Shraddha Kapoor : ಡ್ರಗ್ಸ್ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿದ್ಧಾಂತ್ ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಸಿದ್ದಾಂತ್ರನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಎಂಜಿ ರಸ್ತೆಯ ಟ್ರಿನಿಟಿ ಸರ್ಕಲ್ನಲ್ಲಿರುವ ದಿ ಪಾರ್ಕ್ ಎಂಬ 5 ಸ್ಟಾರ್ ಹೋಟೆಲ್ನ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ಅನೇಕರನ್ನು ವಶಕ್ಕೆ ಪಡೆದಿದ್ದರು. ಬಳಿಕ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತಯ. ಪರೀಕ್ಷೆಗೆ ಒಳಗಾದ 35 ಜನರ ಪೈಖಿ ಐವರು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಗುಂಪಿನ ಭಾಗವಾಗಿದ್ದ ಸಿದ್ಧಾಂತ್ ಕಪೂರ್ನನ್ನು ಬಂಧಿಸಿರುವ ಪೊಲೀಸರು ಹಲಸೂರು ಠಾಣೆಯಲ್ಲಿ ಇರಿಸಿದ್ದಾರೆ.
37 ವರ್ಷದ ಸಿದ್ಧಾಂತ್ ಕಪೂರ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಹಾಗೂ ನಟಿ ಶ್ರದ್ಧಾ ಕಪೂರ್ ಸಹೋದರನಾಗಿದ್ದಾರೆ. ಸಿದ್ಧಾಂತ್ ಕಪೂರ್ ಶೂಟೌಟ್ @ ವಡಾಲಾ, ಹಸೀನಾ ಪಾರ್ಕರ್, ಜಸ್ಬಾ ಹಾಗೂ ಕ್ರೈಂಮ್ ಥ್ರಿಲ್ಲರ್ ವೆಬ್ ಸೀರಿಸ್ ಆಗಿರುವ ಭೌಕಾಲ್ನಲ್ಲಿ ಕಾಣಿಸಿಕೊಂಡಿದ್ದಾರೆ .
ಈ ಮೊದಲು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಡ್ರಗ್ ಸೇವನೆ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್ ಹೆಸರು ಕೂಡ ಕೇಳಿ ಬಂದಿತ್ತು. ಈ ಸಂಬಂಧ ಎನ್ಸಿಬಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ರನ್ನು ವಿಚಾರಣೆಗೆ ಹಾಜರುಪಡಿಸಿತ್ತು. ಆದರೆ ತನಿಖೆ ವೇಳೆ ಶ್ರದ್ಧಾ ಕಪೂರ್ ಮಾದಕ ದ್ರವ್ಯ ಸೇವನೆ ಸಾಬೀತಾಗದ ಹಿನ್ನೆಲೆಯಲ್ಲಿ ಎನ್ಸಿಬಿ ಅವರ ಹೆಸರನ್ನು ಕೈ ಬಿಟ್ಟಿತ್ತು . ನಟ ಸಿದ್ಧಾಂತ್ ಕಪೂರ್ ಜೊತೆಯಲ್ಲಿ ಅಖೀಲ್ ಸೋನಿ, ಅಜೋದ್ ಸಿಂಗ್ ಪಂಜಾಬ್,ಅಖಿಲ್, ಅನಿ, ದರ್ಶನ್ ಸುರೇಶ್ರನ್ನು ಪೊಲೀಸರು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್
ಇದನ್ನೂ ಓದಿ : Teen Shot Mother :ಮೊಬೈಲ್ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ
Shraddha Kapoor’s brother & shakti kapoor son Siddhant Kapoor was detained in Bangalore for taking drugs