ಮಂಗಳವಾರ, ಏಪ್ರಿಲ್ 29, 2025
HomeCinemaShah Rukh Khan film Pathaan : 2023 ಕ್ಕೆ ತೆರೆಗೆ ಬರ್ತಿದ್ದಾನೆ ಶಾರೂಖ್‌ ಖಾನ್‌...

Shah Rukh Khan film Pathaan : 2023 ಕ್ಕೆ ತೆರೆಗೆ ಬರ್ತಿದ್ದಾನೆ ಶಾರೂಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ

- Advertisement -

ಕಳೆದ ಎರಡು ಮೂರು ವರ್ಷಗಳಿಂದ ಬಾಧಿಸಿದ್ದ ಕರೋನಾದಿಂದ ಕಂಗೆಟ್ಟ ಸಿನಿಪ್ರಿಯರಿಗೆ ಎಲ್ಲಾ ಭಾಷೆಗಳಲ್ಲೂ ತೆರೆ ಕಾಣ್ತಿರೋ ಬಿಗ್ ಬಜೆಟ್ ಸಿನಿಮಾಗಳು ಒಂದಾದ ಮೇಲೊಂದರಂತೆ ಧಮಾಕಾ ತರುತ್ತಿವೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಬಾಲಿವುಡ್‌ ಬಾದ್ ಶಾ (Shah Rukh Khan) ತಮ್ಮ ಬಹುನೀರಿಕ್ಷಿತ ಪಠಾಣ್ (Pathaan) ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಹೊಸ ವರ್ಷಕ್ಕೆ ಅಂದ್ರೇ 2023 ಕ್ಕೆ ಶಾರೂಕ್ ಸಿನಿಮಾ ತೆರೆಗೆ ಬರಲಿದೆ.

ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ಸ್ ಸಿನಿಮಾ ಪಠಾಣ್ 2023 ರ ಜನವರಿ 25 ರಂದು ತೆರೆಗೆ ಬರಲಿದೆ ಎಂದು ಶಾರೂಕ್ ಖಾನ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ನನಗೆ ಗೊತ್ತು ಈಗಲೇ ಲೇಟಾಗಿದೆ. ಆದರೆ ದಿನಾಂಕವನ್ನು ನೆನಪಿಡಿ ನಿಮ್ಮನ್ನು 2023 ರ ಜನವರಿ 25 ರಂದು ಥಿಯೇಟರ್ ನಲ್ಲಿ ನೋಡಲು ಬಯಸುತ್ತೇನೆ. ಹಿಂದಿ,ತಮಿಳು ಮತ್ತು ತೆಲುಗಿನಲ್ಲಿ ಎಂದು ಕಿಂಗ್ ಖಾನ್ ವಿವರಣೆ ನೀಡಿದ್ದಾರೆ.

ಈ ಟ್ವೀಟ್ ಜೊತೆ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ ಹಾಗೂ ಶಾರೂಕ್ ದೃಶ್ಯಗಳಿರುವ ಚಿಕ್ಕ ಟ್ರೇಲರ್ ಶೇರ್ ಮಾಡಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಶಾರೂಕ್ ಖಾನ್ ಬಾಲಿವುಡ್ ಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. 2018 ರಲ್ಲಿ ಬಿಡುಗಡೆಯಾದ ಝೀರೋ ಬಳಿಕ ಶಾರೂಕ್ ಬೇರಾವುದೇ ಚಿತ್ರ ತೆರೆಗೆ ಬಂದಿರಲಿಲ್ಲ.

ಬಿಡುಗಡೆ ಡೇಟ್ ಜೊತೆ ರಿಲೀಸ್ ಮಾಡಿರೋ ಟೀಸರ್ ನಲ್ಲಿ ಜಾನ್ ಅಬ್ರಹಾಂ ಹಾಗೂ ದೀಪಿಕಾ ಪಡುಕೋಣೆ ಲುಕ್ ಮಾತ್ರ ರಿವೀಲ್ ಮಾಡಲಾಗಿದೆ. ಶಾರೂಕ್ ಖಾನ್ ಲುಕ್ ನ್ನು ರಿವೀಲ್ ಮಾಡಲಾಗಿಲ್ಲ. ಯಶ್ ರಾಜ್ ಫಿಲ್ಮ್‌ ನಿರ್ಮಿಸಿದ ಈ ಸಿನಿಮಾದಲ್ಲಿ ಶಾರೂಕ್ ಖಾನ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಶಾರೂಕ್ ಖಾನ್ ಪುತ್ರನ ಅರೇಸ್ಟ್, ಕರೋನಾ ಸೇರಿದಂತೆ ನಾನಾ ಕಾರಣದಿಂದ ಶೂಟಿಂಗ್ ವಿಳಂಬವಾಗಿತ್ತು. ಇದಾದ ಬಳಿಕ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಲು ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿತ್ತು. 2021 ರಲ್ಲೇ ತೆರೆ ಕಾಣ ಬೇಕಿದ್ದ ಸಿನಿಮಾ ಇದೀಗ ಬರೋಬ್ಬರಿ ಮತ್ತೆ ಒಂದು ವರ್ಷಗಳ ಕಾಯುವಿಕೆ ಬಳಿಕ 2023 ರ ಹೊಸವರ್ಷದ ಕೊಡುಗೆಯಾಗಿ ತೆರೆಗೆ ಬರಲಿದೆ.

ಇದನ್ನೂ ಓದಿ : Shahid Kapoor : ಶಾಹಿದ್ ಸಹೋದರ ಸನಾ ಅದ್ದೂರಿ ಶಾದಿಗೆ ಸಾಕ್ಷಿಯಾದ ಬಾಲಿವುಡ್

ಇದನ್ನೂ ಓದಿ : ಭೀಮ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೆ ಬಂದ ದುನಿಯಾ ವಿಜಯ್

(Shah Rukh Khan new film Pathaan release date announced)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular