ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಇದೀಗ ಬಯಲಾಗುತ್ತಲೇ ಇದೆ. ನಟಿ ರಾಗಿಣಿ ಸೇರಿದಂತೆ 6 12 ಮಂದಿಯ ವಿರುದ್ದ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದ್ರಲ್ಲೂ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ಬಾಲಿವುಡ್ ನಟ ವಿವೇಕ್ ಓಬೆರಾಯ್ ಬಾಮೈದನ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದಲ್ಲಿ ಸಿನಿಮಾ ನಟ, ನಟಿಯರ ಜೊತೆಗೆ ಪ್ರಭಾವಿ ರಾಜಕಾರಣಿಗಳ ಮಕ್ಕಳು ಕೂಡ ಇದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಆದಿತ್ಯ ಆಳ್ವನನ್ನು 6ನೇ ಆರೋಪಿಯನ್ನಾಗಿ ಮಾಡಲಾಗಿದೆ. ಆದಿತ್ಯ ಆಳ್ವನ ಸ್ನೇಹಿತರೂ ಡ್ರಗ್ಸ್ ಸಪ್ಲೈ, ಸೇವನೆಯಲ್ಲಿ ಪಾಲುದಾರ ರಾಗಿದ್ದಾರೆಂಬ ಮಾಹಿತಿಯನ್ನು ಸಿಸಿಬಿ ಕಲೆಹಾಕಿದೆ. ಆದಿತ್ಯ ಆಳ್ವ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಡ್ರಗ್ಸ್ ಜಾಲದ ಕುರಿತು ಒಂದನೇ ಆರೋಪಿಯಾಗಿರುವ ಶಿವಪ್ರಕಾಶ್ ನೀಡಿದ ಮಾಹಿತಿಯನ್ನು ಆಧರಿಸಿ 12 ಮಂದಿಯ ವಿರುದ್ದ ಎನ್ ಡಿಪಿಎಸ್ ಕಾಯ್ದೆ 12, 21 (ಸಿ), 27 (ಎ), 27 (ಬಿ), 29 ಮತ್ತು ಐಪಿಸಿ ಸೆಕ್ಷನ್ 120ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈಗಾಗಲೇ ಪ್ರಕರಣದಲ್ಲಿ ಒಂದನೇ ಆರೋಪಿ ಶಿವಪ್ರಕಾಶ್, ನಟಿ ರಾಗಿಣಿ, ವಿರೇನ್ ಖನ್ನಾ, ರಾಹುಲ್ ಟೋನ್ಶಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ತಲೆ ಮರೆಯಿಸಿಕೊಂಡಿದ್ದಾರೆ. ಇಂದು ಆದಿತ್ಯ ಆಳ್ವ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸದಾಶಿವ ನಗರದಲ್ಲಿರುವ ಮನೆಯನ್ನು ಖಾಲಿ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.

ಆದಿತ್ಯ ಆಳ್ವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬಾಮೈದ ಆಗಿರುವುದರಿಂದಾಗಿ ಬಾಲಿವುಡ್ ನಂಟಿನ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವೇಕ್ ಓಬೆರಾಯ್ ಅವರನ್ನು ಕೂಡ ವಿಚಾರಣೆ ನಡೆಸುವ ಸಾಧ್ಯತೆಯಿದೆ.