ಅನುಶ್ರೀ ಜೊತೆ ಚಾಟಿಂಗ್ ವಿವಾದ : ಅನುಮಾನಕ್ಕೆ ಸವಾಲು ಹಾಕಿದ ಮಾಜಿ ಸಿಎಂ ಎಚ್ ಡಿಕೆ

0

ಬೆಂಗಳೂರು : ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀಗೆ ಬೆಂಬಲ ನೀಡಿರುವ ಆ ಮಾಜಿಮುಖ್ಯಮಂತ್ರಿ ಯಾರು, ಮುಖ್ಯಮಂತ್ರಿಯ ಮಗ ಯಾರು ? ಪ್ರಭಾವ ಬೀರಿರುವ ಪ್ರಭಾವಿ ರಾಜಕಾರಣಿ ಯಾರು ಅನ್ನೋ ಕುರಿತು ಪೊಲೀಸ್ ಇಲಾಖೆ ಹಾಗೂ ಸರಕಾರ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಿಚಾರಣೆಯನ್ನು ಎದುರಿಸಿದ ನಿರೂಪಕಿ ಅನುಶ್ರೀ ಬೆಂಬಲಕ್ಕೆ ರಾಜಕಾರಣಿಗಳು ನಿಂತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅದ್ರಲ್ಲೂ ಮಾಜಿ ಸಿಎಂ ಪುತ್ರ, 2 ಬಾರಿ ಮುಖ್ಯಮಂತ್ರಿಯಾದವರು ಹಾಗೂ ಪ್ರಭಾವಿ ರಾಜಕಾರಣಿಯ ಸಹೋದರ ಅನ್ನೋ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಆದರೆ ರಾಜಕಾರಣಿಯಾಗು ಅನ್ನೋ ಕುರಿತು ಸ್ಪಷ್ಟನೆಯನ್ನು ನೀಡಬೇಕು.

ಯಾವ ಪೊಲೀಸ್ ಅಧಿಕಾರಿ ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ. ಅದನ್ನು ಬಹಿರಂಗ ಪಡಿಸಬೇಕು. ಮಂಗಳೂರಿನ ನಗರ ಪೊಲೀಸ್ ಆಯುಕ್ತರ ಜೊತೆಗೆ ಮಾತನಾಡಿದ್ದೇನೆ. ಪೊಲೀಸರು ಯಾರೂ ಕೂಡ ಮಾಹಿತಿಯನ್ನು ನೀಡಿಲ್ಲ ಅಂತಾ ಹೇಳಿದ್ದಾರೆ. ಆದರೆ ನಾನು ಇಷ್ಟಕ್ಕೆ ಬಿಡುವುದಿಲ್ಲ. ಆ ಮಾಜಿ ಮುಖ್ಯಮಂತ್ರಿ ಯಾರೂ ಅನ್ನೋ ಕುರಿತು ಬಹಿರಂಗವಾಗಿ ಹೇಳಿಕೆ ನೀಡಬೇಕು ಎಂದಿದ್ದಾರೆ.

ವಾಹಿನಿಗಳು ಕಪೋಲ ಕಲ್ಪಿತ ವರದಿಗಳನ್ನು ಪ್ರಸಾರ ಮಾಡುವ ಮೊದಲು ಸತ್ಯವನ್ನು ಅರಿಯಬೇಕು. ಸಿದ್ದರಾಮಯ್ಯ, ಸದಾನಂದ ಗೌಡ, ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್ ಸೇರಿದಂತೆ ಒಟ್ಟು 6 ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದೇವೆ. ನಾನು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯ ಮಗನಾಗಿದ್ದೇನೆ. ಸಾರ್ವಜನಿಕವಾಗಿ ಅನುಮಾನ ಮೂಡಿಸುವ ಹೇಳಿಕೆಯನ್ನು ಯಾರೂ ಮಾಡಬಾರದು. ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಪಪ್ರಚಾರ ಮಾಡುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳಿದ್ದಾರೆ ಅಂತಾ ಹೇಳಿಕೆ ನೀಡುತ್ತಿರುವ ವ್ಯಕ್ತಿ ಸರಕಾರಕ್ಕೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಬಾರದು. ಆ ವ್ಯಕ್ತಿ ಸರಕಾರಕ್ಕೆ ಮಾಹಿತಿಯನ್ನು ನೀಡದೇ ಇದ್ರೆ ಸರಕಾರ ಅವರ ಮೇಲೆ ಕ್ರಮವನ್ನು ಕೈಗೊಳ್ಳಬೇಕು. ಪೊಲೀಸರು ಮಾಧ್ಯಮದವರಿಗೆ ಮಾಜಿ ಮುಖ್ಯಮಂತ್ರಿ ಅನುಶ್ರೀ ಜೊತೆಗೆ ವಾಟ್ಸಾಪ್ ಚಾಟ್ ನಡೆಸಿದ್ದಾರೆಂಬ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿಯನ್ನು ಯಾರು ನೀಡಿದ್ದಾರೋ ಆ ಪೊಲೀಸ್ ಅಧಿಕಾರಿ ಸಾರ್ವಜನಿಕವಾಗಿ ವಾಟ್ಸಾಪ್ ಚಾಟ್ ಅನ್ನು ಬಹಿರಂಗ ಪಡಿಸಬೇಕು.

ಇದೀಗ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಪ್ರಕರಣದ ಧಿಕ್ಕನ್ನು ತಪ್ಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯುತ್ತೇನೆ ಎಂದಿದ್ದಾರೆ.

Leave A Reply

Your email address will not be published.