lorry collides with govt bus : ಸರ್ಕಾರಿ ಬಸ್​- ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ

lorry collides with govt bus :ಸರ್ಕಾರಿ ಬಸ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ದಾರುಣ ಘಟನೆಯು ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನಡೆದಿದೆ. ಮುಂಬದಿಯಿಂದ ಲಾರಿಯು ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.


ಪ್ರಯಾಣಿಕರನ್ನು ಹೊತ್ತ ಸರ್ಕಾರಿ ಬಸ್​ ಮೆಟ್ಟುಪಾಳ್ಯಂನಿಂದ ಸತ್ಯಮಂಗಲಕ್ಕೆ ಸಂಚರಿಸುತ್ತಿತ್ತು ಎನ್ನಲಾಗಿದೆ. ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಬಸ್​ ಪಲ್ಟಿಯಾಗಿದ್ದು ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಬಸ್​ ಅಪಘಾತಕ್ಕೀಡಾಗುತ್ತಿದ್ದಂತೆಯೇ ಅಪಘಾತಕ್ಕೀಡಾದವರ ರಕ್ಷಣೆಗೆ ಸ್ಥಳೀಯ ನಿವಾಸಿಗಳು ಧಾವಿಸಿದ್ದಾರೆ. ಅಪಘಾತದಲ್ಲಿ ಏಳು ಮಂದಿ ಬಸ್​ ಪ್ರಯಾಣಿಕರು ಹಾಗೂ ಲಾರಿ ಚಾಲಕ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬಸ್​ನಿಂದ ಹೊರಗೆ ತೆಗೆಯಲಾಗಿದ್ದು ಎಲ್ಲರನ್ನೂ ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಅಪಘಾತದಲ್ಲಿ ಬಸ್​ ಚಾಲಕ, ಬಸ್​ ನಿರ್ವಾಹಕ ಹಾಗೂ ಬಸ್​ನಲ್ಲಿದ್ದ ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.


ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಗಳಲ್ಲಿ ಅಪಘಾತವು ತ್ರೀ ವೇ ಜಂಕ್ಷನ್​ನಲ್ಲಿ ಸಂಭವಿಸೋರದನ್ನು ಕಾಣಬಹುದಾಗಿದೆ. ಲೋಡ್​ ಹೊತ್ತುಕೊಂಡು ಬರುತ್ತಿದ್ದ ಲಾರಿಯು ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದಿರೋದನ್ನು ಕಾಣಬಹುದಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಈ ಬೆಚ್ಚಿಬೀಳಿಸುವ ಅಪಘಾತದ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಈ ಮೆಟ್ಟುಪಾಳ್ಯಂ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್​ ಜಾಮ್​ ಉಂಟಾಯ್ತು. ಸ್ಥಳೀಯ ಪೊಲೀಸ್​ ಅಧಿಕಾರಿಗಳು ಬಸ್​ ಹಾಗೂ ಲಾರಿಯಲ್ಲಿದ್ದವರನ್ನು ರಕ್ಷಿಸಲು ಕೂಡಲೇ ರಕ್ಷಣಾ ಪಡೆಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟರು. ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

8 injured in Tamil Nadu as lorry collides with govt bus in Mettupalayam | Video

ಇದನ್ನು ಓದಿ : Top 5 OTT films of this week: ಈ ವಾರ ಓಟಿಟಿಯಲ್ಲಿ ರಿಲೀಸ್ ಆದ ಟಾಪ್ 5 ಚಿತ್ರಗಳು; ನೀವು ವೀಕ್ಷಿಸಬೇಕಾದ ಸರಣಿಗಳಿವು

ಇದನ್ನೂ ಓದಿ : Gujarat Gang Rape : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತರು ಸೇರಿ 9 ಮಂದಿಯ ಬಂಧನ

Comments are closed.