Former CM Siddaramaiah : 2023 ರ ಚುನಾವಣೆಗೆ ಕ್ಷೇತ್ರ ಬದಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಒಂದೂವರೆ ವರ್ಷದ ಬಳಿಕ ನಡೆಯಲಿರೋ ಎಲೆಕ್ಷನ್ ಗಾಗಿ ಈಗಾಗಲೇ ಸಿದ್ಧತೆ ನಡೆದಿದ್ದು ಯಾರ ಯಾರು ಎಲ್ಲೆಲ್ಲಿ ಕಣಕ್ಕಿಳಿಯಬೇಕು, ಯಾರನ್ನು ಎಲ್ಲಿಂದ ನಿಲ್ಲಿಸಬೇಕು ಹೀಗೆ ನಾನಾ ಲೆಕ್ಕಾಚಾರಗಳು ಜೋರಾಗಿವೆ. ಈ ಮಧ್ಯೆಯೇ ಈ ಹಿಂದಿನ‌ ಚುನಾವಣೆಯಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮತ್ತೊಮ್ಮೆ ಕ್ಷೇತ್ರ ಬದಲಾಯಿಸುವ ಚಿಂತನೆಯಲ್ಲಿದ್ದು, ಆದರೆ ಯಾವ ಕ್ಷೇತ್ರದಿಂದ ನಿಲ್ಲುತ್ತೇನೆ ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ ಸಿದ್ದು.

2018 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿಸಿಎಂ ಸಿದ್ಧರಾಮಯ್ಯ (Former CM Siddaramaiah) ತೀವ್ರ ಮುಖಭಂಗಕ್ಕೆ ಗುರಿಯಾದರು. ತಮ್ಮದೇ ತಾಯ್ನೆಲದಲ್ಲಿ ಸೋತ ಸಿದ್ಧರಾಮಯ್ಯ ಅಕ್ಷರಷಃ ಕಂಗೆಟ್ಟು ಹೋಗಿದ್ದರು. ಆದರೆ ಮೊದಲೇ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಅಲ್ಪಸ್ವಲ್ಪ ಗೌರವ ಉಳಿಸಿಕೊಂಡು ವಿರೋಧ ಪಕ್ಷದ ನಾಯಕರಾಗಿ ನೆಲೆನಿಂತುಕೊಂಡರು.

ಈಗ ಮತ್ತೊಮ್ಮೆ ರಾಜ್ಯದಲ್ಲಿ ಎಲೆಕ್ಷನ್ ಕಣ ರಂಗೇರಲಾರಂಭಿಸಿದ್ದು ಮತ್ತೊಮ್ಮೆ ಸಿದ್ದರಾಮಯ್ಯನವರ ಕ್ಷೇತ್ರ ಯಾವುದು ಎಂಬ ಚರ್ಚೆ ಆರಂಭಗೊಂಡಿದೆ. ಹಾಲಿ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರೂ ಆ ಕ್ಷೇತ್ರ ರಾಜಧಾನಿಯಿಂದ ದೂರವಿದೆ. ಅಲ್ಲದೇ ಅಲ್ಲಿಗೆ ಈ ವಯಸ್ಸಿನಲ್ಲಿ ಓಡಾಡಿಕೊಂಡು ರಾಜಕೀಯ ಮಾಡೋದು ಕಷ್ಟ ಎನ್ನೋ ಕಾರಣಕ್ಕೆ ಸಿದ್ದು ಈ ಭಾರಿ ಬಾದಾಮಿಯಿಂದ ಸ್ಪರ್ಧಿಸೋದು ಅನುಮಾನ ಎನ್ನಲಾಗುತ್ತಿದೆ‌

ಆದರೆ ಮಾಧ್ಯಮಗಳ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿರಿ ಎಂಬ ಪ್ರಶ್ನೆಗೆ ಸಿದ್ಧರಾಮಯ್ಯನವರು (Former CM Siddaramaiah) ಗುಟ್ಟು ಬಿಟ್ಟುಕೊಡದಂತೆ ಉತ್ತರಿಸಿದ್ದಾರೆ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಹೀಗಾಗಿ ಅಲ್ಲಿಂದ ಸ್ಪರ್ಧಿಸುವುದಿಲ್ಲ. ಆದರೆ ಹಲವು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಭಿಮಾನಿಗಳು, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಈಗಾಗಲೇ ಹುಣಸೂರು,ಕೊಪ್ಪಳ,ಹೆಬ್ಬಾಳ,ಚಾಮರಾಜಪೇಟೆ ಹಾಗೂ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ಧರಾಮಯ್ಯನವರಿಗೆ ಆಹ್ವಾನ ಇದೆಯಂತೆ.

ಆದರೆ ಬೆಂಗಳೂರಿಗೆ ದೂರದ ಕ್ಷೇತ್ರದಲ್ಲಿ ಎಲೆಕ್ಷನ್ ನಿಲ್ಲಲು ಸಿದ್ಧುಗೆ ಮನಸ್ಸಿಲ್ಲವಂತೆ. ಹೀಗಾಗಿ ಮಾಜಿಸಿಎಂ ಸಿದ್ದರಾಮಯ್ಯ ಚಾಮರಾಜಪೇಟೆಯಿಂದಲೇ ಕಣಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಹಿಂದೆ ಹಲವು ಸಂದರ್ಭದಲ್ಲಿ ಚಾಮರಾಜಪೇಟೆಯ ಹಾಲಿ ಶಾಸಕ ಹಾಗೂ ಸಿದ್ಧರಾಮಯ್ಯ (Former CM Siddaramaiah) ಆಪ್ತ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ಯಿಂದಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ಧುಗೆ ಆಹ್ವಾನ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ಧರಾಮಯ್ಯನವರು ಕೂಡ ಚಾಮರಾಜಪೇಟೆ ಕ್ಷೇತ್ರ ನನ್ನ ಮಾವನ ಮನೆ ಏರಿಯಾ. ನಾನು‌‌ ಮೊದಲಿನಿಂದಲೂ ಈ ಏರಿಯಾದ ಜೊತೆ ಒಡನಾಟ ಹೊಂದಿದ್ದೇನೆ ಎಂದಿದ್ದರು. ಒಟ್ಟಿನಲ್ಲಿ ಸಿದ್ಧರಾಮಯ್ಯನವರು (Former CM Siddaramaiah) ಈ ಚುನಾವಣೆಯಲ್ಲಿ ಕ್ಷೇತ್ರವನ್ನು ಬದಲಾಯಿಸೋದು ಬಹುತೇಕ ಖಚಿತವಾಗಿದ್ದು ಯಾವ ಕ್ಷೇತ್ರ ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ.

ಇದನ್ನೂ ಓದಿ : BJP : ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌ ಕೊಟ್ಟ ಬಿಜೆಪಿ

ಇದನ್ನೂ ಓದಿ :  ಸಂಪುಟದ ಜೊತೆ ‌ಚುನಾವಣೆಯಿಂದಲೂ ಈಶ್ವರಪ್ಪ ಗೆ ಸಿಕ್ತಾ ಗೇಟ್ ಪಾಸ್

( Former CM Siddaramaiah Change For the Constancy in 2023 election )

Comments are closed.