ಸೋಮವಾರ, ಏಪ್ರಿಲ್ 28, 2025
HomeCinemaJames Bairagi : ಜೇಮ್ಸ್ ಜೊತೆಗೆ ತೆರೆಗೆ ಬರ್ತಾನೆ ಭೈರಾಗಿ : ಶಿವಕುಮಾರ್‌, ಪುನೀತ್ ಅಭಿಮಾನಿಗಳಿಗೆ...

James Bairagi : ಜೇಮ್ಸ್ ಜೊತೆಗೆ ತೆರೆಗೆ ಬರ್ತಾನೆ ಭೈರಾಗಿ : ಶಿವಕುಮಾರ್‌, ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ

- Advertisement -

ಮಾರ್ಚ್ ತಿಂಗಳಾದ್ಯಂತ ಎಲ್ಲೆಡೆಯೂ ಅಪ್ಪು ಸ್ಮರಣೆಯೇ ನಡೆದಿದೆ. ಸದ್ಯ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ (James ) ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದರ ಜೊತೆಗೆ ಅಪ್ಪು ಫ್ಯಾನ್ಸ್ ಸಂಭ್ರಮ ಹೆಚ್ಚಿಸುವಂತೆ ನಟ ಪುನೀತ್ ರಾಜ್ ಕುಮಾರ್ ಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಘೋಷಿಸಿದೆ. ಇಷ್ಟೆಲ್ಲ ಖುಷಿ ಖುಷಿ ಸುದ್ದಿ ಮಧ್ಯೆ ಶಿವಣ್ಣ ಮೂವಿ (Bairagi ) ತಂಡವೂ ಪುನೀತ್ ಬರ್ತಡೇಗೆ ಸ್ಪೆಶಲ್ ಗಿಫ್ಟ್ ನೀಡಲು ಸಿದ್ಧವಾಗಿದ್ದು, ಏನದು ಗಿಫ್ಟ್ ಇಲ್ಲಿದೆ ಡಿಟೇಲ್ಸ್.

ಸದ್ಯ ಹದಿನೈದು ದಿನದಿಂದ ಸ್ಯಾಂಡಲ್ ವುಡ್ ನಲ್ಲಿ ಜೇಮ್ಸ್ ಹವಾ ಜೋರಾಗಿದೆ. ಮಾರ್ಚ್ 17 ರ ಪುನೀತ್ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ರಾಜ್ಯದಾದ್ಯಂತ ತೆರೆಗೆ ಬರಲಿದೆ. ಇದಕ್ಕಾಗಿ ಫ್ರಿ ರಿಲೀಸ್ ಇವೆಂಟ್ ಸೇರಿದಂತೆ ಅದ್ದೂರಿ ಪ್ರಮೋಶನ್ ಕಾರ್ಯವೂ ನಡೆಯತ್ತಿದೆ.ಈಗ ಜೇಮ್ಸ್ ಸಂಭ್ರಮ ಹೆಚ್ಚಿಸೋಕೆ ಶಿವಣ್ಣ ನ 123 ನೇ ಸಿನಿಮಾ ಬೈರಾಗಿ ತಂಡ ಸ್ಪೆಶಲ್ ಪ್ಲ್ಯಾನ್ ಮಾಡಿಕೊಂಡಿದೆ. ಇತ್ತೀಚಿಗಷ್ಟೇ ಸಿನಿಮಾ ಶೂಟಿಂಗ್ ಮುಗಿಸಿರೋ ಬೈರಾಗಿ ಸಿನಿಮಾ ತಂಡ, ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಸ್ಪೆಶಲ್ ಟೀಸರ್ ರಿಲೀಸ್ ಮಾಡಲು ಸಿದ್ಧವಾಗಿದೆ.

ಜೇಮ್ಸ್ ಸಿನಿಮಾ ಪ್ರದರ್ಶನದ ಮಧ್ಯಂತರ ಅವಧಿಯಲ್ಲಿ ಶಿವಣ್ಣ ನ ಬೈರಾಗಿ ಸಿನಿಮಾ ಟೀಸರ್ ಪ್ರದರ್ಶಿಸಲು ಚಿತ್ರತಂಡ ನಿರ್ಧರಿಸಿದೆಯಂತೆ. ಪರಸ್ಪರ ಸಹೋದರರಿಗಿಂತ ತಂದೆ ಮಗನ ಬಾಂಧವ್ಯ ಹೊಂದಿರೋ ಶಿವಣ್ಣ ಹಾಗೂ ಪುನೀತ್ ರಾಜ್ ಕುಮಾರ್ ನಡುವಿನ ಬಾಂಧವ್ಯಕ್ಕೆ ಹಾಗೂ ಪುನೀತ್ ಹುಟ್ಟುಹಬ್ಬಕ್ಕೆ ಬೈರಾಗಿ ಟೀಸರ್ ಒಂದೊಳ್ಳೆ ಗಿಫ್ಟ್ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪುನೀತ್ ಅವರ ಸವಿನೆನಪಿಗಾಗಿ ಭೈರಾಗಿ ಟೀಸರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜೊತೆ ಪುನೀತ್ ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಬೈರಾಗಿ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಅಪ್ಪು ಹಾಗೂ ಶಿವಣ್ಣ ನ ಅಭಿಮಾನಿಗಳಿಗೆ ಸಂತೋಷದ ಸಂಗತಿ ಎಂದು ಚಿತ್ರತಂಡ ಅಭಿಪ್ರಾಯಿಸಿದೆ.

ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾಗೆ ವಿಜಯ್ ಮಿಲ್ಟನ್ ನಿರ್ದೇಶನವಿದೆ.ಟಗರು ಸಿನಿಮಾದಲ್ಲಿ ಶಿವಣ್ಣ ಜೊತೆ ಮಿಂಚಿದ್ದ ಡಾಲಿ ಧನಂಜಯ್ ಈ ಸಿನಿಮಾದಲ್ಲೂ ಶಿವಣ್ಣ ನಿಗೆ ಜೊತೆಯಾಗಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಹಿರಿಯ ನಟ ಶಶಿಕುಮಾರ್, ಅಂಜಲಿ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಸಿನಿಮಾಕ್ಕೆ ಅನೂಪ್ ಸಿಳಿನ್ ಸಂಗೀತವಿದೆ.

ಇದನ್ನೂ ಓದಿ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಳಗಿದ ಬೊಂಬೆ ಹೇಳುತೈತೆ ಹಾಡು : ಪುನೀತ್‌ ಪೋಟೋ ಹಿಡಿದ ಸುದೀಪ್‌

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ಗೆ ಗೌರವ ಡಾಕ್ಟರೇಟ್ ಘೋಷಿಸಿದ ಮೈಸೂರು ವಿವಿ

( Shiva Rajkumar Bairagi and Puneeth Rajkumar James Movie Releasing Same time)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular