ಹಂದಟ್ಟು, ಮೂಡಹಡುವಿನಲ್ಲಿ ಸೀಲ್ ಡೌನ್ : ಹೋಟೆಲ್, ಬ್ಯಾಂಕ್ ಸಿಬ್ಬಂದಿಗೆ ಕೊರೊನಾ

0

ಬ್ರಹ್ಮಾವರ : ಇಬ್ಬರು ಹೋಟೆಲ್ ಸಿಬ್ಬಂದಿ ಹಾಗೂ ಓರ್ವ ಬ್ಯಾಂಕಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಾಲಿಗ್ರಾಮದ ಹೋಟೆಲ್, ಹಂದಟ್ಟು ಹಾಗೂ ಮೂಡಹಡುವಿನಲ್ಲಿರುವ ಸೋಂಕಿತರ ಮನೆಗಳನ್ನು ಕೋಟದ ಕಂದಾಯ ನಿರೀಕ್ಷಕರಾದ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಸಾಲಿಗ್ರಾಮದಲ್ಲಿರುವ ಹೋಟೆಲ್ ನಲ್ಲಿರುವ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಹಾಗೂ ಸಿಬ್ಬಂದಿಯ ಕೋಟತಟ್ಟು ಹಂದಟ್ಟುವಿನಲ್ಲಿರುವ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಇನ್ನು ಖಾಸಗಿ ಬ್ಯಾಂಕಿನ ಮೂಡುಗಿಳಿಯಾರು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೂಡಹಡುವಿನಲ್ಲಿರುವ ಸಿಬ್ಬಂದಿಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕೊರೊನಾ ಸೋಂಕಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Leave A Reply

Your email address will not be published.