿಗೆ ಸಿದ್ದಿಕಿಯನ್ನು ಗುರುತಿಸಲು ಸ್ವಪ್ಪ ಕಷ್ಟವಾಯಿತು ಏಕೆಂದರೆ ಅವನು ಗುರುತೇ ಸಿಗದಿದಷ್ಟು ದಪ್ಪಗಾಗಿದ್ದನು . ಆದರೆ ಅವನ ಕಿವಿಗಳಿಂದಾಗಿ ಗುರುತಿಸುವುದು ಸುಲಭವಾಯಿತು. ಅವನ ಇಬ್ಬರು ಸಹಚರರನ್ನು ಸಹ ಬಂಧಿಸಲಾಯಿತು. ಅವರಿಂದ 43,000 ಪೌಂಡ್ ಮೌಲ್ಯದ ಬಿಟ್ ಕಾಯಿನ್ ಗಳನ್ನು (Bit Coin) ಸಹ ವಶಪಡಿಸಿಕೊಳ್ಳಲಾಗಿದೆ. ಬ್ಯಾರಿಯನ್ನು ಮ್ಯಾಡ್ರಿಡ್ ಬಳಿಯ ಸೊಟೊ ಡೆಲ್ ರಿಯಲ್ ಜೈಲಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ನಿಲ್ಲದ ತಾಲಿಬಾನ್‌ ಅಟ್ಟಹಾಸ : ಮಗುವನ್ನು ನೇಣಿಗೇರಿಸಿ ಕೊಂದ ತಾಲಿಬಾನಿಗಳು

(ISIS furious with hostess of police with kebab eating addiction)

Comments are closed.