ಸೋಮವಾರ, ಏಪ್ರಿಲ್ 28, 2025
HomeCinemaBy Two Love promotion : ಬೈಟ್ ಟೂ ಲವ್ ಗಾಗಿ ಸೌಟು ಹಿಡಿದ ಶ್ರೀಲೀಲಾ...

By Two Love promotion : ಬೈಟ್ ಟೂ ಲವ್ ಗಾಗಿ ಸೌಟು ಹಿಡಿದ ಶ್ರೀಲೀಲಾ : ದಾವಣಗೆರೆಯಲ್ಲಿ ದೋಸೆ ಹಾಕಿದ ಭರ್ಜರಿ ಬೆಡಗಿ

- Advertisement -

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡ್ತಿರೋ ಬೆಡಗಿ ಶ್ರೀಲೀಲಾ. ಸಾಲು ಸಾಲು ಸಿನಿಮಾ, ಹೂವಿನಂತ ನಗು ಬಿರಿದ ಮಲ್ಲಿಗೆಯ ಸೌಂದರ್ಯದ ಶ್ರೀಲೀಲಾ ಈಗ ಬೈ ಟು ಲವ್ (By Two Love promotion) ಅಂತಿದ್ದಾರೆ. ಅಷ್ಟೇ ಅಲ್ಲ ಬಿಸಿ ಬಿಸಿ ಕಾದ ಹೆಂಚಿನ ಮೇಲೆ ದೋಸೆ ಹಾಕಿದ್ದಾರೆ. ಅಯ್ಯೋ ಸ್ಯಾಂಡಲ್ ವುಡ್ ನ ಫೇಮಸ್ ಹಿರೋಯಿನ್ ಗೆ ದೋಸೆ ಹಾಕೋ ಸ್ಥಿತಿ ಯಾಕೆ ಬಂತು ಅಂದ್ರಾ ಇದು ಕೇವಲ ಪ್ರಮೋಶನ್ ಗೆ.

ಹೌದು ಭರ್ಜರಿಯಂತಹ ಹಿಟ್ ಸಿನಿಮಾದ ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ ಈಗ ಬಜಾರ್ ಹೀರೋ ಜೊತೆ ಬೈಟ್ ಟು ಲವ್ ಅಂತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾದ ಪ್ರಚಾರಕ್ಕಾಗಿ ಶ್ರೀಲೀಲಾ ಹಾಗೂ ಚಿತ್ರತಂಡ ರಾಜ್ಯದ ಹಲವೆಡೆಗೆ ಭೇಟಿ ನೀಡ್ತಿದೆ. ಇದೇ ಸಿನಿಮಾ ಪ್ರಚಾರಕ್ಕೆ ಧನ್ವೀರ್ ಹಾಗೂ ಶ್ರೀಲೀಲಾ ದಾವಣಗೆರೆಗೆ ಭೇಟಿ ‌ಕೊಟ್ಟಿದ್ದಾರೆ. ದಾವಣಗೆರೆ ಅಂತಿದ್ದಂತೆ ಜನಕ್ಕೆ ನೆನಪಾಗೋದು ದಾವಣಗೆರೆಯ ಬೆಣ್ಣೆ ದೋಸೆ. ಹೀಗೆ ಫೇಮಸ್ ಆಗಿರೋ ದಾವಣಗೆರೆಯ ದೋಸೆ ಸವಿಯೋದಿಕ್ಕೆ ದೋಸೆ ಕ್ಯಾಂಪ್ ಗೆ ಭೇಟಿ ಕೊಟ್ಟ ವೇಳೆ ಶ್ರೀಲೀಲಾ ಸ್ವತಃ ದೋಸೆ ಹಾಕೋ ಮೂಲಕ ಅಡುಗೆ ಭಟ್ಟರಾಗಿದ್ದಾರೆ. ಬಿಸಿ ಬಿಸಿ ಕಾವಲಿ ಮೇಲೆ ಶ್ರೀಲೀಲಾ ನಾಜೂಕಾಗಿ ಮಾಡಿದ ದೋಸೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಜನರು ಶ್ರೀಲೀಲಾ ನೋಡಬೇಕೋ ಅಥವಾ ಶ್ರೀಲೀಲಾ ಮಾಡಿರೋ ದೋಸೆ ನೋಡ್ಬೇಕಾ ಅಂತ ಕನಪ್ಯೂಸ್ ಆಗಿದ್ದಾರೆ. ಪಕ್ಕಾ ಲವ್ ಸ್ಟೋರಿಯಾಗಿರೋ ಬೈಟ್ ಟೂ ಲವ್ ನಲ್ಲಿ ಧ್ವನೀರ್ ದಾವಣಗೆರೆಯ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಮಲೆನಾಡ ಹುಡುಗಿಯಾಗಿ‌ ಮಿಂಚಿದ್ದಾರೆ. ಅಲೇಮಾರಿ ನಿರ್ದೇಶಿಸಿದ್ದ ಹರಿ ಸಂತು ಬೈಟ್ ಟೂ ಲವ್ ನಿರ್ದೇಶಿಸಿದ್ದು, ಸುಪ್ರೀತ್ ಸಿನಿಮಾ‌ನಿರ್ಮಿಸುತ್ತಿದ್ದಾರೆ. ಸಿನಿಮಾಗೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಗೆ ಸಿನಿಮಾಗೆ ಸಾಹಿತ್ಯ ನೀಡಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಸಿನಿಮಾದ ನೀನೇ ನೀನೇ ಟ್ರ್ಯಾಕ್ ಸಾಂಗ್ ಯುವಜನತೆಯ ಮನಸ್ಸು ಗೆದ್ದಿದೆ. ಚಿತ್ರದ ಛಾಯಾಗ್ರಹಣವು ಸುಂದರವಾಗಿ ಮೂಡಿಬಂದಿದೆ. ಸದ್ಯದಲ್ಲೇ ತೆರೆಗೆ ಬರಲಿರೋ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ . ಈ ಸಿನಿಮಾದಲ್ಲಿ ಧನ್ವೀರ್ ಲವ್ವರ್ ಬಾಯ್ ಪಾತ್ರದಲ್ಲಿ ನಟಿಸಿದ್ದು, ಫೆ.೧೮ ರಂದು ಸಿನಿಮಾ ರಾಜ್ಯದಾದ್ಯಂತ ತೆರೆಕಾಣಲಿದೆ.

ಇದನ್ನೂ ಓದಿ : 100 ಕೋಟಿ ಗಳಿಸಿದ ಚಿತ್ರಗಳು ಮತ್ತು ಅವುಗಳನ್ನು ನಿರ್ಮಿಸಿದ ಬಜೆಟ್; ಕುತೂಹಲಕರ ಮಾಹಿತಿ ಇಲ್ಲಿದೆ

ಇದನ್ನೂ ಓದಿ : ಪ್ಲಸ್ ಸೈಜ್ ಮಾಡೆಲ್ ಎಲ್ಲಿಲ್ಲದ ಬೇಡಿಕೆ: ಹಸೀಕ್ವಾಜೀ ಹಸಿಬಿಸಿ ಪೋಟೋ ವೈರಲ್

(Shri Leela is the actress who made the Davangere butter cake at the hotel in By Two Love promotion)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular