ಬೆಂಗಳೂರು: Shivrajkumar Movie: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ‘ವೇದ’ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಸದ್ಯ ಚಿತ್ರತಂಡ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಕಷ್ಟು ನಿರೀಕ್ಷೆಗಳನ್ನೇ ಸೃಷ್ಟಿಸಿರುವ ಶಿವಣ್ಣನ ವೇದ ಚಿತ್ರದ ಪೋಸ್ಟರ್ ಕಥೆಗಳನ್ನೇ ಹೇಳುವಂತಿದೆ. ಪೋಸ್ಟರ್‍ನಲ್ಲಿ ಶಿವಣ್ಣನ ಹಿಂದೆ ನಾಲ್ವರು ಮಹಿಳೆಯರನ್ನು ಬಿಂಬಿಸಲಾಗಿದ್ದು, ಪ್ರತೀ ಮಹಿಳೆಯ ಲುಕ್ ವಿಭಿನ್ನವಾಗಿ ಕಂಡುಬಂದಿದೆ. ಈ ಪೋಸ್ಟರ್ ನೋಡಿದ ಕೂಡಲೇ ನಾಲ್ವರು ಮಹಿಳೆಯರ ಹೋರಾಟದ ಹಾದಿಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ದೇಶಕ ಕಥೆ ಹೆಣೆದಂತೆ ಭಾಸವಾಗುತ್ತಿದೆ.
1960ರ ಕಾಲಘಟ್ಟವನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎನ್ನಲಾಗುತ್ತಿದೆ. ಎ.ಹರ್ಷ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸ್ವತಃ ಶಿವರಾಜ್ ಕುಮಾರ್ ಅವರೇ ತಮ್ಮ ಬ್ಯಾನರ್ ಮೂಲಕವೇ ಸಿನಿಮಾ ನಿರ್ಮಿಸುತ್ತಿರುವುದು ವಿಶೇಷ. ಪೋಸ್ಟರ್ ಮೂಲಕವೇ ಕುತೂಹಲ ಕೆರಳಿಸಿರುವ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿರುವುದು ಶಿವಣ್ಣನ ಅಭಿಮಾನಿಗಳಿಗೆ ಚಿತ್ರತಂಡ ದೀಪಾವಳಿ ಗಿಫ್ಟ್ ನೀಡಿದಂತಿದೆ. ಒಂದೆರಡು ಪೋಸ್ಟರ್ ಗಳ ಮೂಲಕವೇ ಕಂಟೆಂಟ್ ಬಿಟ್ಟುಕೊಡುತ್ತಿದ್ದ ನಿರ್ದೇಶಕ ಎ.ಹರ್ಷ ಇದೀಗ ರಿಲೀಸ್ ಡೇಟ್ ಕೂಡಾ ತಿಳಿಸಿದ್ದಾರೆ.
ಅಂದಹಾಗೆ, ವೇದ ಸಿನಿಮಾ ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 23ರಂದು ತೆರೆ ಕಾಣಲಿದೆ. ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಕ್ರಿಸ್‍ಮಸ್‍ಗೆ 2 ದಿನ ಮುಂಚಿತವಾಗಿ ತೆರೆ ಮೇಲೆ ಅಬ್ಬರಿಸಲಿದೆ. ಈ ಹಿಂದೆ ರಿಲೀಸ್ ಮಾಡಿದ್ದ ಮೋಶನ್ ಪೋಸ್ಟರ್ ನಲ್ಲಿ ಕೇವಲ ಶಿವಣ್ಣನನ್ನು ತೋರಿಸಲಾಗಿದ್ದು. ಹೋರಾಟದ ಹಾದಿಯನ್ನು ಹಿಡಿದ ಕಥಾ ನಾಯಕನಾಗಿ ಶಿವಣ್ಣ ಕಂಡುಬಂದಿದ್ದರು. ಇದೀಗ ರಿಲೀಸ್ ಆಗಿರುವ 2ನೇ ಪೋಸ್ಟರ್ ನಲ್ಲಿ ನಾಲ್ವರು ಮಹಿಳಾ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ.
ಪೋಸ್ಟರ್ ನಲ್ಲಿ ಕಾಣಿಸಿಕೊಂಡ ಪ್ರತೀ ಮಹಿಳೆಯ ಮುಖದಲ್ಲೂ ಆಕ್ರೋಶದ ಕಿಚ್ಚನ್ನು ಕಾಣಬಹುದಾಗಿದೆ. ಈ ಹಿಂದಿನ ಪೋಸ್ಟರ್ ನಲ್ಲಿ ಚಿತ್ರ ಡಿಸೆಂಬರ್ ನಲ್ಲಿ ರಿಲೀಸ್ ಮಾಡೋದಾಗಿ ಚಿತ್ರತಂಡ ಸೂಚನೆ ನೀಡಿತ್ತು. ಇದೀಗ ಮೂಡಿಬಂದ ಮತ್ತೊಂದು ಪೋಸ್ಟರ್ ನಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ವೇದ ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ಶ್ವೇತಾ ಚೆಂಗಪ್ಪ, ಅದಿತಿ ಸಾಗರ್, ಗಾನವಿ ಲಕ್ಷ್ಮಣ, ವೀಣಾ ಪೊನ್ನಪ್ಪ ಪ್ರಮುಖ ನಾಲ್ವರು ಮಹಿಳಾ ಪಾತ್ರಧಾರಿಗಳಾಗಿ ಬಣ್ಣ ಹಚ್ಚಿದ್ದಾರೆ. 1960ರ ಕಾಲದಲ್ಲಿ ಮಹಿಳೆಯರಿಗೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನಾಯಕನಾಗಿ ಶಿವಣ್ಣನನ್ನು ನೋಡಬಹುದಾಗಿದೆ. ಶಿವಣ್ಣನ ಪತ್ನಿ ಗೀತಾ ಶಿವರಾಜ್ ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದು, ಜೀ ಸ್ಟುಡಿಯೋಸ್ ಸಾಥ್ ನೀಡಿದೆ.
ಇದನ್ನೂ ಓದಿ: Puneeth Parva : “ಪುನೀತ್ ಪರ್ವ” “ಗಂಧದಗುಡಿ” ಫ್ರೀ ರೀಲಿಸ್ ಕಾರ್ಯಕ್ರಮ : ಅಭಿಮಾನಿಗಳಿಗೆ ಹಬ್ಬ
ಇದನ್ನೂ ಓದಿ: Chetan Kantara : ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ ವಿರುದ್ಧ ದೂರು ದಾಖಲು
Shivrajkumar ‘Veda’ movie is to release on December 23rd