ಭಾನುವಾರ, ಏಪ್ರಿಲ್ 27, 2025
HomeCinemaBhajarangi- 2 :ಅಪ್ಪು ಅಗಲಿಕೆ ನೋವಿನಲ್ಲೂ ಸಿನಿತಂಡದ ಸಂಕಷ್ಟಕ್ಕೆ ಮಿಡಿದ ಶಿವರಾಜ್‌ ಕುಮಾರ್‌

Bhajarangi- 2 :ಅಪ್ಪು ಅಗಲಿಕೆ ನೋವಿನಲ್ಲೂ ಸಿನಿತಂಡದ ಸಂಕಷ್ಟಕ್ಕೆ ಮಿಡಿದ ಶಿವರಾಜ್‌ ಕುಮಾರ್‌

- Advertisement -

ಕೊರೋನಾದಿಂದ ತತ್ತರಿಸಿದ್ದ ಸ್ಯಾಂಡಲ್ ವುಡ್ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲ ಚಂದನವನದಲ್ಲಿ ಭಜರಂಗಿ 2 ಅಬ್ಬರವೂ ಆರಂಭವಾಗಿತ್ತು. ಆದರೆ ದಿಢೀರ್ ಎರಗಿದ ಪುನೀತ್ (Puneeth Raj kumar) ಸಾವಿನ ಸಂಕಟ ಎಲ್ಲವನ್ನು ಕಿತ್ತುಕೊಂಡಿದೆ. ಆದರೆ ಕೊನೆಗೂ ಸಹೋದರನ ಸಾವಿನ ದುಃಖವನ್ನು ನುಂಗಿಕೊಂಡೇ ಕಣಕ್ಕಿಳಿದಿರುವ ಶಿವಣ್ಣ (Shivaraj kumar) ಭಜರಂಗಿ- 2 (Bhajarangi- 2) ಪ್ರಮೋಶನ್ ಗೆ ಮತ್ತೆ ಸಜ್ಜಾಗಿದ್ದಾರೆ.

ಅಕ್ಟೋಬರ್ 25 ರಂದು ಶಿವಣ್ಣ ಅಭಿನಯದ ಬಹುನೀರಿಕ್ಷಿತ ಸಿನಿಮಾ ಭಜರಂಗಿ2 ಸಿನಿಮಾ ತೆರೆಕಂಡಿತ್ತು. ಅಭಿಮಾನಿಗಳಿಗಾಗಿ ಆಯೋಜಿಸಿದ್ದ ಶೋ ವೀಕ್ಷಿಸಿದ್ದ ಶಿವಣ್ಣ ಅಭಿಮಾನಿ ಗಳ ಸಂಭ್ರಮ ಕಂಡು ಖುಷಿ ಪಡುತ್ತಿರುವಾಗಲೇ ಆಘಾತದಂತೆ ಅಪ್ಪಳಿಸಿದ್ದು ಪುನೀತ್ ರಾಜ್ ಕುಮಾರ್ ಸಾವಿನ ಸಂಗತಿ.

ಎತ್ತಿ ಆಡಿಸಿದ ಮಗನಂತ ತಮ್ಮನನ್ನು ಕಳೆದುಕೊಂಡ ಶಿವಣ್ಷ ಅಕ್ಷರಷಃ ಕುಸಿದು ಹೋಗಿದ್ದರು. ಅಷ್ಟೇ ಅಲ್ಲ ಎಲ್ಲವನ್ನು ಬಿಟ್ಟು ತಮ್ಮನ ಶವದ ಬಳಿ ಕಣ್ಣೀರಿಡುತ್ತ ಕುಳಿತಿದ್ದರು. ಹೀಗೆ ಶಿವಣ್ಣ ಕುಸಿದು ಹೋಗಿದ್ದು ಭಜರಂಗಿ 2 ಸಿನಿಮಾದ ಪ್ರದರ್ಶನದ ಮೇಲೆಯೂ ಪ್ರಭಾವ ಬೀರಿತ್ತು. ಭಾನುವಾರ ಪುನೀತ್ ಅಂತ್ಯಕ್ರಿಯೆ ಮುಗಿದ ಬಳಿಕ ಥಿಯೇಟರ್ ಒಫನ್ ಆಗಿದೆ. ಭಜರಂಗಿ 2 ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ ಶಿವಣ್ಣ ಪ್ರಮೋಶನ್ ನಲ್ಲಿ ಪಾಲ್ಗೊಳ್ಳದೇ ಇರೋದರಿಂದ ಚಿತ್ರಪ್ರದರ್ಶನದ ಮೇಲೆ ಪ್ರಭಾವ ಬೀರಿದೆ.

puneeth Raj Kumar Padmashri Demand shivaraj kumar reaction
ಪುನೀತ್‌ ರಾಜ್‌ ಕುಮಾರ್‌ ಅವರ ಜೊತೆಯಲ್ಲಿ ಸಹೋದರ ನಟ ಶಿವರಾಜ್‌ ಕುಮಾರ್

ಹೀಗಾಗಿ ತಮ್ಮನ ನಿಧನದ 15 ದಿನಗಳ ಬಳಿಕ ಶಿವಣ್ಣ ಭಜರಂಗಿ 2 ಸಿನಿಮಾ ತಂಡದ ಪರದಾಟಕ್ಕೆ ಸ್ಪಂದಿಸಲು ಶಿವಣ್ಣ ಮುಂದಾಗಿದ್ದಾರೆ. ಚಿತ್ರ ತಂಡಕ್ಕಾಗಿ ತಮ್ಮ ಕಷ್ಟ,ದುಃಖ ಬದಿಗಿಟ್ಟು ಶಿವಣ್ಣ ಸಿನಿಮಾ ಪ್ರಮೋಶನ್ ಗೆ ಸಿದ್ಧವಾಗಿದ್ದಾರೆ.

ಸಿನಿಮಾ‌ ಪ್ರಮೋಶನ್ ಗಾಗಿ ಶಿವಣ್ಣ ನವೆಂಬರ್ 14 ರಂದು ಪತ್ನಿ ಗೀತಾ ಶಿವರಾಜ್ ಕುಮಾರ್ ಗೆ ಬೆಂಗಳೂರಿನಲ್ಲಿ ಭಜರಂಗಿ 2 ಸಿನಿಮಾ ವೀಕ್ಷಿಸಲಿದ್ದಾರೆ. ಭಜರಂಗಿ 2 ಚಿತ್ರ ತಂಡದ ಸಂಕಷ್ಟಕ್ಕೆ ಸ್ಪಂದಿಸಲು ಶಿವಣ್ಣ ಶನಿವಾರದಿಂದಲೇ ಪ್ರಮೋಶನ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಇದರಿಂದ ಚಿತ್ರತಂಡ ಕೊಂಚ ಚೇತರಿಸಿಕೊಂಡಿದ್ದು ಶೋ ಗಳಿಗೆ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದು ನೀರಿಕ್ಷಿಸುತ್ತಿದೆ.

ಭಜರಂಗಿ 2 ಶೋದಲ್ಲೂ ಪಾಲ್ಗೊಂಡಿದ್ದ ಪುನೀತ್ ಸಿನಿಮಾ ರಿಲೀಸ್ ದಿನವೇ ಇನ್ನಿಲ್ಲವಾಗಿದ್ದರು. ಇದಕ್ಕೂ ಮುನ್ನ ಪುನೀತ್ ಭಜರಂಗಿ 2 ವಿತರಕರ ಜೊತೆ ಮಾತನಾಡಿ ಸಿನಿಮಾ ರೆಸ್ಪಾನ್ಸ್ ಬಗ್ಗೆಯೂ ಚರ್ಚೆ ನಡೆಸಿದ್ದರಂತೆ.

ಇದನ್ನೂ ಓದಿ : Ragini Dwivedi : Sorry ಕರ್ಮ ರಿಟರ್ನ್ಸ್ : ತುಪ್ಪದ ಬೆಡಗಿ ಹೊಸ ಅವತಾರ

ಇದನ್ನೂ ಓದಿ :  Expose ಬಳಿಕ ಎಣ್ಣೆ ಹಾಡು : ಡಿಂಪಲ್ ಕ್ವೀನ್ ಅವತಾರಕ್ಕೆ ಮೆಚ್ಚಿದ ಫ್ಯಾನ್ಸ್

( Shivraj Kumar Bhajarangi 2 has come to promotion after the death of Puneet Raj Kumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular