Adithi Prabhudeva :ಸೋಶಿಯಲ್ ಮೀಡಿಯಾದಲ್ಲಿ ಸದಾ ಕನ್ನಡಾಭಿಮಾನ ತೋರುತ್ತಾ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಯಾಂಡಲ್ವುಡ್ ನಟಿ ಅದಿತಿಪ್ರಭುದೇವ ತಮ್ಮ ನಟನಾ ಜೀವನದಲ್ಲಿಯೂ ಯಶಸ್ಸನ್ನು ಸಂಪಾದಿಸುತ್ತಿದ್ದಾರೆ. ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಇದೀಗ ಚಂದನವನದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾ, ನಟನೆ ಇವೆಲ್ಲದರ ನಡುವೆಯೇ ನಟಿ ಅದಿತಿ ಪ್ರಭುದೇವ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ..! ಹೌದು..! ನಟಿ ಅದಿತಿ ಪ್ರಭುದೇವ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಾ ಎಂಬ ಸುದ್ದಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ.
ಅಂದಹಾಗೆ ನಟಿ ಅದಿತಿ ಪ್ರಭುದೇವ ಎಂಗೇಜ್ಮೆಂಟ್ ಬಗ್ಗೆ ಇದ್ದಕ್ಕಿದ್ದಂತೆ ಜನರು ಮಾತನಾಡೋಕೆ ಕಾರಣ ಕೂಡ ಇದೆ. ನಟಿ ಅದಿತಿ ಪ್ರಭುದೇವ ಹುಡಗನೊಬ್ಬರ ಜೊತೆ ನಿಂತು ತಮ್ಮ ಉಂಗುರು ಹೈಲೈಟ್ ಮಾಡಿರುವಂತಹ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋವನ್ನು ಅದಿತಿ ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಅದಿತಿಗೆ ನಿಶ್ಚಿತಾರ್ಥದ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಮೂಲಗಳ ಪ್ರಕಾರ ನಟಿ ಅದಿತಿ ಪ್ರಭುದೇವ ನಿನ್ನೆ ಹೊಳೆನರಸೀಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ವರ ಮೂಲತಃ ದಾವಣೆಗರೆ ನಿವಾಸಿಯಾಗಿದ್ದು ಉದ್ಯಮ ಕ್ಷೇತ್ರದಲ್ಲಿದ್ದಾರೆ ಎನ್ನಲಾಗಿದೆ.ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿರುವ ಅದಿತಿ ಪ್ರಭುದೇವ ಒಂದು ಕನಸೊಂದು ಕನಸಿನಂತೆ ನನಸಾಗಿದೆ ಎಂದು ಬರೆದುಕಂಡಿದ್ದಾರೆ. ಆದರೆ ಈ ಬಗ್ಗೆ ನಟಿ ಅದಿತಿ ಪ್ರಭುದೇವ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಕೆಲ ದಿನಗಳ ಹಿಂದಷ್ಟೇ ಏಕ್ ಲವ್ ಯಾ ಸಿನಿಮಾದ ಈವೆಂಟ್ ಒಂದಕ್ಕೆ ಆಗಮಿಸಿದ್ದ ನಟಿ ಅದಿತಿ ಪ್ರಭುದೇವ ಲವ್ ಮ್ಯಾರೇಜ್ ಬಗ್ಗೆ ಕೆಲವೊಂದಿಷ್ಟು ಅಭಿಪ್ರಾಯಗಳನ್ನು ಶೇರ್ ಮಾಡಿದ್ದರು. ಗಂಡು ಮಕ್ಕಳಿಗೆ ಬೇಕಾಗುವಂತೆ ಹುಡುಗಿಯರಿಗೆ ಬ್ರೇಕಪ್ ಸಾಂಗ್ ಬೇಕಾಗೋದಿಲ್ಲ. ಹುಡುಗಿಯರು ಮನಸಿನಲ್ಲೇ ಎಲ್ಲವನ್ನು ಫೀಲ್ ಮಾಡ್ತಾರೆ. ಅದರಲ್ಲೂ ನಾನಂತೂ ಲವ್ ಮಾಡೇ ಇಲ್ಲ. ಇನ್ನು ಬ್ರೇಕಪ್ ಎಲ್ಲಿಂದ..? ನನಗೆ ಪ್ರೀತಿ ಮೇಲೆ ಮಾತ್ರ ನಂಬಿಕೆ ಇದೆ. ಪ್ರೇಮ ವಿವಾಹದ ಮೇಲೆ ಇಲ್ಲ. ಹೀಗಾಗಿ ನಾನು ಅರೇಂಜ್ಡ್ ಮ್ಯಾರೇಜ್ ಆಗುತ್ತೇನೆ ಎಂಬರ್ಥದಲ್ಲಿ ಮಾತನಾಡಿದ್ದರು.
sandlewood actress adithi prabhudeva got engaged with davanagere based business man: photos goes viral
ಇದನ್ನೂ ಓದಿ : Top 5 OTT films of this week: ಈ ವಾರ ಓಟಿಟಿಯಲ್ಲಿ ರಿಲೀಸ್ ಆದ ಟಾಪ್ 5 ಚಿತ್ರಗಳು; ನೀವು ವೀಕ್ಷಿಸಬೇಕಾದ ಸರಣಿಗಳಿವು