ಭಾನುವಾರ, ಜೂನ್ 15, 2025
HomeCinemaಶಿಲ್ಪಾ ಶೆಟ್ಟಿ ಬೆಂಬಲಕ್ಕೆ ಬಾಲಿವುಡ್….! ನಿನ್ನ ಜೊತೆ ನಾನಿದ್ದೇನೆ ಎಂದ ಶಮಿತಾ ಶೆಟ್ಟಿ…!!

ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ಬಾಲಿವುಡ್….! ನಿನ್ನ ಜೊತೆ ನಾನಿದ್ದೇನೆ ಎಂದ ಶಮಿತಾ ಶೆಟ್ಟಿ…!!

- Advertisement -

ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಪ್ರಸಾರ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜೈಲು ಸೇರಿದ್ದಾರೆ. ಆದರೆ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳ ಅಸಲಿ ಟಾರ್ಗೆಟ್ ಆಗಿದ್ದು, ಟ್ರೋಲ್,ಟೀಕೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಶಿಲ್ಪಾಗೆ ಬಾಲಿವುಡ್ ನಟ-ನಟಿಯರು ಹಾಗೂ ಸ್ವಂತ ತಂಗಿ ಶಮಿತಾ ಶೆಟ್ಟಿ ಕೂಡ ಬೆಂಬಲ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶಮಿತಾ ಶೆಟ್ಟಿ, ನಿನ್ನ ಸದಾ ಪ್ರೀತಿಸುವೆ ಮುಂಕಿ(ಶಿಲ್ಪಾ ಶೆಟ್ಟಿ). ಯಾವುದೇ ಕಷ್ಟದ ಸಂದರ್ಭದಲ್ಲೂ ನಾನು ನಿನ್ನೊಂದಿಗೆ ಇದ್ದೇನೆ. ಇದ್ದೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಶಮಿತಾ ಶೆಟ್ಟಿ ಈ ಪೋಸ್ಟ್ ಗೆ ಹಲವರು ಕಮೆಂಟ್ ಮಾಡಿದ್ದು, ಅಕ್ಕ-ತಂಗಿ ಹೀಗೆ ಪ್ರೀತಿಯಿಂದ ಇರಿ ಎಂದಿದ್ದರೇ, ಕೆಲವರು ಸ್ವಂತ ಅಕ್ಕನ ಬೆಂಬಲಕ್ಕೆ ಬರಲು ಇಷ್ಟು ವಿಳಂಬವೇಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿಗೆ ಬಹುಭಾಷಾ ನಟ ಮಾಧವನ್ ಕೂಡ ಬೆಂಬಲ ನೀಡಿದ್ದು, ನಾನು ನೋಡಿದ ಅತ್ಯಂತ ಗಟ್ಟಿ ಮಹಿಳೆಯರಲ್ಲಿ ನೀವು ಒಬ್ಬರು. ಈ ಸವಾಲಿನ ಸಮಯವನ್ನು ನೀವು ಘನತೆಯಿಂದ ಪಾರಾಗಿ ಬರುತ್ತೀರಿ ಎಂಬ ನಂಬಿಕೆ,ವಿಶ್ವಾವಿದೆ. ನಾನು ನನ್ನ ಹಾರೈಕೆ ಸದಾ ನಿಮ್ಮೊಂದಿಗೆ ಇದೆ ಎಂದಿದ್ದಾರೆ.  

ಬಾಲಿವುಡ್ ನ ಪ್ರಸಿದ್ಧ ನಟಿ ರೀಚಾ ಚಡ್ಡಾ ಸಹ ಶಿಲ್ಪಾ ಶೆಟ್ಟಿಯನ್ನು ಬೆಂಬಲಿಸಿದ್ದು, ನಮ್ಮ ದೇಶದಲ್ಲಿಪುರುಷರು ಮಾಡುವ ತಪ್ಪಿಗೆ ಮಹಿಳೆಯರನ್ನು ನಿಂದಿಸಲಾಗುತ್ತದೆ. ಇದನ್ನು ಒಂದು ರೀತಿ ರಾಷ್ಟ್ರೀಯ ಕ್ರೀಡೆಯಾಗಿಸಿಕೊಂಡಿದೆ. ಅಕಾರಣ ನಿಂದೆ ಮಾಡುವವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿರುವುದು ಸರಿ ಇದೆ ಎಂದಿದ್ದಾರೆ.

ಇನ್ನು ಶಿಲ್ಪಾ ಬೆಂಬಲಿಸಿ ಮಾತನಾಡಿರುವ ನಿರ್ದೇಶಕ ಹನ್ಸಲ್ ಮೆಹ್ತಾ, ಒಳ್ಳೆಯ ಸಮಯದಲ್ಲಿ  ಎಲ್ಲರೂ ಸೇರಿ ಪಾರ್ಟಿ ಮಾಡುತ್ತಾರೆ. ಆದರೆ ಕಷ್ಟದ ಸಮಯದಲ್ಲಿ ಭಯಂಕರ ಮೌನ ತಾಳುತ್ತಾರೆ ಎಂದು ಶಿಲ್ಪಾ ಬೆಂಬಲಕ್ಕೆ ಬಾರದ ಬಾಲಿವುಡ್ ನ್ನು ಟೀಕಿಸಿದ್ದಾರೆ.

RELATED ARTICLES

Most Popular