Indian Army Recruitment 2022: ಪಿಯು ಮುಗಿಸಿದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; 7ನೇ ವೇತನ ಆಯೋಗದ ಅನ್ವಯ ಸಂಬಳ

ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ (CDM) ತನ್ನ ಅಧಿಕೃತ ಪೋರ್ಟಲ್ (cdm.ap.nic.in) ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (lower division clerk) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (multi tasking staff) ಹುದ್ದೆಗೆ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಪ್ರತಿಯೊಂದು ಹುದ್ದೆಗೂ ಕೇವಲ ಒಂದು ಪೋಸ್ಟ್ ಮಾತ್ರ ಲಭ್ಯವಿದೆ. 12ನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.(Indian Army Recruitment 2022). ಆಸಕ್ತ ಅಭ್ಯರ್ಥಿಗಳು ಜಾಹೀರಾತು ಬಿಡುಗಡೆಯಾದ 30 ದಿನಗಳ ಒಳಗೆ ಅಂದರೆ ಮಾರ್ಚ್ 7, 2022 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು 7 ನೇ ವೇತನ ಆಯೋಗದ (7 ನೇ CPC) ಪ್ರಕಾರ ವೇತನವನ್ನು ಪಡೆಯುತ್ತಾರೆ. ವಿವರವಾದ ಅರ್ಹತಾ ಮಾನದಂಡಗಳು, ಹುದ್ದೆಯ ವಿವರಗಳು ಮತ್ತು ಈ ನೇಮಕಾತಿ ಡ್ರೈವ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಭಾರತೀಯ ಸೇನೆಯ ನೇಮಕಾತಿ 2022: ಅರ್ಹತೆ ಹಾಗೂ ಮಾನದಂಡ
ಶೈಕ್ಷಣಿಕ ಅರ್ಹತೆ:
ಲೋವರ್ ಡಿವಿಷನ್ ಕ್ಲರ್ಕ್ – ಅರ್ಜಿದಾರರು ಮಾನ್ಯತೆ ಪಡೆದ ಶಾಲೆ/ಬೋರ್ಡ್‌ನಿಂದ 12 ನೇ ತರಗತಿ.ಉತ್ತೀರ್ಣರಾಗಿರಬೇಕು
ಮಲ್ಟಿ ಟಸ್ಕಿಂಗ್ ಸಿಬ್ಬಂದಿ – ಈ ಹುದ್ದೆಗೆ, ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿದಾರರು ಕಂಪ್ಯೂಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 35 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗವನ್ನು ಹೊಂದಿರಬೇಕು (ಸಮಯ – 10 ನಿಮಿಷಗಳು).
ವಯಸ್ಸಿನ ಮಿತಿ:
ಲೋವರ್ ಡಿವಿಷನ್ ಕ್ಲರ್ಕ್ – ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಮತ್ತು ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು.
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ – ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು.
ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅರ್ಜಿದಾರರನ್ನು ಪ್ರಾಯೋಗಿಕ/ಕೌಶಲ್ಯ ಪರೀಕ್ಷೆಯ ನಂತರ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ
ಹಂತ 1:
ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ (https://cdm.ap.nic.in/.)
ಹಂತ 2:
ಮುಖಪುಟದಲ್ಲಿ ಇತ್ತೀಚಿನ ಮಾಹಿತಿಯ ಅಡಿಯಲ್ಲಿ (“VACANCY IN POST OF LDC & MTS” )ಮೇಲೆ ಕ್ಲಿಕ್ ಮಾಡಿ
ಹಂತ 3:
ಪಿಡಿಎಫ್ ತೆರೆಯುತ್ತದೆ. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅದರಲ್ಲಿ ಲಗತ್ತಿಸಲಾದ ಅಪ್ಲಿಕೇಶನ್ ಪ್ರೊಫಾರ್ಮಾವನ್ನು ಡೌನ್‌ಲೋಡ್ ಮಾಡಿ.
ಹಂತ 4:
ಅದರ ಪ್ರಿಂಟ್ ಔಟ್ ತೆಗೆದುಕೊಂಡು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಅಂಟಿಸಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
ಹಂತ 5:
ನಿಮ್ಮ ಅರ್ಜಿಯನ್ನು ಸೀಲ್ ಮಾಡಿ, “ದಿ ಕಮಾಂಡೆಂಟ್, ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್, ಸೈನಿಕಪುರಿ, ಸಿಕಂದರಾಬಾದ್, ತೆಲಂಗಾಣ 500 094” ಕ್ಕೆ ಮಾರ್ಚ್ 7ರ ಒಳಗೆ ಕಳುಹಿಸಿ.

ಇದನ್ನೂ ಓದಿ: Bank Recruitment 2022: ಪದವಿ ಮುಗಿಸಿದವರಿಗೆ ಬಂಪರ್; 78,230 ರೂ.ರವರೆಗೆ ಸಂಬಳದ ಆಫರ್ ಇರುವ ಉದ್ಯೋಗ

(Indian Army Recruitment 2022 news salary as 7th pay commission)

Comments are closed.