ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ದವಾಗಿದೆ. ಆದರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮಾತ್ರ ಸಿನಿಮಾದ ಕಥೆ ಕೇಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ಸದ್ಯದಲ್ಲಿಯೇ ಇಂದ್ರಸೇನನಾಗಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

ಲಾಕ್ ಡೌನ್ ನಿಂದಾಗಿ ಶಿವರಾಜ್ ಕುಮಾರ್ ಅವರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿಯೇ ಹಲವು ನಿರ್ದೇಶಕರು ಹೊಸ ಕಥೆಗಳನ್ನು ತಂದು ಶಿವಣ್ಣನಿಗೆ ಹೇಳ್ತಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನು ಕೇಳಿದ್ದಾರೆ. ಸಾಲು ಸಾಲು ಸಿನಿಮಾಗಳ ಆಫರ್ ಕೂಡ ಶಿವಣ್ಣನನ್ನ ಹುಡುಕಿಕೊಂಡು ಬರ್ತಿದೆ.

ಈಗಾಗಲೇ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ಶಿವರಾಜ್ ಕುಮಾರ್ ಇದೀಗ ಮತ್ತೊಂದು ಹೊಸ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಸಮಸ್ಯೆಯನ್ನೇ ಕಥಾಹಂದರ ಹೊಂದಿರುವ ಸಿನಿಮಾ ಒಂದಕ್ಕೆ ಶಿವರಾಜ್‌ಕುಮಾರ್ ಎಸ್ ಎಂದಿದ್ದಾರೆ.

ಈಗಾಗಲೇ ನಾಗರಹಾವು, ಸಂತ, ಮಲ್ಲಿಕಾರ್ಜುನ ಸಿನಿಮಾಗಳನ್ನು ನಿರ್ದೇಶಿಸಿದ್ದ ಮುರಳಿ ಮೋಹನ್ ನಿರ್ದೇಶನ ಮಾಡುತ್ತಿರೋ ಇಂದ್ರಸೇನಾ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸೋದಕ್ಕೆ ಶಿವಣ್ಣ ಒಪ್ಪಿಗೆ ನೀಡಿದ್ದಾರೆ.

ಭಾರತ ಹಲವು ಹೋರಾಟಗಳ ಮೂಲಕ ಬ್ರೀಟಿಷರ ದಾಸ್ಯದಿಂದ ಮುಕ್ತಿ ಪಡೆದಿದೆ. ಆದರೆ ಸ್ವಾತಂತ್ರ್ಯವನ್ನು ನಮ್ಮವರೇ ಕಿತ್ತುಕೊಳ್ಳುತ್ತಿದ್ದಾರೆ.

ಅದರಿಂದ ರಕ್ಷಿಸಲು ಯಾರಬರಬೇಕು ಅನ್ನೋ ಒಂದ್ ಲೈನ್ ಸ್ಟೋರಿ ಇಟ್ಕೊಂಡು ಮುರುಳು ಮೋಹನ್ ಇಂದ್ರಸೇನನನ್ನು ತೆರೆ ಮೇಲೆ ತರೋದಕ್ಕೆ ಹೊರಟಿದ್ದಾರೆ.

ಆರ್‌ಡಿಎಕ್ಸ್ ಸಿನಿಮಾದ ಕತೆ ಕೇಳಿ ಮುಗಿಸಿರುವ ಶಿವರಾಜ್ ಕುಮಾರ್, ರಥಾವರ ನಿರ್ದೇಶಕರ ಸಿನಿಮಾದಲ್ಲಿಯೂ ನಟಿಸುವುದು ಫಿಕ್ಸ್ ಆಗಿದೆ.

ಉಳಿದಂತೆ ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಹಾಗೂ ಎರಡು ರಿಮೇಕ್ ಸಿನಿಮಾಗಳಲ್ಲಿಯೂ ಶಿವಣ್ಣ ನಟಿಸಲಿದ್ದಾರೆ.

ಕರುನಾಡಚಕ್ರವರ್ತಿ ಶಿವರಾಜ್ ಕುಮಾರ್