PUC EXAMS TIME TABLE 2022 : ದ್ವಿತೀಯ ಪಿಯುಸಿ ಪರೀಕ್ಷೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಕೊರೋನಾ ಸಂಕಷ್ಟ ದಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ‌ ಮರಳುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಈಗ ಪರೀಕ್ಷೆಗಳದ್ದೇ ಸದ್ದು. ಸದ್ಯ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಸಿದ್ಧತೆಗಳು ಚುರುಕುಗೊಂಡಿರುವ ಬೆನ್ನಲ್ಲೇ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಷ್ಕೃತ ದ್ವೀತಿಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ (PUC EXAMS TIME TABLE 2022) ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆ ಮಾಡಲಾಗಿದ್ದು,ಮತ್ತೊಂದು ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ದ್ವಿತೀಯ ಪಿಯುಸಿ (PUC Exam ) ಹಾಗೂ ಜೆಇಇ (JEE EXAMS) ಪರೀಕ್ಷೆಯು ಒಟ್ಟೊಟ್ಟಿಗೆ ಬಂದಿರುವ ಕಾರಣ ಪರೀಕ್ಷೆ ದಿನಾಂಕ ಮುಂದೂಡಿಕೆ ಮಾಡಿರುವ ಶಿಕ್ಷಣ ಇಲಾಖೆ ಏಪ್ರಿಲ್ 22ರಿಂದ ಮೇ 5ರವರೆಗೆ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಲ್ಲದೇ ಈ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರವರೆಗೆ ಅವಕಾಶ ಕಲ್ಪಿಸಿದೆ. ಈ ಮೊದಲು ಪದವಿ ಪೂರ್ವ ಶಿಕ್ಷಣ ಇಲಾಖೆ ಏಪ್ರಿಲ್ 16 ಇಂದ ಮೇ 11 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗಧಿ ಮಾಡಿ ಆದೇಶ ಹೊರಡಿಸಿತ್ತು.

ಪರಿಷ್ಕೃತ ಪಿಯುಸಿ ವೇಳಾಪಟ್ಟಿ (PUC EXAMS TIME TABLE 2022)

ಏ. 22 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 – ಹಿಂದಿ
ಏ. 25 – ಅರ್ಥಶಾಸ್ತ್ರ
ಏ. 26 – ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ
ಏ. 27 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏ. 28 – ಕನ್ನಡ, ಅರೇಬಿಕ್
ಏ. 30 – ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮೇ 2 – ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 4 – ಇಂಗ್ಲಿಷ್
ಮೇ 5 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ಮೇ 6 – ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ
ಮೇ 7 – ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮೇ 9 – ಇತಿಹಾಸ, ಭೌತಶಾಸ್ತ್ರ
ಮೇ 11 – ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ಪರೀಕ್ಷೆ ನಡೆಯಲಿದೆ.

Karnataka Second PUC EXAMS TIME TABLE 2022 released 1

ಇದನ್ನೂ ಓದಿ : ICAI CA 2021 result : ಸಿಎ ಫಲಿತಾಂಶ ಪ್ರಕಟ : ರಿಸಲ್ಟ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ಮಾರ್ಚ್‌ 4 ರಂದು ರಾಜ್ಯದಾದ್ಯಂತ ಅನುದಾನಿತ ಶಾಲಾ, ಕಾಲೇಜುಗಳು ಬಂದ್‌

(Karnataka Second PUC Exam 2022 Timetable released)

Comments are closed.