Kantara Shilpa Shetty : ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾದ ಕಾಳ್ಗಿಚ್ಚು ಎಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದರೆ ತಪ್ಪಾಗೋದಿಲ್ಲ. ಈ ಸಿನಿಮಾವನ್ನು ವೀಕ್ಷಿಸಿದ ಪ್ರತಿಯೊಬ್ಬರು ಸಿನಿಮಾದ ಕತೆ ಹಾಗೂ ಅದಕ್ಕಿಂತ ಹೆಚ್ಚಾಗಿ ಶಿವ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಿದ ರೀತಿಯನ್ನು ಕೊಂಡಾಡುತ್ತಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ನಲ್ಲಿ ಪ್ರೇಕ್ಷಕರು ತಮ್ಮ ಪಾದರಕ್ಷೆಗಳನ್ನು ಕಳಚಿಟ್ಟು ವೀಕ್ಷಿಸುವಷ್ಟರ ಮಟ್ಟಿಗೆ ರಿಷಬ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರ ಜೊತೆಯಲ್ಲಿ ಸೆಲೆಬ್ರಿಟಿಗಳಿಗೂ ತುಂಬಾನೇ ಇಷ್ಟವಾಗಿದೆ .
ನಟ ಪ್ರಭಾಸ್ ಅಂತೂ ಈ ಸಿನಿಮಾವನ್ನು ಎರಡೆರಡು ಭಾರಿ ವೀಕ್ಷಿಸಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.ಇದಲ್ಲದೇ ನಟ ಧನುಷ್, ಅನಿಲ್ ಕುಂಬ್ಳೆ, ಪ್ರಶಾಂತ್ ನೀಲ್ ಹಾಗೂ ಅನುಷ್ಕಾ ಶೆಟ್ಟಿಯಂತಹ ಸಾಕಷ್ಟು ಸೆಲೆಬ್ರಿಟಿಗಳು ಕಾಂತಾರ ಸಿನಿಮಾಗೆ ಶಹಬ್ಬಾಸ್ ಎಂದಿದ್ದಾರೆ. ಪೃಕ್ರತಿ ಹಾಗೂ ಮಾನವನ ನಡುವಿನ ಸಂಘರ್ಷವನ್ನು ತೋರಿಸುವ ಈ ಸಿನಿಮಾ ಇದೀಗ ಎಲ್ಲರ ಮನೆ ಮಾತಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿನ ಸಾಕಷ್ಟು ದಾಖಲೆಗಳನ್ನು ಕಾಂತಾರ ಸಿನಿಮಾ ಮುರಿಯುತ್ತಿದೆ.
ತುಳುನಾಡಿನ ಭೂತ ಕೋಲ ಹಾಗೂ ದೈವದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಪಂಜುರ್ಲಿ ಎಂಬ ದೈವವೇ ಈ ಕತೆಯ ಮೂಲಾಧಾರವಾಗಿದೆ. ಹೀಗಾಗಿ ಈ ಸಿನಿಮಾದ ಕರಾವಳಿ ಭಾಗದ ಜನತೆಗೆ ಇನ್ನಷ್ಟು ಹತ್ತಿರವಾಗಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ನೆಲೆಸಿದ್ದರೂ ಸಹ ತುಳುನಾಡು ಹಾಗೂ ತುಳು ಸಂಸ್ಕೃತಿಯ ಬಗ್ಗೆ ಈಗಲೂ ಗೌರವವನ್ನು ಹೊಂದಿದ್ದಾರೆ. ಮೂಲತಃ ತುಳುನಾಡಿನವರೇ ಆಗಿರುವ ಶಿಲ್ಪಾಶೆಟ್ಟಿ ಕಾಂತಾರಾ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕಾಂತಾರ ಸಿನಿಮಾವನ್ನು ನೋಡುವ ಸಂದರ್ಭದಲ್ಲಿ ತಮಗಾದ ಅನುಭವವನ್ನು ನಟಿ ಶಿಲ್ಪಾಶೆಟ್ಟಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ.
ಕಾಂತಾರಾ ಸಿನಿಮಾಗೆ ಇದು ನನ್ನ ಮೆಚ್ಚುಗೆಯ ಪೋಸ್ಟ್ ಆಗಿದೆ. ಥಿಯೇಟರ್ನಲ್ಲಿ ನಾನು ಈ ಸಿನಿಮಾವನ್ನು ವೀಕ್ಷಿಸಿದೆ. ಓ ದೇವರೆ.. ಎಂತಹ ನಿರೂಪಣೆ, ಭಾವನೆ ಹಾಗೂ ಜಗತ್ತು,,, ಕ್ಲೈಮಾಕ್ಸ್ ಸಂದರ್ಭದಲ್ಲಿ ಮೈ ರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿ ಹೇಗಿದೆ ಅಂದರೆ ಇದು ನಿಮ್ಮ ಈ ಜಗತ್ತಿಗೆ ಕೊಂಡೊಯ್ಯುತ್ತದೆ. ಯಾವುದೇ ಪಕ್ಷಪಾತವಿಲ್ಲದೇ , ಕತೆ ಹೇಳುವಿಕೆ, ಪ್ರದರ್ಶನಗಳು, ನಂಬಿಕೆ ಹಾಗೂ ನಿರ್ದೇಶನದ ಸಂಪೂರ್ಣ ತೇಜಸ್ಸಿಗೆಗಾಗಿ ಈ ಸಿನಿಮಾವನ್ನು ವೀಕ್ಷಿಸಲೇಬೇಕು. ರಿಷಬ್ ಶೆಟ್ಟಿ ನಿಮ್ಮ ಬಹುಮುಖತೆಗೆ ಹ್ಯಾಟ್ಸಾಫ್ ಎಂದು ಹಾಡಿ ಹೊಗಳಿದ್ದಾರೆ . ಶಿಲ್ಪಾಶೆಟ್ಟಿಯ ಈ ಪೋಸ್ಟ್ಗೆ ಕಮೆಂಟ್ ಮಾಡಿರುವ ರಿಷಬ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.
ಕಾಂತಾರ ಸಿನಿಮಾವು ಶುದ್ಧ ಮನರಂಜನೆಗೆ ಉದ್ದೇಶಿಸಿದ ಚಿತ್ರವಾಗಿದೆ. ಈ ಸಿನಿಮಾವು ಸ್ಯಾಂಡಲ್ವುಡ್ ಇಂಡಸ್ಟ್ರಿಯ ಯಶಸ್ಸಿಗೆ ಮತ್ತೊಂದು ಗರಿಯನ್ನು ಸೇರಿಸಿದೆ. ದಕ್ಷಿಣ ಭಾರತದ ಕರಾವಳಿ ಭಾಗದ ಧಾರ್ಮಿಕ ನಂಬಿಕೆಯನ್ನು ಸಾರುವ ಈ ಸಿನಿಮಾ ಪ್ರೇಕ್ಷಕರಿಗೆ ತುಂಬಾನೆ ಮೆಚ್ಚುಗೆ ಎನಿಸಿದೆ.
ಇದನ್ನು ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ
ಇದನ್ನೂ ಓದಿ : Congress President Polls :ಇಲ್ಲಿದೆ ನೋಡಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಪ್ರಮುಖ ವಿಚಾರಗಳು
Shilpa Shetty shares her experience watching Kantara, says ‘had goosebumps in climax’