ಪೆಟ್ರೋಲ್ ಹಾಕಿಸೋ ಮುನ್ನ ಎಚ್ಚರ… ಎಚ್ಚರ : ನಿಮ್ಮ ಕಣ್ಮುಂದೆಯೇ ಜಂಪ್ ಆಗುತ್ತೆ 30 ರೂಪಾಯಿ !

0

ಧಾರವಾಡ : ಸಾಮಾನ್ಯವಾಗಿ ಗ್ರಾಹಕರು ಹಣಕೊಟ್ಟು ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ತಾರೆ. ಆದ್ರೆ ಪೆಟ್ರೋಲ್ ಪಂಪ್ ಮೀಟರ್ ಓಡಿದನ್ನೇ ನಂಬಿ ಹಣಕೊಟ್ಟು ಬರ್ತಾರೆ. ಆದ್ರೆ ಬಂಕ್ ಸಿಬ್ಬಂಧಿ ಸರಿಯಾಗಿ ಪೆಟ್ರೋಲ್ ಹಾಕಿದ್ರಾ, ಇಲ್ವಾ ಅನ್ನೋದು ಗೊತ್ತೆ ಆಗೋದಿಲ್ಲ.

ಇದನ್ನೇ ಬಂಡವಾಳ ಮಾಡಿಕೊಂಡಿರೋ ಪೆಟ್ರೋಲ್ ಬಂಕ್ ಮಾಲೀಕರು ಗ್ರಾಹಕರಿಗೆ ವಂಚಿಸುತ್ತಿರೋದು ಬಯಲಾಗಿದೆ. ಅದ್ರಲ್ಲೂ ಗ್ರಾಹಕರ ಕಣ್ಣ ಎದುರಲ್ಲೇ ಬರೋಬ್ಬರಿ 30 ರೂಪಾಯಿ ಜಂಪ್ ಆಗೋ ವಿಡಿಯೋ ಇದೀಗ ವೈರಲ್ ಆಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ದುಡಿಮೆಯಿಲ್ಲದೇ ವಾಹನಗಳಿಗೆ ಪೆಟ್ರೋಲ್ ಹಾಕೋದಕ್ಕೂ ಹಿಂಜರಿಯುತ್ತಿದ್ದಾರೆ. ಆದರೆ ಧಾರವಾಡದ ಸಲಕಿನಕೊಪ್ಪದಲ್ಲಿರುವ ನಿವೃತ್ತ ಡಿವೈಎಸ್ ಪಿ ಎಂ.ಜೆ.ತಡಕೋಳ ಅವರ ಮಕ್ಕಳ ಮಾಲೀಕತ್ವದ ಬಂಕ್ ನಲ್ಲಿ ಗ್ರಾಹಕರಿಗೆ ವಂಚಿಸಲಾಗುತ್ತಿದೆ.

ಗ್ರಾಹಕರು ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸುವಾಗ ಒಮ್ಮಿಂದೊಮ್ಮೆಲೆ ಮೀಟರ್ 30 ರೂಪಾಯಿ ಜಂಪ್ ಆಗುತ್ತಿದೆ. ಕಳೆದ ಹಲವು ಸಮಯಗಳಿಂದಲೂ ಈ ಗೋಲ್ಮಾಲ್ ನಡೆಯುತ್ತಲೇ ಇತ್ತು. ಆದ್ರೀಗ ಗ್ರಾಹಕರ ಕೈಯಲ್ಲಿ ಬಂಕ್ ಮಾಲೀಕರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಧಾರವಾಡದ ಪೆಟ್ರೋಲ್ ಬಂಕ್ ಗಳಲ್ಲಿ ಗೋಲ್ಮಾಲ್ ಹೇಗೆ ನಡೆಯುತ್ತೆ ಅನ್ನೋದನ್ನು ನೀವೆ ನೋಡಿ.

https://youtu.be/nyOrf3H1H0s

ಪೆಟ್ರೋಲ್ ಬಂಕ್ ನಲ್ಲಿ ಕಡಿಮೆ ಪೆಟ್ರೋಲ್ ಹಾಕಿ ಜನರಿಗೆ ವಂಚನೆ ಮಾಡುತ್ತಿರೋ ಕುರಿತು ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯಿದ್ರೂ ಕಣ್ಮುಚ್ಚಿ ಕುಳಿತಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಜನರಿಗೆ ವಂಚಿಸುತ್ತಿರೋ ಬಂಕ್ ಮಾಲೀಕರ ವಿರುದ್ದ ಕ್ರಮಕೈಗೊಳ್ಳಬೇಕಿದೆ. ಪೊಲೀಸ್ ಇಲಾಖೆ ಈ ಕುರಿತು ಕ್ರಮಕೈಗೊಳ್ಳುತ್ತಾ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

https://youtu.be/KjEgC9T7mFQ
Leave A Reply

Your email address will not be published.