ಭಾನುವಾರ, ಏಪ್ರಿಲ್ 27, 2025
HomeCinemaಶಶಿಕುಮಾರ್ ಪುತ್ರನಿಗೆ ಕೊಡಗಿನ ಬೆಡಗಿಯ ಹಾರೈಕೆ…! ಅಕ್ಷಿತ್ ಗೆ ರಶ್ಮಿಕಾ ಕೊಟ್ರು ಫುಲ್ ಮಾರ್ಕ್ಸ್…!!

ಶಶಿಕುಮಾರ್ ಪುತ್ರನಿಗೆ ಕೊಡಗಿನ ಬೆಡಗಿಯ ಹಾರೈಕೆ…! ಅಕ್ಷಿತ್ ಗೆ ರಶ್ಮಿಕಾ ಕೊಟ್ರು ಫುಲ್ ಮಾರ್ಕ್ಸ್…!!

- Advertisement -

ಸ್ಯಾಂಡಲ್ ವುಡ್ ನಲ್ಲಿ ಒಂದುಕಾಲದಲ್ಲಿ ಡ್ಯಾನ್ಸ್ ಕಿಂಗ್ ಆಗಿ ಮೆರೆದವರು ಸುಪ್ರೀಂ ಹೀರೋ ಶಶಿಕುಮಾರ್. ಬಹಳ ವರ್ಷದ ಬಳಿಕ ಶಶಿಕುಮಾರ್ ಮತ್ತೆ ಇಂಡಸ್ಟ್ರಿಗೆ ಮರಳಿದ್ದು ಜೊತೆಗೆ ಮಗನ ಬಹುಭಾಷಾ ಸಿನಿಮಾ ತಂದಿದ್ದಾರೆ.

ತಮ್ಮ ಮುಗ್ಧ ನಟನೆ ಹಾಗೂ ಮನೋಜ್ಞ ಡ್ಯಾನ್ಸ್ ನಿಂದಲೇ ಮನಸೆಳೆದವರು ಶಶಿಕುಮಾರ್. ಆದರೇ ಬಹುಕಾಲ ಇಂಡಸ್ಟ್ರಿಯಲ್ಲಿ ಉಳಿಯಲಿಲ್ಲ. ಆದರೇ ಈಗ ಮಗನನ್ನು ಹೀರೋ ಮಾಡಲು ಶಶಿಕುಮಾರ್ ಸಜ್ಜಾಗಿದ್ದು, ಅಕ್ಷಿತ್ ಅಭಿನಯದ ಸಿನಿಮಾ ಏಕಕಾಲಕ್ಕೆ ಹಲವು ಭಾಷೆಯಲ್ಲಿ ತೆರೆಗೆ ಬರಲಿದೆ.

ಸೀತಾಯಣ ಚಿತ್ರದಲ್ಲಿ ಅಕ್ಷಿತ್ ಕುಮಾರ್ ಮೊದಲ ಬಾರಿಗೆ ಬಣ್ಣ ಹಚ್ಚಿ ನಟನೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಹಾಡನ್ನು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದು, ಸಂಜೆ ಗಗನ ಅನ್ನೋ ಹಾಡಿನ ಜೊತೆ ತೆಲುಗು-ತಮಿಳು ಹಾಡುಗಳನ್ನು ರಿಲೀಸ್ ಮಾಡಿದ್ದಾರೆ.

ಟ್ವೀಟರ್ ನಲ್ಲಿ ಹಾಡು ರಿಲೀಸ್ ಮಾಡಿರುವ ರಶ್ಮಿಕಾ ನನಗೆ ಈ ಹಾಡು ತುಂಬ ಇಷ್ಟವಾಗಿದೆ ಎಂದಿದ್ದು, ಅಕ್ಷಿತ್ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಅಲ್ಲದೇ ಅಕ್ಷಿತ್ ಶಶಿಕುಮಾರ್ ಹಾಗೂ ಚಿತ್ರತಂಡ ಕ್ಕೆ ಶುಭಕೋರಿದ್ದಾರೆ. ಸೀತಾಯಣ ಚಿತ್ರದ ಟೀಸರ್ ನ್ನು ತೆಲುಗಿನ ನಟ ರವಿತೇಜ್ ರಿಲೀಸ್ ಮಾಡಿದ್ದು ಅಕ್ಷಿತ್ ಸಿನಿಕೆರಿಯರ್ ಗೆ ಶಿವಣ್ಣ ಕೂಡ ಶುಭ ಹಾರೈಸಿದ್ದರು.

ಸದ್ಯ ಅಕ್ಷಿತ್ ನಟನೆಯ ಈ ಚಿತ್ರ ಮೂರು ಭಾಷೆಯಲ್ಲಿ ತೆರೆಗೆ ಬರಲಿದೆ. ಶಶಿಕುಮಾರ್ ಮತ್ತೊಮ್ಮೆ ಮಗನ ಮೂಲಕ ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ ಅಂತ ಅಭಿಮಾನಿಗಳು ಖುಷಿಯಾಗಿದ್ದಾರೆ.

RELATED ARTICLES

Most Popular