ಮಂಗಳವಾರ, ಏಪ್ರಿಲ್ 29, 2025
HomeCinema'ಅಕಟಕಟ' ಅಂತಿದ್ದಾರೆ ಲೂಸ್ ಮಾದ

‘ಅಕಟಕಟ’ ಅಂತಿದ್ದಾರೆ ಲೂಸ್ ಮಾದ

- Advertisement -

ಚಂದನವನದ ಡ್ಯಾನ್ಸಿಂಗ್ ಸ್ಟಾರ್ ಲೂಸ್ ಮಾದ ಯೋಗಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 31ನೇ ವಸಂತಕ್ಕೆ ಕಾಲಿಡುತ್ತಿರುವ ಯೋಗಿಗಾಗಿಯೇ ಅಕಟಕಟ ಸಿನಿಮಾ ತಂಡ ವಿಭಿನ್ನ ಗಿಫ್ಟ್ ಕೊಟ್ಟಿದೆ. ಈಗಾಗಲೇ ಸಿನಿಮಾ ತಂಡ ವಿಶೇಷ ಟೈಟಲ್ ನೊಂದಿಗೆ, ಲೂಸ್ ಮಾದ ನಾಯಕ ನಟನಾಗಿ ಅಭಿನಯಿಸುತ್ತಿರೋ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿದ್ದು, ಹೊಸತನದ ಸಿನಿಮಾ ಕೊಡಲು ಸಿದ್ಧವಾಗಿದೆ.


ಹೌದು, ನಾಗರಾಜ್ ಸೋಮಯಾಜಿ ಆಕ್ಷನ್ ಕಟ್ ಹೇಳುತ್ತಿರೋ ಅಕಟಕಟ ವಿಶೇಷ ಟೈಟಲ್ ನ ಸಿನಿಮಾಕ್ಕೆ ಯೋಗಿ ನಾಯಕನಾಗಿ ಅಭಿನಯಿಸುತ್ತಿದ್ದು, ಜನ್ಮದಿನದಕ್ಕೆ ಫಸ್ಟ್ ಲುಕ್ ಪೋಸ್ಟರನ್ನು ವಿಶೇಷ ಉಡುಗೊರೆಯಾಗಿ ನೀಡಿದೆ ಚಿತ್ರತಂಡ.

“ದಿ ಬೆಸ್ಟ್ ಆಕ್ಟರ್” ಎಂಬ ಟೆಲಿ ಸಿನಿಮಾದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಸೌಂಡ್ ಮಾಡಿ, ತಮ್ಮ ಕೆಲಸದ ಗುಣಮಟ್ಟವನ್ನು ಚಂದನವನದಲ್ಲಿ ತೋರಿಸಿರೋ ತಂಡ ಈ ಅಕಟಕಟ ಸಿನಿಮಾ ಮಾಡಲು ರೆಡಿಯಾಗಿ ಬಂದಿದೆ. ಈಗಾಗಲೇ ಸಂಚಾರಿ ವಿಜಯ್, ಅಚ್ಯುತ್ ಕುಮಾರ್ ಮತ್ತೆ ರಂಗಾಯಣ ರಘು ನಟನೆಯ ಪುಕ್ಸಟ್ಟೆ ಲೈಫು ಸಿನಿಮಾ ನಿರ್ಮಾಣ ಮಾಡಿರೋ ನಾಗರಾಜ್ ಸೋಮಯಾಜಿ, ಸದ್ಯಕ್ಕೆ ಯೋಗಿಗೆ ಆಕ್ಷನ್ ಕಟ್ ಹೇಳಲು ಎಲ್ಲಾ ತರಹದ ಸಿದ್ಧತೆ ಮಾಡಿಕೊಂಡಿದ್ದಾರೆ. ಇವರ ಜೊತೆಯಲ್ಲಿ ಬರವಣಿಗೆಯಲ್ಲಿ ಭಾಸ್ಕರ್ ಬಂಗೇರಾ ಮತ್ತು ಹರೀಶ್ ನಿನಾಸಂ ಸಾಥ್ ಕೊಡಲಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಾಹಕರಾಗಿ ಕೈಚಳಕ ತೋರಿಸಲು ಸನ್ನದ್ಧರಾಗಿದ್ದು, ಮ್ಯಾಥ್ಯೂಸ್ ಮನು ಸಂಗೀತ ನೀಡುತಿದ್ದಾರೆ.

ಸ್ವತಃ ಲೂಸ್ ಮಾದ ಅವರೇ ತುಂಬಾನೇ ಇಷ್ಟಪಟ್ಟು ಮಾಡುತ್ತಿರೋ ಅಪರೂಪದ ಕಥೆ ಇದಾಗಿದ್ದು, ಒಂದೊಳ್ಳೆ ಸಿನಿಮವಾಗುತ್ತೆ ಅನ್ನೋ ಪ್ರಬಲ ನಂಬಿಕೆ ಚಿತ್ರತಂಡದ್ದು. ಚಿತ್ರತಂಡ ಸದ್ಯ ಬೇರೆ ಯಾವುದೇ ವಿವರ ಬಿಟ್ಟುಕೊಡದೇ, ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ಮಗ್ನರಾಗಿದ್ದು ಹೊಸತನದ ಸಿನಿಮಾ ಕೊಡುವಲ್ಲಿ ಶ್ರಮವಹಿಸುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular