Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?

ಮುಂಬೈ: Suryakumar Yadav Brilliant Batting ಟೀಮ್ ಇಂಡಿಯಾ ಪರ ಅಬ್ಬರಿಸಿ ಬೊಬ್ಬಿರಿದಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಅಮೋಘ ಫಾರ್ಮನ್ನು ರಣಜಿ ಟ್ರೋಫಿಯಲ್ಲೂ (Ranji Trophy 2022-23) ಮುಂದುವರಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಎಲೈಟ್ ಗ್ರೂಪ್ ‘ಬಿ’ ಹಂತದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಂಬೈ ಬ್ಯಾಟ್ಸ್’ಮನ್’ಗಳು ಮೊದಲ ದಿನವೇ ಅಕ್ಷರಶಃ ಅಬ್ಬರಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಆರಂಭಿಕ ದಿನವೇ 3 ವಿಕೆಟ್ ನಷ್ಟಕ್ಕೆ 457 ರನ್ ಕಲೆ ಹಾಕಿತು.

ನ್ಯೂಜಿಲೆಂಡ್ ಪ್ರವಾಸದಿಂದ ವಾಪಸ್ಸಾಗಿ ರಣಜಿ ಟ್ರೋಫಿ ಟೂರ್ನಿಗೆ ಮರಳಿ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದರು. 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಕೇವಲ 80 ಎಸೆತಗಳಲ್ಲಿ 90 ರನ್ ಸಿಡಿಸಿದ ಸೂರ್ಯಕುಮಾರ್ ಯಾದವ್ 90 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ 10 ರನ್’ಗಳಿಂದ ಶತಕ ವಂಚಿತರಾದರು.

ಕಳೆದ ವರ್ಷ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಕೇವಲ ಒಂದೇ ವರ್ಷದಲ್ಲಿ ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್ ಎನಿಸಿದ್ದಾರೆ. ಕಳೆದ ವರ್ಷದ ಮಾರ್ಚ್’ನಲ್ಲಿ ಟೀಮ್ ಇಂಡಿಯಾ ಪರ ಚೊಚ್ಚಲ ಟಿ20 ಪಂದ್ಯವಾಡಿದ್ದ ಸೂರ್ಯಕುಮಾರ್, ಆಡಿರುವ 42 ಟಿ20 ಪಂದ್ಯಗಳಿಂದ 44ರ ಸರಾಸರಿಯಲ್ಲಿ 1408 ರನ್ ಗಳಿಸಿದ್ದಾರೆ. 180ಕ್ಕೂ ಹೆಚ್ಚು ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸಿರುವ ಸೂರ್ಯ, 2 ಶತಕ ಹಾಗೂ 12 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.

ಸದ್ಯ ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಆತಿಥೇಯರ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿದೆ. ಭಾರತ ಪರ ಟೆಸ್ಟ್ ಆಡುವ ಕನಸು ಹೊತ್ತಿರುವ 32 ವರ್ಷದ ಸೂರ್ಯಕುಮಾರ್ ಯಾದವ್, ಆ ಕನಸನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಬ್ಬರದ 90 ರನ್ ಸಿಡಿಸಿ ಗಮನ ಸೆಳೆದಿದ್ದಾರೆ.

ಸೂರ್ಯಕುಮಾರ್ ಯಾದವ್ ಹೊರತಾಗಿ ಮುಂಬೈ ಪರ ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ 195 ಎಸೆತಗಳಲ್ಲಿ 162 ರನ್ ಗಳಿಸಿದ್ರೆ, ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ನಾಯಕ ಅಜಿಂಕ್ಯ ರಹಾನೆ ಮೊದಲ ದಿನ 190 ಎಸೆತಗಳಲ್ಲಿ ಅಜೇಯ 139 ರನ್  ಗಳಿಸಿದರು.

ಇದನ್ನೂ ಓದಿ :  Manish Pandey IPL 2023 : ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ, ಯಾರ ಪಾಲಾಗಲಿದ್ದಾರೆ ಮನೀಶ್ ಪಾಂಡೆ ?

ಇದನ್ನೂ ಓದಿ : Karnataka star to captain Sunrisers IPL: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕನ್ನಡಿಗ ನಾಯಕ ?

ಇಂಗ್ಲಿಷ್ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

cricket Suryakumar Yadav Brilliant Batting Mumbai vs Hyderabad in Ranji Trophy After 3 Years

Comments are closed.