ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಹುಟ್ಟುಹಬ್ಬ ಸಂಭ್ರಮ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಚ್ಚು ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. ಡಿಂಪಲ್ ಕ್ವೀನ್ ಹುಟ್ಟು ಹಬ್ಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನಿನಾಸಂ ಸತೀಶ್ ಜೊತೆಗೆ ಅಯೋಗ್ಯ ಸಿನಿಮಾ ಮಾಡಿದ್ದ ರಚಿತಾ ರಾಮ್ ಇದೀಗ ಮತ್ತೆ ಮ್ಯಾಟ್ನಿ ಸಿನಿಮಾದ ಮೂಲಕ ಒಂದಾಗುತ್ತಿ ದ್ದಾರೆ. ಇದೀಗ ರಚಿತಾ ರಾಮ್ ಬರ್ತಡೇಗೆ ‘ಮ್ಯಾಟ್ನಿ’ ಸಿನಿಮಾದ ಪೋಸ್ಟರ್ ಲಾಂಚ್ ಮಾಡೋ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ.

ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಚಿತಾ ರಾಮ್ ಇಂದು ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದ ಸ್ಟಾರ್ ನಟರ ಜೊತೆಯಲ್ಲಿ ನಟಿಸಿರುವ ರಚ್ಚು ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ.

ಭರತನಾಟ್ಯ ಕಲಾವಿದೆಯಾಗಿ 40ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿರುವ ರಚಿತಾ ರಾಮ್ ಅವರು ಅರಸಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಧಾರವಾಹಿಯಲ್ಲಿಯೇ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿರುವ ರಚ್ಚು ಇಂದು ಪ್ರಸಿದ್ದ ನಟಿಯಾಗಿ ರೂಪುಗೊಂಡಿದ್ದಾರೆ.

ಮನೋಹರ್ ಕಾಂಪಲ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮ್ಯಾಟ್ನಿಗೆ ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಕೇವಲ ಮ್ಯಾಟ್ನಿ ಸಿನಿಮಾವಷ್ಟೇ ಅಲ್ಲಾ ಬರೋಬ್ಬರಿ 10ಕ್ಕೂ ಅಧಿಕ ಸಿನಿಮಾಗಳೀಗ ರಚ್ಚು ಕೈಯಲ್ಲಿದೆ.

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಜೋಗಿ ಖ್ಯಾತಿಯ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಏಕ್ ಲವ್ ಯಾ ಸಿನಿಮಾದ ಮೂಲಕ ರಕ್ಷಿತಾ ತಮ್ಮ ರಾಣಾನನ್ನು ನಾಯಕನ ನ್ನಾಗಿ ಪರಿಚಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇನ್ನು ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿಯೂ ರಚ್ಚು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಸಿನಿಮಾದ ಸೆನ್ಸಾರ್ ಹಂತದಲ್ಲಿ. ಎಲ್ಲವೂ ಅಂದುಕೊಂಡಂತೆ ಆದ್ರೆ ಇದೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಚಿರಂಜೀವಿ ಸರ್ಜಾ ನಟನೆಯ ಎಪ್ರಿಲ್ ಸಿನಿಮಾದಲ್ಲಿ ರಚ್ಚು ನಾಯಕಿಯಾಗಿ ಆಯ್ಕೆಯಾಗಿದ್ದರು. ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಯಾಗಿತ್ತು. ಆದರೆ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿದ ಬೆನ್ನಲ್ಲೇ ಚಿತ್ರತಂಡ ಬದಲಿ ಪ್ಲ್ಯಾನ್ ಗಳನ್ನು ಮಾಡಿಕೊಳ್ಳುತ್ತಿದೆ.

ಪ್ರಜ್ವಲ್ ದೇವರಾಜ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವೀರಂನಲ್ಲಿಯೂ ರಚಿತಾ ರಾಮ್ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾ ಶೂಟಿಂಗ್ ಹಂತದಲ್ಲಿದೆ.

ಧನಂಜಯ್ ಜೊತೆ ಡಾಲಿ ಧನಂಜಯ್ ನಟಿಸುತ್ತಿರುವ ‘ಡಾಲಿ’ ಚಿತ್ರಕ್ಕೆ ರಚ್ಚು ನಾಯಕಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವೂ ರಚಿತಾ ಕೈಯಲ್ಲಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ‘ರವಿ ಬೋಪಣ್ಣ’ ಚಿತ್ರದಲ್ಲೂ ರಚ್ಚು ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ರಿಷಿ ಜೊತೆ ‘ಸೀರೆ’ ಎಂಬ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಸಂಜಯ್ ಅಲಿಯಾಸ್ ಸಂಜು’ ಚಿತ್ರದಲ್ಲಿಯೂ ಡಿಂಪಲ್ ಕ್ವೀನ್ ಕಾಣಿಸಿಕೊಳ್ಳಲಿದ್ದಾರೆ.

‘ಕೋಲಮಾವು ಕೋಕಿಲಾ’ ರೀಮೇಕ್ ತಮಿಳಿನಲ್ಲಿ ನಯನತಾರ ಹಾಗೂ ಯೋಗಿಬಾಬು ನಟಿಸಿದ್ದ ‘ಕೋಲಮಾವು ಕೋಕಿಲಾ’ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲಿದ್ದು, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಎಂದು ಹೇಳಲಾಗಿದೆ.