ಅಯೋಧ್ಯೆ:Shah Rukh Khan : ಪಠಾಣ್ ಸಿನಿಮಾದ ಬೇಶರಂ ರಂಗ್ ಹಾಡು ದೇಶದಲ್ಲಿ ಭಾರೀ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕನಿ ಧರಿಸಿದ್ದು ಬಲಪಂಥೀಯರ ಕಣ್ಣು ಕೆಂಪಗಾಗಿಸಿತ್ತು. ಹೀಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂಬ ಕೂಗು ಅನೇಕ ಕಡೆಗಳಲ್ಲಿ ಕೇಳಿ ಬರ್ತಿದೆ. ಇದೀಗ ಶಾರೂಕ್ ಖಾನ್ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಕಿಂಗ್ಖಾನ್ರನ್ನು ಜೀವಂತ ಸುಡೋದಾಗಿ ಅಯೋಧ್ಯೆಯಲ್ಲಿ ಧರ್ಮದರ್ಶಿಯೊಬ್ಬರು ಬೆದರಿಕೆ ಹಾಕಿದ್ದಾರೆ. ಶಾರೂಕ್ ಖಾನ್ರ ಮುಂಬರುವ ಸಿನಿಮಾ ಪಠಾಣ್ನ ಬೇಶರಂ ಹಾಡಿನ ವಿರುದ್ಧ ಪ್ರತಿಭಟನೆ ನಡೆಸಿದ ಅವರು ಈ ಸಿನಿಮಾವನ್ನು ಉತ್ತರ ಪ್ರದೇಶದಲ್ಲಿ ಬಿಡುಗಡೆ ಮಾಡಿದಲ್ಲಿ ಥಿಯೇಟರ್ಗಳಿಗೆ ಬೆಂಕಿ ಹಚ್ಚೋದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾರೂಕ್ ಖಾನ್ರಿಗೆ ಈ ರೀತಿಯ ಎಚ್ಚರಿಕೆ ನೀಡಿರುವ ವ್ಯಕ್ತಿಯನ್ನು ಚಾವ್ನಿಯ ಮಹಂತ್ ಪರಮಹಂಸ ಆಚಾರ್ಯ ಎಂದು ಗುರುತಿಸಲಾಗಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯು ಹಿಂದೂ ಧರ್ಮವನ್ನು ಅವಮಾನಿಸಿದೆ ಎಂದು ಮಹಂತ್ ಪರಮಹಂಸ ಆಚಾರ್ಯ ಗುಡುಗಿದ್ದಾರೆ. ಪಠಾಣ್ ಸಿನಿಮಾದ ಪೋಸ್ಟರ್ಗಳನ್ನು ಹರಿದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಸನಾತನ ಧರ್ಮದ ಜನರು ಈ ಬಗ್ಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಾವು ಶಾರೂಕ್ ಖಾನ್ ಮುಖ್ಯ ಭೂಮಿಕೆಯ ಈ ಸಿನಿಮಾದ ಪೋಸ್ಟರ್ಗಳನ್ನು ಸುಟ್ಟು ಹಾಕಿದ್ದೇವೆ. ಒಂದು ವೇಳೆ ನನಗೆ ಶಾರೂಕ್ ಖಾನ್ರನ್ನು ಮುಖಾಮುಖಿ ಭೇಟಿಯಾಗುವ ಅವಕಾಶ ಸಿಕ್ಕರೆ ಅವರನ್ನು ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಮಹಂತ್ ಪರಮಹಂಸ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ. ಇದು ಮಾತ್ರವಲ್ಲದೇ ಯಾವೆಲ್ಲ ಥಿಯೇಟರ್ಗಳಲ್ಲಿ ಪಠಾಣ್ ಸಿನಿಮಾ ರಿಲೀಸ್ ಆಗುತ್ತದೆಯೋ ಆ ಎಲ್ಲ ಸಿನಿಮಾ ಮಂದಿರಗಳನ್ನು ಸುಟ್ಟು ಹಾಕುತ್ತೇವೆ ಎಂದಿದ್ದಾರೆ.
ಈಗಾಗಲೇ ಮಧ್ಯಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಠಾಣ್ ಸಿನಿಮಾ ಜನವರಿ 25ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.
ಇದನ್ನು ಓದಿ : California earthquake: ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ: 12 ಮಂದಿಗೆ ಗಾಯ
ಇದನ್ನೂ ಓದಿ : Ranji Trophy Karnataka: ಪಾಂಡಿಚೇರಿ ವಿರುದ್ಧ ಮೊದಲ ದಿನವೇ ಕನ್ನಡಿಗರ ಭರ್ಜರಿ ಆಟ
ಇಂಗ್ಲಿಷ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Shah Rukh Khan will be burned alive: Ayodhya seer on Pathaan, Besharam Rang row