ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಸಿನಿಮಾ ನೋಡೋದಕ್ಕೆ ಥಿಯೇಟರ್ ಗಳೂ ಬಂದ್ ಆಗಿವೆ. ಹೀಗಾಗಿಯೇ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿಭಿನ್ನ ಸಿನಿಮಾವನ್ನು ಟಿಜಿಟಲ್ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡೋದಕ್ಕೆ ಹೊರಟಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭಿನ್ನ, ವಿಭಿನ್ನ ಚಿತ್ರಗಳನ್ನು ನಿರ್ದೇಶಿಸೋದು ಹೊಸತೇನಲ್ಲಾ. ಅಂತೆಯೇ ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿರೋ ರಾಮ್ ಗೋಪಾಲ್ ವರ್ಮಾ ಸೆಕ್ಸ್ ಹಾಗೂ ಕ್ರೈಂ ಇಟ್ಟುಕೊಂಡು ಸಿನಿಮಾವೊಂದನ್ನು ಸಿದ್ದಪಡಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ‘ಸೆಕ್ಸ್ ಅಂಡ್ ಕ್ರೈಂ ‘ಕ್ಲೈಮಾಕ್ಸ್’ ಚಿತ್ರದ ಟೀಸರ್ ಬಿಡುಗಡೆ ಮಾಡಿರೋ ರಾಮ್ ಗೋಪಾಲ್ ವರ್ಮಾ ಚಿತ್ರದ ಕುರಿತು ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಯೂಟ್ಯೂಬ್ ನಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈ ಹಿಂದೆ ರಾಮ್ ಗೋಪಾಲ್ ವರ್ಮಾ ಹಾಗೂ ಮಿಯಾ ಮಲ್ಕೋವಾ ಕಾಂಬಿನೇಷನ್ ನಲ್ಲಿ ಗಾಡ್ ಸೆಕ್ಸ್ ಆಂಡ್ ಟ್ರುಥ್ ಅನ್ನೋ ಸಿನಿಮಾ ಮಾಡಿದ್ರು. ಇದೀಗ ಸೆಕ್ಸ್ ಆಂಡ್ ಕ್ರೈಂ ಕ್ಲೈಮ್ಯಾಕ್ಸ್ ಹೇಳೋದಕ್ಕೆ ಹೊರಟಿದೆ ಈ ಜೋಡಿ.

ಅಲ್ಲದೇ ಚಿತ್ರದ ಸಾಂಗ್ ಪ್ರೋಮೋವನ್ನು ಕೂಡ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದ ಕಾಮ ಮತ್ತು ಅಪರಾಧ ಕುರಿತಾದ ಚಿತ್ರದ ಹಾಡಿನ ಪ್ರೋಮೋ ಬಿಡುಗಡೆ ಮಾಡಲಾಗಿದೆ. 1 ನಿಮಿಷದ ಪ್ರೋಮೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ ನಟನೆಗೆ ಪಡ್ಡೆಹೈಕಳು ಫಿದಾ ಆಗಿದ್ದಾರೆ.