ಸೋಮವಾರ, ಜೂನ್ 16, 2025
HomeCinemaShahrukh Khan : ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಸುಳಿವು ಕೊಟ್ಟ ಶಾರುಖ್ ಖಾನ್

Shahrukh Khan : ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಸುಳಿವು ಕೊಟ್ಟ ಶಾರುಖ್ ಖಾನ್

- Advertisement -

ಬಾಲಿವುಡ್ ಬಾದಷಾಹ ಅಂತಲೇ ಹೆಸರಾಗಿರುವ ನಟ ಶಾರುಖ್ ಖಾನ್ (Shahrukh Khan) ಈಗ ಬಹಳ ಬ್ಯುಸಿಯಾಗಿದ್ದಾರೆ. ಪಠಾಣ್ ಸಿನಿಮಾ ಅಂತಿಮ ಹಂತದ ಶೂಟಿಂಗ್ ಮುಗಿಸಿದ್ದಾರೆ. ಕಳೆದ ಬಾರಿ ಸ್ಪೈನ್ ನಲ್ಲಿ ಶೂಟಿಂಗ್ ಎಲ್ಲಾ ಸಿದ್ಧತೆ ಮಾಡಿಕೊಂಡಿರುವಾಗಲೇ ಮಗನ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದು ವಾಪಸು ಬರುವಂತಾಯಿತು.

ಈಗ ಸ್ಪೈನ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಶಾರುಖ್ (Shahrukh Khan) ತೊಡಗಿಕೊಂಡಿದ್ದಾರೆ. ಇದು ಭಿನ್ನವಾದ, ಹಾಲಿವುಡ್ ರೇಂಜ್ ನ ಫೈಟಿಂಗ್ ಗಳನ್ನು ಒಳಗೊಂಡಿರುವ ಸಿನಿಮಾ. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಮ್ ಕೂಡ ಇರುವ ಈ ಚಿತ್ರದ ಬಜೆಟ್ ಸುಮಾರು 250 ಕೋಟಿ ಎನ್ನಲಾಗುತ್ತಿದೆ.

ಜೀರೋ ಸಿನಿಮಾದ ನಂತರ ಅಂದರೆ, ಸುಮಾರು 4 ವರ್ಷಗಳ ಆದ ಮೇಲೆ ಶಾರುಖ್ ತೆರೆಮೇಲೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಶಾರುಖ್ ಮುಂದಿನ ಸಿನಿಮಾ ಯಾವುದು ಎನ್ನುವುದರ ಸಣ್ಣ ಸುಳಿವು ಕೂಡ ನೀಡಿದ್ದಾರೆ.

ಇದನ್ನೂ ಓದಿ : KGF Chapter 2 Vs Beast : ಕೆಜಿಎಫ್ ಚಾಪ್ಟರ್ -2 Vs ಬೀಸ್ಟ್ : ಇದರಲ್ಲಿ ಗೆಲ್ಲೋರು ಯಾರು?

ತಮಿಳಿನ ಖ್ಯಾತ ನಿರ್ದೇಶಕ, ಅಟ್ಳಿಕುಮಾರ್ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಅಟ್ಳಿಕುಮಾರ್ ಮತ್ತು ನಾನು ಇಬ್ಬರೂ ಕೂಡ ತಮಿಳು ನಟ ವಿಜಯ್ ದೊಡ್ಡ ಫ್ಯಾನ್. ಹೀಗಾಗಿ, ಇಬ್ಬರೂ ಕೂಡ ಕೂತ ಬ್ರೀಸ್ಟ್ ಸಿನಿಮಾದ ಟ್ರೇಲರ್ ವೀಕ್ಷಣೆ ಮಾಡಿ, ಚರ್ಚೆ ನಡೆಸುತ್ತಿದ್ದೇವೆ ಎಂದು ಶಾರುಕ್ ಖಾನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ, ಶಾರುಖ್ ಜೊತೆಗೂಡಿ ಅಟ್ಳಿಕುಮಾರ್ ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿ ಇತ್ತು. ಈ ಬಗ್ಗೆ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಈಗ ಶಾರುಖ್ ಮುಂದಿನ ಸಿನಿಮಾ ಅಟ್ಳಿ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಚಿತ್ರದ ಹೆಸರು ಸಂಕಿ ಎನ್ನಲಾಗಿದ್ದು. ಚಿತ್ರವನ್ನು ಎಸ್ ಆರ್ ಕೆ ಪ್ರೊಡಕ್ಷನ್ ಗೌರಿಖಾನ್ ಹಾಗೂ ಕರಣ್ ಜೋಹರ್ ನಿರ್ಮಾಣ ಮಾಡಲಿದ್ದಾರೆ. ಸಿನಿಮಾ ಕಥೆಯೂ ಬಹಳ ಭಿನ್ನವಾಗಿದ್ದು, ಶಾರುಖ್ ಖಾನ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ವಿಚಕ್ಷಣ ಅಧಿಕಾರಿಯಾಗಿ ಹಾಗೂ ಕಾನೂನು ಉಲ್ಲಂಘಿಸುವ ಪುಂಡನಾಗಿಯೂ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಚಿತ್ರದಲ್ಲಿ ಶಾರುಖ್ ಖಾನ್ ಜೋಡಿಯಾಗಿ ನಾಯಕಿ ನಯನತಾರ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿಂದಲೇ ಸಿನಿಮಾ ನಿರ್ಮಾಣಕ್ಕೆ ಸದ್ದಿಲ್ಲದೇ ಕೆಲಸಗಳು ಸಾಗಿವೆ. ತೆಲುಗಿನ ಜನಪ್ರಿಯ ನಟ ರಾಣಾ ದಗ್ಗುಭಾಟಿಯ ಸಿನಿಮಾದ ವಿಲನ್ ಆಗಿದ್ದಾರೆ. ಇದೀಗ ಬಂದಿರುವ ಸುದ್ದಿ ಪ್ರಕಾರ, ಅಟ್ಳಿ ಈ ಸಿನಿಮಾದಲ್ಲಿ ತಮಿಳು ನಟ ವಿಜಯ್ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಂತೆ. ಹೀಗಾಗಿಯೇ, ಅಟ್ಳಿ ಮತ್ತು ಶಾರುಖ್ ಇಬ್ಬರೂ ವಿಜಯ್ ಅವರ ಬೀಸ್ಟ್ ಸಿನಿಮಾದ ಟ್ರೇಲರ್ ನೋಡಿ ಖುಷಿಗೊಂಡಿರುವುದು. ಇತ್ತೀಚೆಗಷ್ಟೇ ಶಾರುಖ್ ಖಾನ್ ಸ್ಪೈನ್ ನಲ್ಲಿ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿ ವಾಪಸಾಗಿದ್ದಾರೆ. ಈಗ ಮುಂದಿನ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Alia Ranbir Wedding : ಮುಂದಿನವಾರವೇ ಫಿಕ್ಸ್‌ ಆಯ್ತಾ? ರಣಬೀರ್-ಅಲಿಯಾ ಭಟ್ ಮದುವೆ!

(Shahrukh Khan hints at working with Director Atlee)

RELATED ARTICLES

Most Popular