ಪಂಚಭಾಷಾ ತಾರೆ ಪ್ರಿಯಾಮಣಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 36ನೇ ವಸಂತಕ್ಕೆ ಕಾಲಿರಿಸಿರೋ ಪ್ರಿಯಾಮಣಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಮಿಂಚುಹರಿಸುತ್ತಿರುವ ಪ್ರಿಯಮಣಿ ಜನಿಸಿದ್ದ 1984ರ ಜೂನ್ 4ರಂದು. ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿರುವ ವಾಸುದೇವ ಮಣಿ ಹಾಗೂ ಲತಾ ಮಣಿ ಅವರ ಮುದ್ದಿನ ಮಗಳು.

ಪ್ರಿಯಾ ವಾಸುದೇವ ಪದವಿ ಶೀಕ್ಷಣವನ್ನು ಪೂರೈಸಿರೋ ಪ್ರಿಯಾ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು.

ತಮಿಳಿನ ಉಲ್ಲಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ಪ್ರಿಯಾಮಣಿ, ತಮಿಳಿನ ಪರುತ್ತಿವೀರನ್ ಸಿನಿಮಾ ಪ್ರಿಯಾಮಣಿ ಬದುಕಿಗೆ ಹೊಸ ತಿರುವುಕೊಟ್ಟಿತ್ತು. ಸಿನಿಮಾದಲ್ಲಿನ ನಟನೆಗಾಗಿ ಪ್ರಿಯಾಮಣಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

2009ರಲ್ಲಿ ರಾಮ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ವಿಷ್ಣುವರ್ಧನ, ಏನೋ ಒಂಥರಾ, ಅಣ್ಣಾಬಾಂಡ್, ಚಾರುಲತಾ, ಇದೊಳ್ಳೆ ರಾಮಾಯಣ.

ಲಕ್ಷ್ಮೀ, ಅಂಬರೀಶ, ಕಲ್ಪನಾ -2, ಕಥಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ವ್ಯೂಹ, ದನಕಾಯೋನು, ಚೌಕ, ನನ್ನ ಪ್ರಕಾರ, ಧ್ವಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ ಪಂಚ ಭಾಷಾ ನಟಿಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಉದ್ಯಮಿ ಮುಸ್ತಫಾ ರಾಜ್ ಅವರನ್ನು ವಿವಾಹವಾಗಿರುವ ಪ್ರಿಯಾಮಣಿ ಸಾಂಸಾರಿಕ ಜೀವನದ ಜೊತೆಗೆ ಚಿತ್ರರಂಗದಲ್ಲಿಯೂ ಮುಂದುವರಿದಿದ್ದಾರೆ.

ತಮಿಳಿನ ಒಂದೆರಡು ಚಿತ್ರಗಳು ಶೂಟಿಂಗ್ ನಡೆದಿದ್ದು, ತೆರೆಕಾಣಲು ಸಿದ್ದವಾಗಿವೆ.
