ಶುಕ್ರವಾರ, ಮೇ 2, 2025
HomeCinemaSiddharth Aditi Rao : ಮುಂಬೈ ಹೋಟೆಲ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಿದ್ಧಾರ್ಥ - ಅದಿತಿ

Siddharth Aditi Rao : ಮುಂಬೈ ಹೋಟೆಲ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಿದ್ಧಾರ್ಥ – ಅದಿತಿ

- Advertisement -

ಸೌತ್‌ ಮತ್ತು ಬಾಲಿವುಡ್‌ನಲ್ಲಿ ಸಿದ್ಧಾರ್ಥ ಮತ್ತು ಅದಿತಿ (Siddharth Aditi Rao) ಲವ್‌ ಸ್ಟೋರಿ ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ಇವರಿಬ್ಬರು ಡೇಟಿಂಗ್‌ ಮಾಡುತ್ತಿರುವ ಸುದ್ದಿ ಹೊರಬೀಳುತ್ತಿದ್ದಂತೆ ಮುಂಬೈ ಹೋಟೆಲ್‌ ಒಂದರಲ್ಲಿ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ ನಟಿ ಸೌಂದರ್ಯಕ್ಕೆ ಸೌತ್‌ ನಟ ಮಾರು ಹೋಗಿದ್ದಾರೆ.

ತೆಲುಗಿನ ಸಿನಿಮಾವೊಂದರಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿಯ ನಡುವೆ ಅಲ್ಲಿಂದ ಪ್ರೇಮ ಪಯಣ ಶುರುವಾಗಿದೆ. ಈಗ ಮುಂಬೈನಲ್ಲಿ ನಾಲ್ಕೈದು ತಿಂಗಳುಗಳಿಂದ ಇವರಿಬ್ಬರು ಜೊತೆಯಾಗಿ ವಾಸಿಸುತ್ತಿದ್ದಾರೆ. ಇಬ್ಬರು ಮುಂಬೈ ಹೋಟೆಲ್‌ನಿಂದ ಹೊರಗೆ ಬರುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ಆ ವೇಳೆಯಲ್ಲಿ ಪೋಟೋ ತೆಗೆಯಲು ಬಂದವರ ವಿರುದ್ಧ ನಟ ಸಿದ್ಧಾರ್ಥ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೂಡ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಾಗ ಆಗ ಕೂಡ ಸಿದ್ಧಾರ್ಥ ಕೋಪಗೊಂಡು, “ನನಗೆ ಇದೆಲ್ಲ ಇಷ್ಟ ಆಗುವುದಿಲ್ಲ. ನಾನು ತುಂಬಾನೇ ಕೂಲ್‌ ಆಗಿ ಹೇಳುತ್ತಿದ್ದೇನೆ. ನಾನು ಇಲ್ಲಿಯವನಲ್ಲ. ಇಲ್ಲಿಯವರು ಬಂದರೆ ನೀವು ಫೋಟೋ ತೆಗೆದುಕೊಳ್ಳಿ. ಮುಂದಿನ ಬಾರಿ ನಾನು ಇಷ್ಟು ವಿನಮ್ರವಾಗಿ ಮಾತನಾಡುವುದಿಲ್ಲ” ಎಂದಿದ್ದಾರೆ. ಅದರಂತೆ ಈ ಬಾರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : K Muralidharan: ಖ್ಯಾತ ನಿರ್ಮಾಪಕ ಕೆ ಮುರಳೀಧರನ್ ಇನ್ನಿಲ್ಲ

ಇದನ್ನೂ ಓದಿ : Kerala High Court: ‘ವರಾಹ ರೂಪಂ’ ಹಾಡಿಗೆ ತಪ್ಪದ ಸಂಕಷ್ಟ: ತೈಕುಡಂ ಬ್ರಿಡ್ಜ್ ದಾವೆ ತಿರಸ್ಕರಿಸಿದ್ದ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

ಇದನ್ನೂ ಓದಿ : Hansika Motwani’s mehendi celebration : ಜೈಪುರ ಕೋಟೆ ಅರಮನೆಯಲ್ಲಿ ನಟಿ ಹನ್ಸಿಕಾ ಮೋಟ್ವಾನಿ ಮೆಹಂದಿ ಸಂಭ್ರಮ

ನಟಿ ಅದಿತಿ ರಾವ್‌ ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೇ ಅವರು ಸ್ವಂತ ಮನೆಯನ್ನು ಹೊಂದಿದ್ದಾರೆ. ಈ ಜೋಡಿ ಪರಸ್ಪರ ಪ್ರೀತಿಸುತ್ತಿರುವ ಸುದ್ದಿ ಹರಿದಾಡುತ್ತಿದ್ದರು ಕೂಡ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ನಟ ಸಿದ್ಧಾರ್ಥ ಮತ್ತು ಅದಿತಿ ಸಾಕಷ್ಟು ಬಾರೀ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ಗೂಡ್‌ ನ್ಯೂಸ್‌ ಕೊಡತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

Siddharth Aditi Rao: Siddharth – Aditi was caught on camera in a Mumbai hotel

RELATED ARTICLES

Most Popular