ಸೋಮವಾರ, ಏಪ್ರಿಲ್ 28, 2025
HomeCinemaSarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು...

Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

- Advertisement -

ಕೆಲವೊಂದು ಕಾಕತಾಳಿಯ ಎನ್ನಿಸಿದ್ರೂ ಒಂದು ರೀತಿಯಲ್ಲಿ ವಿಶಿಷ್ಟ ಸಂಗತಿಗಳು ಸಂಯೋಗದಂತೆ ಒಂದಾಗುತ್ತವೆ. ಅಂತಹದ್ದರಲ್ಲಿ ಒಂದು ಸಂಗತಿ ಅಕ್ಟೋಬರ್ ತಿಂಗಳು ಮತ್ತು ಸರ್ಜಾ ಕುಟುಂಬ ( Sarja family). ಹೌದು ಸ್ಯಾಂಡಲ್ ವುಡ್ ನ ತಾರಾ ಫ್ಯಾಮಿಲಿ ಸರ್ಜಾ ಕುಟುಂಬ ಮತ್ತು ಅಕ್ಟೋಬರ್ ತಿಂಗಳಿಗೆ ವಿಶಿಷ್ಟವಾದ ಅನುಬಂಧವಿದೆ. ಈ ಅನುಬಂಧ ಧ್ರುವ ಸರ್ಜಾ ಗೆ ಮಗು ಜನಿಸಿರೋದರೊಂದಿಗೆ ಮತ್ತೊಮ್ಮೆ ಸಾಬೀತಾಗಿದೆ. ಈ ವಿಶಿಷ್ಟ ಅನುಭವ ಏನು ಅಂದ್ರಾ ಅದು ಮತ್ತೆನಲ್ಲ ಅಕ್ಟೋಬರ್ ತಿಂಗಳಿನಲ್ಲೇ ಸರ್ಜಾ ಕುಟುಂಬದ ಹಲವರು ಜನಿಸಿರೋದು.

ಚಿಕ್ಕ ವಯಸ್ಸಿನಲ್ಲೇ ಸ್ಯಾಂಡಲ್ ವುಡ್ ನ್ನು ಅಗಲಿದೆ ನಟ ಚಿರು ಅಕ್ಟೋಬರ್ 17 ರಂದು ಜನಿಸಿದರು. ಪ್ರತಿ ವರ್ಷ ಅಕ್ಟೋಬರ್ 17 ರಂದು ಚಿರು ಬರ್ತಡೆಯನ್ನು ಸರ್ಜಾ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ. ಚಿರು ಅಗಲಿಕೆಯ ನಡುವೆಯೂ ಈ ಸಂಭ್ರಮಾಚರಣೆ ಕಡಿಮೆಯಾಗಿಲ್ಲ. ಇನ್ನು ಚಿರು ಅಗಲಿದ ನಾಲ್ಕು ತಿಂಗಳ ಬಳಿಕ ಜನಿಸಿದ ಚಿರು ಪುತ್ರ ರಾಯನ್ ರಾಜ್ ಸರ್ಜಾ ಕೂಡ ತಂದೆ ಜನಿಸಿದ ಐದು ದಿನಗಳ ಬಳಿಕ ಅಂದ್ರೇ ಅಕ್ಟೋಬರ್ 22 ರಂದು ಜನಿಸಿದರು.

ಕೇವಲ ಚಿರು ಮತ್ತು ರಾಯನ್ ರಾಜ್ ಸರ್ಜಾ ಮಾತ್ರವಲ್ಲ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಕ್ಟೋಬರ್ 6 ರಂದು ಜನಿಸಿದರು. ಈಗ ಅವರ ಮಗಳು ಕೂಡ ಅಕ್ಟೋಬರ್ 2 ರಂದು ದಸರಾ ಸಂಭ್ರಮದಲ್ಲೇ ಭುವಿಗೆ ಬಂದು ತಂದೆ ತಾಯಿಯ ಖುಷಿ ಇಮ್ಮಡಿಸುವಂತೆ ಮಾಡಿದ್ದಾರೆ. ಧ್ರುವ ಸರ್ಜಾ ಸಪ್ಟೆಂಬರ್ ಅಂತ್ಯದಲ್ಲೇ ತಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದಿದ್ದರು. ಆದರೇ ಸಪ್ಟೆಂಬರ್ ತಿಂಗಳು‌ ಮುಗಿದ ಎರಡು ದಿನದ ಬಳಿಕ ಅಕ್ಟೋಬರ್ 2 ರಂದು ಧ್ರುವ್ ಸರ್ಜಾ ಪತ್ನಿ ನಾರ್ಮಲ್ ಡೆಲಿವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸದ್ಯ ಸರ್ಜಾ ಕುಟುಂಬವೂ ಮನೆಗೊಂದು ಹೆಣ್ಣು ಮಗುವಿನ ಆಗಮನವಾದ ಖುಷಿಯಲ್ಲಿದೆ. ಚಿರು ಸರ್ಜಾ ನಿಧನದ ಬಳಿಕ ಸರ್ಜಾ ಕುಟುಂಬ ಸಂಪೂರ್ಣ ದುಃಖದಲ್ಲಿ ಮುಳುಗಿತ್ತು.‌ಕೆಲ ದಿನದ ಹಿಂದೆ ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಮ್ಮ ಕೂಡ ಅಗಲಿದ್ದು, ಸರ್ಜಾ ಕುಟುಂಬ ಮತ್ತಷ್ಟು ನೊಂದಿತ್ತು. ಈಗ ಮತ್ತೆ ಅಜ್ಜಿಯೇ ಮನೆಗೆ ಬಂದಿದ್ದಾರೆ ಎಂದು ಧ್ರುವ್ ಸರ್ಜಾ ಖುಷಿ ಪಡ್ತಿದ್ದಾರೆ.

ಇದನ್ನೂ ಓದಿ : ಒಂದು ಮಗುವಿಗಾಗಿ ಹಂಬಲಿಸಿದ್ರಾ ಧ್ರುವ ಸರ್ಜಾ ಪ್ರೇರಣಾ ದಂಪತಿ ! ಆಕ್ಷ್ಯನ್ ಪ್ರಿನ್ಸ್ ಬಿಚ್ಚಿಟ್ರು ಅಸಲಿ‌ನೋವು

ಇದನ್ನೂ ಓದಿ : ಮೇಘನಾರಾಜ್ ಬದುಕಿನ ಮಿರಾಕಲ್ ಕ್ಷಣ…! ಪೋಟೋ ಜೊತೆ ಕುಟ್ಟಿಮಾ ಬರೆದ್ರು ಹೃದಯಸ್ಪರ್ಶಿ ಸಾಲು…!!

Sarja family and October have a special bond This is a special story of Sarja family

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular