ಕಿರುತೆರೆಯ ಜನಪ್ರಿಯ ನಟಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರ ನಡೆಸಿದ ವಿಡಿಯೋವನ್ನು ಚಿತ್ರೀಕರಿಸಿ ಪರಿಚತ ವ್ಯಕ್ತಿಯೇ ಇದೀಗ ಬ್ಲ್ಯಾಕ್ ಮೇಲ್ ಮಾಡಿದ್ದು, ನಟಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಬೆಂಗಾಲಿ ಭಾಷೆಯ ಸಾಥ್ ಭಾಯಿ ಚಂಪಾ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿ ಪಶ್ಚಿಮ ಬಂಗಾಲದ ಬಿಜೋಯ್ ಗನ ಅಪಾರ್ಟ್ ಮೆಂಟ್ ನಲ್ಲಿ ವಾಸಿದ್ದು, ತನ್ನ ಮನೆಗೆ ಪರಿಚಿತ ವ್ಯಕ್ತಿ ಸಹಾಯ ಕೇಳಿಬಂದಿದ್ದ. ಮನೆಯಲ್ಲಿ ತಾನು ಒಬ್ಬಂಟಿಯಾಗಿದ್ದಾಗ ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ವಿಡಿಯೋ ಚಿತ್ರೀಕರಿಸಿ ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ ಎಂದು ನಟಿ ದೂರಿದ್ದಾಳೆ.

ನಟಿ ದೂರು ನೀಡಿದ ಬೆನ್ನಲ್ಲೇ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ವ್ಯಕ್ತಿ ಸಹಾಯವನ್ನು ಕೇಳಿದ್ರೆ ಆತನಿಗೆ ಆನ್ ಲೈನ್ ಮೂಲಕ ಹಣವನ್ನು ವರ್ಗಾಯಿಸುವ ಬದಲು ಮನೆಗೆ ಕರೆಯಿಸಿಕೊಂಡಿದ್ಯಾಕೆ ಅಂತಾ ಜನರು ಪ್ರಶ್ನಿಸುತ್ತಿದ್ದಾರೆ.

ಇನ್ನೊಂದೆಡೆ ನಟಿ ಹಾಗೂ ಅತ್ಯಾಚಾರ ಮಾಡಿರುವ ವ್ಯಕ್ತಿ ಇಬ್ಬರೂ ಕೂಡ ಸ್ನೇಹಿತರಾಗಿದ್ದು, ಅವರಿಬ್ಬರ ನಡುವೆ ಇತ್ತೀಚಿಗೆ ವೈಮಸ್ಸು ಉಂಟಾಗಿತ್ತು. ಇದೇ ಕಾರಣದಿಂದಲೇ ಈ ಘಟನೆ ನಡೆದಿರಬಹುದು ಎಂದು ಯುವತಿಯ ಆಪ್ತರು ತಿಳಿಸಿದ್ದಾರೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಜಾದವ್ ಪುರ ಠಾಣೆಯ ಪೊಲೀಸರು ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆರೋಪಿಯ ಮೊಬೈಲ್ ವಶಕ್ಕೆ ಪಡೆದು ವಿಡಿಯೋ ಚಿತ್ರೀಕರಿಸಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬರುವುದಕ್ಕೆ ಸಾಧ್ಯ.