ಜೂನ್ ಅಂತ್ಯದೊಳಗೆ 1 ಲಕ್ಷ ತಲುಪಲಿದೆ ಸೋಂಕಿತರ ಸಂಖ್ಯೆ : ಮುಂದಿನ ದಿನಗಳು ದೆಹಲಿಗೆ ದೊಡ್ಡ ಸವಾಲು : ಸಿಎಂ ಕೇಜ್ರಿವಾಲ್

0

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಜ್ಯ ರಾಜಧಾನಿ ದೆಹಲಿಯಲ್ಲಿ ಜೂನ್ 30ರ ಒಳಗೆ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದೆ. ಹೀಗಾಗಿ ಮುಂದಿನ ದಿನಗಳು ದೆಹಲಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜೂನ್ 15ರೊಳಗೆ ಸೋಂಕಿತರ ಸಂಖ್ಯೆ 44,000ಕ್ಕೆ ಏರಿಕೆಯಾಗಲಿದೆ. ಜೂನ್ 30ರೊಳಗೆ ಈ ಸಂಖ್ಯೆ ದ್ವಿಗುಣಗೊಂಡು 1 ಲಕ್ಷಕ್ಕೆ ಏರಿಕೆಯಾಗಲಿದೆ. ಜೂನ್. 15ರೊಳಗೆ ನಮಗೆ 6,681 ಹಾಸಿಗೆಗಳ ಅಗತ್ಯವಿದೆ. ಜೂನ್. 30ರೊಳಗೆ 15,000 ಹಾಸಿಗೆಗಳು ಬೇಕಿದೆ. ಜೂನ್. 31ರೊಳಗೆ 80,000 ಹಾಸಿಗೆಗಳ ಅಗತ್ಯ ಬೀಳಲಿದೆ ಎಂದಿದ್ದಾರೆ.

ಜನರ ಆಶೀರ್ವಾದದಿಂದ ನನ್ನ ಕೊರೊನಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ ಮಾಸ್ಕ ಬಳಕೆ, ಸಾಮಾಜಿಕ ಅಂತರ ಕಾಪಾಡುವ ಕುರಿತು ಜನತೆಯ ಆಂದೋಲನವಾಗಬೇಕು ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.