shivarajkumar : ಡಾ.ರಾಜ್ ಕುಮಾರ್ ಮನೆತನಕ್ಕೆ ಕೇವಲ ಚಂದನವನ ಮಾತ್ರವಲ್ಲದೇ ಇತರೆ ಸಿನಿಮಾ ಕ್ಷೇತ್ರಗಳಲ್ಲಿಯೂ ಸಹ ಅಪಾರ ಗೌರವವಿದೆ. ಸಿನಿಮಾ ಅಭಿಮಾನಿಗಳು ರಾಜ್ ಮನೆತನದ ಕುಡಿಗಳನ್ನು ಗೌರವದಿಂದ ಕಾಣುತ್ತಾರೆ. ಅದೇ ರೀತಿ ರಾಜ್ ಕುಟುಂಬವು ಕೂಡ ಅಭಿಮಾನಿಗಳನ್ನು ದೇವರ ಸ್ಥಾನದಲ್ಲಿಯೇ ಇರಿಸಿದೆ. ನಟ ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳ ಜೊತೆ ಮಸ್ತಿ ಮಾಡುವ ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರ್ತೇವೆ. ಈ ಬಾರಿ. ಆ್ಯಂಕರ್ ಅನುಶ್ರೀ ಶಿವಣ್ಣ ಜೊತೆಯಲ್ಲಿ ತಮಗಾದ ಸುಂದರ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ರಿಯಾಲಿಟಿ ಶೋ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅನುಶ್ರೀ ಹೊತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ನಟ ಶಿವರಾಜ್ ಕುಮಾರ್ ಕೂಡ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಅನುಶ್ರೀಗೆ ನಟ ಶಿವಣ್ಣ ವಿಶೇಷವಾದ ಉಡುಗೊರೆಯನ್ನು ನೀಡಿದ್ದು ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ನಟ ಶಿವಣ್ಣ ಧರಿಸಿದ್ದ ಜಾಕೆಟ್ ಒಂದು ಅನುಶ್ರೀಗೆ ತುಂಬಾನೇ ಇಷ್ಟವಾಗಿತ್ತು. ಅನುಶ್ರೀ ಶಿವಣ್ಣ ಬಳಿಯಲ್ಲಿ ಅಣ್ಣ ನಿಮ್ಮ ಜಾಕೆಟ್ ಚೆನ್ನಾಗಿದೆ ಎಂದು ಹೇಳಿದ್ದರಂತೆ. ಇದಕ್ಕೆ ಪ್ರತಿಯಾಗಿ ಶಿವಣ್ಣ ಈ ಜಾಕೆಟ್ ನಿನಗೇ ಕೊಡುತ್ತೇನೆಂದು ಹೇಳಿದ್ದರಂತೆ, ಸುಮ್ಮನೇ ಹೇಳಿರಬಹುದು ಎಂದು ಅನುಶ್ರೀ ಭಾವಿಸಿದ್ದರೆ ಶಿವಣ್ಣ ಮಾತ್ರ ದೊಡ್ಮನೆ ಪರಂಪರೆಯಂತೆ ಕೇಳಿದವರಿಗೆ ಕೊಡದೇ ಸುಮ್ಮನೇ ಹೋಗಿಲ್ಲ. ವಿತ್ ಲಾಟ್ಸ್ ಆಫ್ ಲವ್ ಡಿಯರೆಸ್ಟ್ ಫ್ರೆಂಡ್ ಅನು ಎಂದು ಬರೆದು ತಮ್ಮ ಸಹಿಯನ್ನು ಹಾಕಿ ಜಾಕೆಟ್ನ್ನು ಸ್ವತಃ ತಾವೇ ಅನುಶ್ರೀಗೆ ತೊಡಿಸಿದ್ದಾರೆ ಶಿವಣ್ಣ. ಈ ವಿಚಾರವನ್ನು ಸ್ವತಃ ಅನುಶ್ರೀ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮೂರು ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.ಹಾಗೂ ಈ ವಿಡಿಯೋ ನೋಡಿದ ಅನೇಕರು ನೀವೇ ಭಾಗ್ಯವಂತರು ಎಂದು ಕಮೆಂಟ್ ಕೂಡ ಮಾಡ್ತಿದ್ದಾರೆ .
ಇದನ್ನು ಓದಿ : India vs South Africa T20 : ಜುಲೈ 1, 2, 3ರಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ಹಣ ವಾಪಸ್
ಇದನ್ನೂ ಓದಿ : Jaspreet Bumrah to lead India : ಟೀಮ್ ಇಂಡಿಯಾಗೆ ಬುಮ್ರಾ ನಾಯಕ ?
shivarajkumar gifts jacket to anchor anushree in dance karnataka dance show