Assam boy spent 23k to meet Virat Kohli : ವಿರಾಟ್ ಕೊಹ್ಲಿ ಸೆಲ್ಫಿಗಾಗಿ ಬರೋಬ್ಬರಿ 23 ಸಾವಿರ ಖರ್ಚು ಮಾಡಿದ ಅಸ್ಸಾಂ ಹುಡುಗ, ಅಭಿಮಾನಿಯ ಆಸೆ ನೆರವೇರಿಸಿದ ಕಿಂಗ್

ಗುವಾಹಟಿ:(Assam boy spent 23k to meet Virat Kohli) “ಕಿಂಗ್” ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಅಭಿಮಾನಿಗಳ ಪಾಲಿನ ನೆಚ್ಚಿನ ಹೀರೋ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗರ ಸಾಲಿನಲ್ಲಿ ಕೊಹ್ಲಿಯೇ ನಂ.1. ಅಭಿಮಾನಿಗಳಿಗೆ ಕೊಹ್ಲಿ ಮೇಲಿರುವ ಕ್ರೇಜ್ ಎಂಥದ್ದು ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಸ್ಸಾಂ ಅಭಿಮಾನಿಯೊಬ್ಬ ಬರೋಬ್ಬರಿ 23 ಸಾವಿರ ರೂಪಾಯಿ ಖರ್ಚು ಮಾಡಿದ್ದಾನೆ.

(Assam boy spent 23k to meet Virat Kohli)ಗುವಾಹಟಿಯ ಶಾಂತಿಪುರ ರಾಹುಲ್ ರಾಯ್ ಎಂಬ ಹುಡುಗ ವಿರಾಟ್ ಕೊಹ್ಲಿ(Virat Kohli)ಯವರ ಅತೀ ದೊಡ್ಡ ಅಭಿಮಾನಿ. ಕಳೆದ 11 ವರ್ಷಗಳಿಂದ ಕೊಹ್ಲಿ ಅವರನ್ನು ಫಾಲೋ ಮಾಡುತ್ತಿರುವ ರಾಹುಲ್ ರಾಯ್, ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯವಾಡಲು ಗುವಾಹಟಿಗೆ ಬಂದ ಕೊಹ್ಲಿ ಅವರನ್ನು ಭೇಟಿ ಮಾಡಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ. ಸೆಪ್ಟೆಂಬರ್ 29ರಂದು ಕೊಹ್ಲಿ ಟೀಮ್ ಇಂಡಿಯಾ ಜೊತೆ ಬೊರ್ಝರ್’ನ ಲೋಕಪ್ರಿಯ ಗೋಪಿನಾಥ್ ಬರ್ದೊಲೊಯ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂಬ ಸುದ್ದಿ ತಿಳಿದ ರಾಹುಲ್ ರಾಯ್, ನೇರವಾಗಿ ಏರ್‌ಪೋರ್ಟ್’ಗೆ ಹೋಗಿದ್ದಾನೆ. ಆದರೆ ಅಲ್ಲಿ ಬಿಗಿ ಭದ್ರತೆಯ ಮಧ್ಯೆ ಕೊಹ್ಲಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

ಹೀಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯ ನಡೆದ ಬರ್ಪಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನಕ್ಕೆ ಹೋಗಿದ್ದಾನೆ. ಭಾರತ ತಂಡದ ಅಭ್ಯಾಸ ವೇಳೆ ಅಲ್ಲಿ ಕೊಹ್ಲಿ ಅವರನ್ನು ಭೇಟಿಯಾಗಲು ಬಯಸಿದ್ದ ಹುಡುಗನಿಗೆ ಅಲ್ಲೂ ನಿರಾಸೆ ಕಾದಿತ್ತು. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹೇಗಾದ್ರೂ ಮಾಡಿ ಭೇಟಿಯಾಗಲೇಬೇಕೆಂದು ನಿರ್ಧರಿಸಿದ ರಾಹುಲ್ ರಾಯ್ ಅದಕ್ಕಾಗಿ ಭರ್ಜರಿ ಪ್ಲಾನ್ ಮಾಡಿದ್ದಾನೆ. ಹುಡುಗನ ಪ್ಲಾನ್ ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ.

ನೇರವಾಗಿ ಟೀಮ್ ಇಂಡಿಯಾ ಆಟಗಾರರು ತಂಗಿದ್ದ ಐಷಾರಾಮಿ ಹೋಟೆಲ್’ಗೆ ಹೋದ ರಾಹುಲ್ ರಾಯ್ ಅಲ್ಲಿ ಒಂದು ದಿನಕ್ಕೆ ರೂಮ್ ಒಂದನ್ನು ಬಾಡಿಗೆಗೆ ಪಡೆದಿದ್ದಾನೆ. ಅಂದ ಹಾಗೆ ಆ ಹೋಟೆಲ್’ನಲ್ಲಿ ಒಂದು ರಾತ್ರಿ ತಂಗಲು ಆ ಹುಡುಗ ಪಾವತಿಸಿದ ಮೊತ್ತವೆಷ್ಟು ಗೊತ್ತಾ.. 23,400 ರೂಪಾಯಿ. ಕೊನೆಗೂ ಕೊಹ್ಲಿ ಅವರನ್ನು ಭೇಟಿ ಮಾಡುವ ಹುಡುಗನ ಕನಸು ನನಸಾಗಿದೆ.

“ಕೊಹ್ಲಿ ಅವರಿಗಾಗಿ ಹೋಟೆಲ್ ಲಾಂಜ್’ನಲ್ಲಿ ಬೆಳಗ್ಗೆಯಿಂದಲೇ ಕಾದು ಕೂತಿದ್ದೆ. ವಿರಾಟ್ ನಡೆದುಕೊಂದು ಬಂದಾಗ ಅವರ ಬಳಿ ಹೋಗಲು ಪ್ರಯತ್ನಿಸಿದೆ. ಅವರು ದೂರದಿಂದಲೇ ನನ್ನನ್ನು ಗಮನಿಸಿ ಬ್ರೇಕ್ ಫಾಸ್ಟ್ ಏರಿಯಾಗೆ ಬರುವಂತೆ ಸನ್ನೆ ಮಾಡಿದರು. ಅಲ್ಲಿ ನನ್ನ ಜೀವನದ ಅತೀ ದೊಡ್ಡ ಕನಸು ನನಸಾಯಿತು. ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡೆ, ಅವರ ಫೋಟೋ ಫ್ರೇಮ್’ಗೆ ಆಟೋಗ್ರಾಫ್ ಹಾಕಿಸಿಕೊಂಡೆ” ಎಂದು ರಾಹುಲ್ ರಾಯ್ ಸಂತಸ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ RCB ಸ್ಟಾರ್ ಪಾಟಿದಾರ್

ಇದನ್ನೂ ಓದಿ : Road Safety World Series 2022: ಸಚಿನ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಇಂಡಿಯಾ ಲೆಜೆಂಡ್ಸ್

ಇದನ್ನೂ ಓದಿ : Mayank Agarwal : ಡಿಯರ್ ಮಯಾಂಕ್ ; “ಹೀಗೇ ಆಡಿದ್ರೆ ಟೀಮ್ ಇಂಡಿಯಾ ಕಂಬ್ಯಾಕ್ ಕನಸು ಮರೆತು ಬಿಡಿ”

ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ ಸ್ಫೋಟಕ ಅಜೇಯ 49 ರನ್ ಗಳಿಸಿದ್ದರು. 16 ರನ್’ಗಳಿಂದ ಪಂದ್ಯ ಗೆದ್ದ ಭಾರತ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ. ಸರಣಿಯ ಕೊನೆಯ ಪಂದ್ಯ ನಾಳೆ (ಅಕ್ಟೋಬರ್ 4) ಇಂದೋರ್’ನಲ್ಲಿ ನಡೆಯಲಿದೆ.

Assam boy who spent 23 thousand for Virat Kohli selfie, king fulfilled fan’s wish

Comments are closed.