ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಡ್ರಗ್ಸ್ ದಂಧೆಯಲ್ಲಿ ಆರೋಪ ಹೊತ್ತು ಜೈಲು ಸೇರಿದ್ದ ಸಂಜನಾ ಗಲ್ರಾನಿ ಮತಾಂತರ ಗೊಂಡಿದ್ದಾರಾ ? ಹೀಗೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಮಾಡಿ ಆ ಒಂದು ಪೋಸ್ಟ್ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಬಯಲಿಗೆ ಬರುತ್ತಿದ್ದಂತೆಯೇ ನಟಿ ಸಂಜನಾ ವಿರುದ್ದ ಆರೋಪಗಳ ಸುರಿಮಳೆ ಗೈದಿದ್ದ ಪ್ರಶಾಂತ್ ಸಂಬರಗಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದರು. ಇದೀಗ ಸಂಜನಾ ವಿಚಾರವಾಗಿ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿ ದ್ದಾರೆ. ಮಾತ್ರವಲ್ಲ ನಟಿ ಸಂಜನಾ ಧರ್ಮದ ಬಗ್ಗೆಯೇ ತಕರಾರು ಎತ್ತಿದ್ದಾರೆ.

2018ರಲ್ಲಿಯೇ ನಟಿ ಸಂಜನಾ ಲವ್ ಜಿಹಾದ್ ಗೆ ಒಳಗಾಗಿ ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಮಾತ್ರವಲ್ಲ ಅವರು ತಮ್ಮ ಹೆಸರನ್ನು ಮಾಹಿರಾ ಎಂದು ಬದಲಾಯಿಸಿಕೊಂಡಿದ್ದಾರೆಂದು ಪ್ರಶಾಂತ್ ಸಂಬರಗಿ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ಪೋಸ್ಟ್ ಮಾಡಿದ ಬೆನ್ನಲ್ಲೇ ಸಂಜನಾ ಕುರಿತು ಚರ್ಚೆಗಳು ಶುರುವಾಗಿದೆ.