ಎಲ್ಲರ ಎದುರೇ ವರನಿಗೆ ಎಕೆ-47 ಗಿಫ್ಟ್….! ಮದುವೆಯ ಉಡುಗೊರೆ ನೋಡಿ ಬೆರಗಾದ್ರು ಜನ…!!

ಇಸ್ಲಾಮಾಬಾದ್: ಮದುವೆ ಮನೇಲಿ ವಧು-ವರರಿಗೆ ಚಿನ್ನ,ಒಡವೆ,ಕ್ಯಾಶ್ ಉಡುಗೊರೆಯಾಗಿ ನೀಡೋದನ್ನು ನೋಡಿರ್ತೀರಾ. ಕೆಲವೆಡೆ ಗಿಡ,ಪುಸ್ತಕ ಕೊಟ್ಟು ಹರಸ್ತಾರೆ. ಆದರೇ ಇಲ್ಲೊಂದು ಮದುವೆಲೀ ವರನಿಗೆ ಸಿಕ್ಕ ಗಿಫ್ಟ್ ನೋಡಿ ಜನ ದಂಗಾಗಿದ್ದಾರೆ.

ಇಸ್ಲಾಮಾಬಾದ್ ನ ಮದುವೆ ಮನೆಯೊಂದರಲ್ಲಿ ವರನಿಗೆ ಆತನ ಸಹೋದರ ಸಂಬಂಧಿಯೊಬ್ಬರು ಮದುವೆ ಮಂಟಪದಲ್ಲೇ ಗನ್ ಗಿಫ್ಟ್ ಮಾಡಿ ನೋಡುಗರ ಎದೆ ಝಲ್ ಎನ್ನಿಸುವಂತೆ ಮಾಡಿದ್ದಾರೆ.

ಹೌದು ವಧು-ವರನಿಗೆ ವಿಶ್ ಮಾಡಲು ವೇದಿಕೆ ಮೇಲೆ ಬರೋ ಈ ಮಹಿಳೆ ಮೊದಲು ವರನ ಹಣೆಗೆ ಒಂದು ಮುತ್ತಿಡುತ್ತಾರೆ. ಬಳಿಕ ಅಲ್ಲಿಯೇ ಆತನಿಗೆ ಎಲ್ಲರ ಎದುರೇ ಎಕೆ ೪೭ ಗನ್ ಉಡುಗೊರೆಯಾಗಿ ನೀಡುತ್ತಾರೆ. ವರನೂ ಅಷ್ಟೇ ಯಾವುದೇ ಅಳುಕಿಲ್ಲದೇ ಗನ್ ಸ್ವೀಕರಿಸಿ ಪೋಟೋಗೆ ಪೋಸು ನೀಡುತ್ತಾನೆ.

https://www.youtube.com/watch?v=AJq7tlStUZU

ಈ ವಿಡಿಯೋವನ್ನು ಸೈಯ್ಯದ್ ಎಂಬುವವರು ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದು ಇದು ಇಸ್ಲಾಮಾಬಾದ್ ನಲ್ಲಿ ನಡೆದ ಮದುವೆಯಲ್ಲಿ ವರನಿಗೆ ಸಿಕ್ಕ ಉಡುಗೊರೆಯ ದೃಶ್ಯ ಎಂದಿದ್ದಾರೆ. ಅಷ್ಟೇ ಅಲ್ಲ ಎಲ್ಲರಿಗೂ ಅವರನ್ನು ಅರ್ಥ ಮಾಡಿಕೊಳ್ಳುವ ಅತ್ತೆ ಸಿಗಬೇಕು ಎಂಬರ್ಥದ ಬರಹ ಬರೆದಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲವರು ಇಸ್ಲಾಮಾಬಾದ್ ನ ಈ ವೀಡಿಯೋ ನೋಡಿ ಪಾಕಿಸ್ತಾನ್ ಅಂದ ಮೇಲೆ ಅವರ ಲೆವೆಲ್ ಗೆ ತಕ್ಕ ಹಾಗೇ ಇರಬೇಕಲ್ಲವಾ ಮದುವೆ ಉಡುಗೊರೆ ನೂ ಅಂತ ಕಮೆಂಟ್ ಮಾಡ್ತಿದ್ದಾರೆ.

Comments are closed.