Diwali 2022 : ಈ ದೀಪಾವಳಿಗೆ ನಿಮ್ಮ ಮನೆಯನ್ನು ಹೀಗೆ ಸಿಂಗರಿಸಿ ; ಇವು ಬಜೆಟ್‌- ಫ್ರೆಂಡ್ಲಿ ಐಡಿಯಾಗಳು

ಈ ವರ್ಷದ ಬೆಳಕಿನ ಹಬ್ಬ ದೀಪಾವಳಿ (Diwali 2022) ಇನ್ನೇನು ಬಂದೇ ಬಿಟ್ಟಿತು. ಮನೆಯಲ್ಲಿ ಸಿದ್ಧತೆಗಳು ಭರದಿಂದಲೇ ಸಾಗುತ್ತಿರುತ್ತವೆ. ಹಬ್ಬಕ್ಕಿಂತ ಮೊದಲು ಮನೆ ಸ್ವಚ್ಛಗೊಳಿಸುವುದು ದೊಡ್ಡ ಸಾಹಸವೇ ಸರಿ. ದೀಪಾವಳಿಯಲ್ಲಿ ಮನೆಯನ್ನು ವಿಶೇಷವಾಗಿ ಸಿಂಗರಿಸುವುದರಿಂದಲೇ ಈ ಹಬ್ಬ ವಿಶೇಷವಾಗಿದೆ. ಅದಕ್ಕಾಗಿ ವಾರದ ಮೊದಲೇ ತಯಾರಿಯೂ ನಡೆಯುತ್ತಿರುತ್ತದೆ. ಇದು ಬೆಳಕಿನ ಹಬ್ಬವಾದ್ದರಿಂದ ಹಣತೆ, ಲ್ಯಾಂಪ್‌, ಆಕಾಶ ಬುಟ್ಟಿಗಳ ಖರೀದಿಯೂ ಜೋರಾಗಿಯೇ ಇರುತ್ತದೆ.

ಪ್ರತಿಯೊಬ್ಬರಿಗೂ ಅವರ ಮನೆಯನ್ನು ವಿಶೇಷವಾಗಿ ಅಲಂಕರಿಸಿಬೇಕು ಎನ್ನುವ ಆಸೆ ಇರುತ್ತದೆ. ಆದರೆ ಬಹಳ ದುಬಾರಿ ವಸ್ತುಗಳನ್ನು ಕೊಳ್ಳಲು ಯೋಚನೆ ಮಾಡುವಂತಾಗುತ್ತದೆ. ಅದಕ್ಕಾಗಿ ನಾವು ಇಲ್ಲಿ ಕೆಲವು ಬಜೆಟ್‌ ಫ್ರೆಂಡ್ಲಿ ಐಡಿಯಾಗಳನ್ನು ಕೊಟ್ಟಿದ್ದೇವೆ. ಇದು ನಿಮ್ಮ ಮನೆಯನ್ನು ಸುಂದರವಾಗಿಸುವುದಲ್ಲದೇ ಖರ್ಚಿನ ಹೊರೆಯನ್ನು ಕಡಿಮೆ ಮಾಡುತ್ತದೆ.

ದೀಪಾವಳಿ ತೋರಣಗಳು
ವಾಲ್ ಹ್ಯಾಂಗಿಂಗ್‌ಗಳು ಅಥವಾ ದೀಪಾವಳಿ ತೋರಣಗಳನ್ನು ಖರೀದಿಸಿ. ಇವುಗಳನ್ನು ದೀಪಾವಳಿ ಮತ್ತು ಇತರ ಹಬ್ಬಗಳ ಅಲಂಕಾರದಲ್ಲೂ ಬಳಸಿಕೊಳ್ಳಬಹುದು. ಅವು ನಿಮ್ಮ ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಆಕಾಶ ಬುಟ್ಟಿಗಳು
ಆಕಾಶ ಬುಟ್ಟಿಗಳಿರದಿದ್ದರೆ ದೀಪಾವಳಿಯೇ ಆಗುವುದಿಲ್ಲ. ದೀಪಾವಳಿಯ ವಿಶೇಷವೇ ಇದು. ಆಕಾಶ ಬುಟ್ಟಿಗಳು ಮನೆಯಲ್ಲಿನ ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹರಡುತ್ತದೆ ಎಂಬ ನಂಬಿಕೆಯಿದೆ. ಮನೆಯ ಮುಂದೆ ತೂಗುಹಾಕುವ ಆಕಾಶ ಬುಟ್ಟಿಗಳು ನೋಡುಗರ ಕಣ್ಮನ ಸೆಳೆಯುವಂತೆ ಮಾಡುತ್ತದೆ.

ಹೂವುಗಳು
ನಿಮ್ಮ ಮನೆಯನ್ನು ಹೂವುಗಳಿಂದ ಅಲಂಕರಿಸಿಬೇಕು ಅಂದುಕೊಂಡಿದ್ದರೆ ಅದು ಬಹಳ ಉತ್ತಮ ಐಡಿಯಾ. ಹೂವುಗಳು ಅದ್ಭುತ ಅಲಂಕಾರಿಕ ವಸ್ತುಗಳಾಗಿವೆ. ನೀವು ಕೃತಕ ಹೂವುಗಳನ್ನು ಬಳಸಬಹುದು. ಅವುಗಳನ್ನು ಶಾಶ್ವತವಾಗಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಬಳಸಿಕೊಳ್ಳಬಹುದು. ನೀವು ಬಾಲ್ಕನಿಗಳು ಮತ್ತು ಟೆರೇಸ್‌ನಲ್ಲಿ ಹೂವುಗಳ ಪಾಟ್‌ಗಳನ್ನು ಇಡಬಹುದು.

ಬಣ್ಣ ಬಣ್ಣದ ದೀಪಗಳು
ಪ್ರಕಾಶಮಾನವಾದ ಮತ್ತು ವರ್ಣರಂಜಿತ ಎಲ್ಇಡಿ ಸ್ಟ್ರಿಪ್ ದೀಪಗಳೊಂದಿಗೆ ನಿಮ್ಮ ಮನೆ ಬೆಳಗಿಸಬಹುದು. ಹ್ಯಾಂಗಿಗ್‌ ದೀಪಗಳು ಹಲವು ಬಗೆಗಳಲ್ಲಿ ಬರುತ್ತವೆ. ವಿಧವಿಧದ ಆಕಾರದಲ್ಲಿರುವ ಇವುಗಳಿಂದ ಅಲಂಕರಿಸಿದಾಗ ಮನೆ ಸುಂದರವಾಗಿ ಕಾಣಿಸುತ್ತದೆ. ಇವುಗಳು ಮನೆಯ ಒಳಾಂಗಣದ ಮೆರುಗನ್ನು ಹೆಚ್ಚಿಸುತ್ತವೆ.

ಹಣತೆ
ದೀಪಗಳು ಮನುಷ್ಯನನ್ನು ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುತ್ತವೆ. ಇದು ಮನೆಯಲ್ಲಿ ಧನಾತ್ಮಕ ಭಾವನೆಗಳು ಮೂಡುವಂತೆ ಮಾಡುತ್ತದೆ. ಅದಕ್ಕಾಗಿಯೇ ದೀಪಗಳನ್ನು ಅತ್ಯಂತ ಮಹತ್ವದ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪಾವಳಿಯಲ್ಲಿ ಹಣತೆಗಳು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ನಿಮ್ಮ ಮನೆಯಲ್ಲಿ ವಿವಿಧ ಸ್ಥಳಗಳನ್ನು ಅಲಂಕರಿಸಲು ಹಣತೆಗಳನ್ನು ಬಳಸಬಹುದು. ಅವು ಮನೆಗೆ ಹೊಳಪು, ಬೆಳಕು ಮತ್ತು ಪರಿಮಳವನ್ನು ನೀಡುತ್ತವೆ.

ಮೆಟಾಲಿಕ್ ಶೋಪೀಸ್
ಹಬ್ಬದ ಸೀಸನ್‌ಗಾಗಿ ಮನೆಯನ್ನು ಬೆಳಗಿಸಲು ಶೋಪೀಸ್‌ಗಳ ಆಯ್ಕೆ ಉತ್ತಮ ಮಾರ್ಗವಾಗಿದೆ. ನಿಮ್ಮ ಮನೆಯ ವಿವಿಧ ಸ್ಥಳಗಳನ್ನು ಮೆಟಾಲಿಕ್‌ ಶೋಪೀಸ್‌ ನಿಂದ ಅಲಂಕರಿಸಿ. ಅದರಲ್ಲೂ ಹಬ್ಬಕ್ಕೆ ಹೊಂದಿಕೆಯಾಗುವಂತವುಗಳು ಉತ್ತಮವಾಗಿರುತ್ತದೆ. ಈ ಶೋಪೀಸ್‌ಗಳು ನಿಮ್ಮ ಮನೆಗೆ ಐಷಾರಾಮಿ ನೋಟವನ್ನು ಒದಗಿಸುತ್ತವೆ.

ರಂಗೋಲಿ
ರಂಗೋಲಿಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರಲು ಸಂಕೇತ ಎನ್ನುತ್ತಾರೆ. ನಿಮ್ಮ ಮನೆಯ ಮುಂದೆ ಸುಂದರವಾದ ರಂಗೋಲಿಯನ್ನು ಹಾಕಲು ಹೂವುಗಳು, ಬಣ್ಣಗಳನ್ನು ಉಪಯೋಗಿಸಬಹುದು.

ಇದನ್ನೂ ಓದಿ : Diwali Firecrackers Ban : ದೀಪಾವಳಿ ಪಟಾಕಿ ನಿಷೇಧ : ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು

ಇದನ್ನೂ ಓದಿ : Jewelries : ಹಬ್ಬಗಳಲ್ಲಿ ವಿಶೇಷವಾಗಿ ಕಾಣಿಸಲು ಒಕ್ಸಿಡೈಸ್ಡ್‌ ಆಭರಣಗಳೇ ಬೆಸ್ಟ್‌..

(Diwali 2022 budget-friendly decoration ideas for the Diwali celebration)

Comments are closed.