Uttarakaanda First look Poster release : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shiva Rajkumar ) ಅವರ ಬಹು ನಿರೀಕ್ಷಿತ ಸಿನಿಮಾ ಉತ್ತರಕಾಂಡ. ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಗಿಫ್ಟ್ ಕೊಟ್ಟಿದೆ. ಮಾಲೀಕನ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದು, ಹೊಸ ಅವತಾರದಲ್ಲಿ ಶಿವರಾಜ್ ಕುಮಾರ್ ಅವರನ್ನು ಕಣ್ತುಂಬಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ ಉತ್ತರಕಾಂಡ ಇದೀಗ ಬಹು ಬೇಡಿಕೆಯಲ್ಲಿದ್ದ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಕರುನಾಡ ಚಿಕ್ರವರ್ತಿ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ಮಾಲೀಕನ ಅವತಾರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಿ, ಶಿವಣ್ಣ ಲುಕ್ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ : ನಟ ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್ : ಜೈಲಲ್ಲಿರುವ ಚಾಲೆಂಜಿಂಗ್ ಸ್ಟಾರ್‌ಗೆ ಹೊಸ ಕಂಡಿಷನ್
ಯಾವುದೇ ಪಾತ್ರಕ್ಕೂ ಜೀವ ತುಂಬುವ ತಾಕತ್ತು ಇರುವ ಶಿವಣ್ಣ. ಪ್ರತೀ ಪಾತ್ರದಲ್ಲೂ ವಿಶಿಷ್ಟವಾಗಿ ಕಾಣುತ್ತಿದ್ದಾರೆ. ಇದೀಗ ಉತ್ತರ ಕಾಂಡ ಸಿನಿಮಾದಲ್ಲೂ ತಮ್ಮ ಲುಕ್ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಉತ್ತರಕಾಂಡ ಹೆಸರಿನ ಮೂಲಕವೇ ಸಾಕಷ್ಟು ಕುತೂಹಲವನ್ನು ಮೂಡಿಸಿರುವ ಸಿನಿಮಾ.

ಕನ್ನಡ ಸಿನಿಮಾ ಲೋಕದಲ್ಲಿಯೇ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಉತ್ತರಕಾಂಡ” ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ರೋಹಿತ್ ಪದಕಿಯ ಕೃತಿಯಾಗಿದೆ. ಚಿತ್ರಕ್ಕೆ ಖ್ಯಾತ ಗಾಯಕ, ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅಧ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸಿನಿಮಾಕ್ಕಿದೆ.
ಇದನ್ನೂ ಓದಿ : Darshan Thoogudeepa : ನಟ ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಮತ್ತೊಂದು ಸಂಕಷ್ಟ
ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ಸಿನಿಮಾಕ್ಕೆ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ದ್ ಮುಖ್ಯ ಸಂಕಲಕಾರರಾಗಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಜಿ ಜಿ ರಾಜ್ ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಟರಾಕ್ಷಸ ಡಾಲಿ ಧನಂಜಯ, ಭಾವನ ಮೆನನ್, ಐಶ್ವರ್ಯ ರಾಜೇಶ್, ದಿಗಂತ್ ಸೇರಿದಂತೆ ಹಲವು ಖ್ಯಾತ ನಟನಟಿಯರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ : ಪಾರ್ವತಮ್ಮ ನೆನಪಿನಲ್ಲಿ ದ ಜಡ್ಜಮೆಂಟ್ ಸಿನಿಮಾ: ಹೊಸ ಪಾತ್ರದ ಬಗ್ಗೆ ಧನ್ಯಾ ರಾಮ್ ಕುಮಾರ್ ಎಕ್ಸಕ್ಲೂಸಿವ್ ಮಾತು
Shiva Rajkumar New Movie Uttarakaanda First look Poster release