BMTC Digital Bus Pass : ಪೇಪರ್ ಲೆಸ್ ಪಾಸ್ : ಬಿಎಂಟಿಸಿಯಲ್ಲಿ ಮೊಬೈಲ್ ತೋರಿಸಿ ಪ್ರಯಾಣಿಸಿ

ಬೆಂಗಳೂರು : ಸಿಲಿಕಾನ್‌ ಸಿಟಿ ಮಂದಿಯ ಜೀವನಾಡಿ ಬಿಎಂಟಿಸಿ ಬಸ್.‌ ಪ್ರತಿನಿತ್ಯ ಲಕ್ಷಾಂತರ ಜನರು ಬಸ್ ನಿಂದಲೇ ತಮ್ಮ ಉದ್ಯೋಗ ವ್ಯವಹಾರಗಳಿಗೆ ತೆರಳುತ್ತಾರೆ. ಆದರೆ ಇಷ್ಟು ದಿನಗಳ ಕಾಲ ಬಿ ಎಂ ಟಿಸಿ ಯಲ್ಲಿ ಪ್ರಯಾಣಿಸುವ ಜನರು ಕ್ಯೂ ನಲ್ಲಿ ನಿಂತು ಪಾಸ್ ಪಡೆದುಕೊಳ್ಳುತ್ತಿದ್ದರು. ಇನ್ಮುಂದೇ ಹೀಗೆ ಕ್ಯೂ ನಲ್ಲಿ ನಿಂತು ಪಾಸ್ ಪಡೆಯುವ ಗೋಳಿಗೆ ಮುಕ್ತಿ ಸಿಗಲಿದೆ. ಬಿಎಂಟಿಸಿ ಡಿಜಿಟಲಿಕರಣಕ್ಕೆ ಸಿದ್ಧವಾಗಿದ್ದು, ಡಿಜಿಟಲ್ ಪಾಸ್ (BMTC Digital Bus Pass ) ವ್ಯವಸ್ಥೆ ಆರಂಭಿಸಿದೆ.

ಪೇಪರ್ ಪಾಸ್ ನಿಂದ ಡಿಜಿಟಲ್ ಪಾಸ್ ಗೆ ಬದಲಾಗಿರುವ ಬಿಎಂಟಿಸಿ ಇಂದಿನಿಂದ ಡಿಜಿಟಲ್ ಪಾಸ್ ವ್ಯವಸ್ಥೆ ಜಾರಿಗೆ ತಂದಿದೆ. Tummoc App ಹೆಸರಿನ ಈ ಆ್ಯಪ್ ನ್ನು ಪ್ರಾಯೋಗಿಕ ವಾಗಿ 200 ಬಸ್ ಗಳಿಗೆ ಪರಿಚಯಿಸಲಾಗಿದೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಲ್ಲಿ ಈ ಆ್ಯಪ್ ಪರಿಚಯಿಸಲಾಗಿದೆ. ಬಿಎಂಟಿಸಿ ಪ್ರಯಾಣಿಕರು Tummoc App ನ್ನು ಮೊಬೈಲ್ ನಲ್ಲಿ ಅಳವಡಿಸಿಕೊಂಡು ಅದರ ಮೂಲಕವೇ ಬಿಎಂಟಿಸಿ ಪಾಸ್ (Bus Pass) ಪಡೆಯಬಹುದು. ಅಲ್ಲದೇ ಬಸ್ ನಲ್ಲಿ ನಿರ್ವಾಹಕರು ಕೇಳಿದಾಗ ಅದೇ ಪಾಸ್ ನ್ನು ತೋರಿಸಬಹುದು.

ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ದಿನ,ವಾರ ಹಾಗೂ ತಿಂಗಳಿನ ಪಾಸ್ ನ್ನು ಈ ಆ್ಯಪ್ ಮೂಲಕ ಖರೀದಿಸಬಹುದು. ಪ್ರತಿಪಾಸಿಗೂ Unique Id ಮತ್ತು Dynamic QR ಕೋಡ್ ಇರಲಿದೆ. ಆರಂಭದಲ್ಲಿ 200 ಸಾಮಾನ್ಯ ಬಸ್ ಗಳಲ್ಲಿ ಆ್ಯಪ್ ಪರಿಚಯಿಸಲಾಗಿದ್ದು, ವೊಲ್ವೋ ಬಸ್ ಗಳ ನಿರ್ವಾಹಕರಿಗೆ ಇಟಿಎಂ ಮಿಷನ್ ಗಳಿರಲಿದ್ದು,ವೋಲ್ವೋ ಬಸ್ ನಲ್ಲಿಯೂ ಮೊಬೈಲ್ ನಲ್ಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ.

ಈ ಬಗ್ಗೆ ವಿವರಣೆ ನೀಡಿದ BMTC MD ಅನ್ಬು ಕುಮಾರ್ , ಕರೋನಾದಿಂದ ನಿಗಮ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಇಂಥ ಸಮಯದಲ್ಲಿ ಡಿಜಿಟಲ್ ಪಾಸ್ ಜಾರಿಗೆ ತರುತ್ತಾ ಇದ್ದೀವಿ. ಡಿಜಿಟಲ್ ಪಾಸ್ ನಿಂದ ಪ್ರಯಾಣಿಕರು ತಾವು ಇದ್ದಲ್ಲಿಯೇ ಪಾಸ್ ಖರೀದಿ ಮಾಡಬಹುದು.ಇಷ್ಟು ದಿನ ಪಾಸ್ ಪಡೀಬೇಕು ಅಂದ್ರೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಹೋಗಿ ಪಡೆಯಬೇಕಿತ್ತು. ಇದರ ಸಾಧಕ ಬಾಧಕಗಳ ಕುರಿತಂತೆ ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆಯಲಾಗುವುದು. ಬಳಿಕ ಇನ್ನಷ್ಟು ಬಸ್ ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ನಷ್ಟದಲ್ಲಿರೋ ಬಿಎಂಟಿಸಿ ನಷ್ಟ ತಪ್ಪಿಸಿಕೊಳ್ಳಲು ಹಾಗೂ ಹಣದ ದುರ್ಬಳಕೆ ತಪ್ಪಿಸಲು ಪ್ರಯಾಣಿಕರಿಗೆ ಕಿರಿಕಿರಿ ಮುಕ್ತ ಪ್ರಯಾಣ ಒದಗಿಸಲು ಸರ್ಕಸ್ ಆರಂಭಿಸಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಕಾದುನೋಡಬೇಕಿದೆ.

ಇದನ್ನೂ ಓದಿ : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ

ಇದನ್ನೂ ಓದಿ :  ಕಬ್ಬನ್ ಪಾರ್ಕ್ ಪ್ರಿಯರಿಗೆ ಶಬ್ದಮಾಲಿನ್ಯವೇ ಶತ್ರು: ಸದ್ಯದಲ್ಲೇ ಜಾರಿಯಾಗಲಿದೆ ನೋ ಹಾಂಕಿಂಗ್ ರೂಲ್ಸ್

BMTC Digital Bus Pass Introduce in Bangalore Passengers

Comments are closed.