ಕರೋನಾ ಲಾಕ್ ಡೌನ್ ನಿಂದಾಗಿ ಚಂದನವನದ ಕೆಲಸಗಳೆಲ್ಲಾ ನಿಂತು ಹೋಗಿ, ಥಿಯೇಟರ್ ಗಳು ಸಹ ಮುಚ್ಚಿದೆ. ಡಿಜಿಟಲ್ ಟಿವಿಗಳಲ್ಲಿ ಸಿನಿಮಾಗಳು ಮತ್ತು ಸಿನಿಮಾ ಸುದ್ದಿಗಳು ನೋಡಬಹುದಾಗಿದೆ.

ಈ ಟೈಮ್ ನಲ್ಲಿ ಇಲ್ಲೊಂದು ತಂಡದ ಹಾಡು ಸದ್ದು ಮಾಡುತಿದೆ, ಹೊಂಬಣ್ಣ ಸಿನಿಮಾ ಖ್ಯಾತಿಯ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ಎಂಥಾ ಕಥೆ ಮಾರಾಯ’ ಚಿತ್ರದ ಹಾಡು.

ಹೌದು, ಹೊಂಬಣ್ಣ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ರಕ್ಷಿತ್, ಮೊದಲ ಸಿನಿಮಾದಲ್ಲಿಯೇ ತಮ್ಮ ಕೆಲಸದ ಪಕ್ವತೆ ತೋರಿಸಿದ್ದರು. ಇದೀಗ ಮತ್ತೊಂದು ಮಲೆನಾಡಲ್ಲಿ ನಡೆಯುವ ಸಿನಿಮಾ ಮಾಡಿದ್ದಾರೆ.ಈ ಸಿನಿಮಾದ ಮೊದಲ ಹಾಡು “ಎಂಥಾ ಸಾವು ಮಾರಾಯ” ಹಾಡು ಸಾಕಷ್ಟು ಸದ್ದು ಮಾಡ್ತಿದೆ.

ರಕ್ಷಿತ್ ತೀರ್ಥಹಳ್ಳಿ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾಕ್ಕೆ ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ ಮಾಡಿದ್ದು, ಹೇಮಂತ್ ಅವರಿಗೆ ಇದು ಮೂರನೇ ಸಿನಿಮಾ. ಮುಂಚೆ ಸ್ಟೇಟ್ ಮೆಂಟ್ 8/11 ಮತ್ತು ಅರಣ್ಯ ಕಾಂಡ ಎಂಬ ಚಿತ್ರಗಳಿಗೆ ಸಂಗೀತ ನೀಡಿದ್ದ ಹೇಮಂತ್,
ಸಾಕಷ್ಟು ಕಾನ್ಸರ್ಟ್ ಗಳು ಮತ್ತು ಆಲ್ಬಂಬ್ ಸಾಂಗ್ ಗಳ ಮೂಲಕ ಸಾಕಷ್ಟು ಹೆಸರು ಮಾಡಿದ್ದರು.

ಈ ಸಿನಿಮಾ ಹಾಡಿನ ಮೂಲಕ ಸಿಕ್ಸರ್ ಬಾರಿಸಿರೋ ಹೇಮಂತ್ ಅವರ ಪ್ರತಿಭೆಗೆ ಶಹಬ್ಬಾಶ್ ಎನ್ನಲೇಬೇಕು. ನಿರ್ದೇಶಕರಾದ ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿರೋ ಈ ಹಾಡಿಗೆ ಮತ್ತಷ್ಟು ಶಕ್ತಿ ತುಂಬಿರೋದು ಅನನ್ಯ ಭಟ್ ವಾಯ್ಸ್.. ಅನನ್ಯ ಭಟ್ ಧ್ವನಿಯಲ್ಲಿರೋ ಚಮತ್ಕಾರವೇ ಅಂತದ್ದೂ.

ಸಂಚಲನ ಮೂವೀಸ್ ಪ್ರೊಡಕ್ಷನ್ ಅಡಿಯಲ್ಲಿ ರಾಮಕೃಷ್ಣ ನಿಗಾಡೆ ಬಂಡವಾಳ ಹೂಡಿದ್ದು, ಗುರುಪ್ರಸಾದ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ವೇದಾಂತ್ ಸುಬ್ರಮಣ್ಯ, ಸುಧೀರ್ SJ,ಶ್ರೀ ಪ್ರಿಯಾ , ಕೇಶವ್, ರವಿರಾಜ್ ಶೆಟ್ಟಿ, ಸಮೀರ್, ಪಲ್ಲವಿ ಗೋಪಾಲ್, ಲಕ್ಷ್ಮೀ ತೀರ್ಥಹಳ್ಳಿ ಹೀಗೆ ಸಾಕಷ್ಟು ಕಲಾವಿದರ ದಂಡೇ ಚಿತ್ರದಲ್ಲಿದೆ.. ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಎಂಬ ನಂಬಿಕೆ ಮೂಡಿಸುತ್ತದೆ.

ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಲಾಕ್ ಡೌನ್ ಕಾರಣದಿಂದ ನಿಂತಿದೆ. ಆದಷ್ಟು ಬೇಗ ಚಿತ್ರ ತೆರೆಗೆ ತರೋ ತವಕದಲ್ಲಿದೆ ಚಿತ್ರತಂಡ.