Rape and Murder Case: ಅಪ್ಪನ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಆರೋಪಿ

ಮುಂಬೈ: (Rape and Murder Case) 9 ವರ್ಷದ ಬಾಲಕಿಯ ಮೇಲೆ 15 ವರ್ಷದ ಬಾಲಕನೊಬ್ಬ ಅತ್ಯಾಚಾರ ನಡೆಸಿ, ಕೊಲೆಗೈದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಡೆದಿದೆ. ಮೃತ ಬಾಲಕಿಯ ತಂದೆಯ ಮೇಲಿನ ಸೇಡಿಗೆ ಅಪ್ರಾಪ್ತ ಆರೋಪಿ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮುಂಜಾನೆ ಕಲ್ಯಾಣ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ಕಲ್ಯಾಣಿ ಪಶ್ಚಿಮ ಪ್ರದೇಶದಲ್ಲಿರುವ ವಸತಿ ಪ್ರದೇಶದ ಆವರಣದಲ್ಲಿ 9 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಘಟನೆ (Rape and Murder Case) ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದು, ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ 15 ವರ್ಷದ ಬಾಲಕ ಈ ಕೃತ್ಯವನ್ನು ನಡೆಸಿರುವುದು ತಿಳಿದುಬಂದಿದೆ. ಆತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ನಂತರದಲ್ಲಿ ಕತ್ತು ಸೀಳಿ ಕೊಲೆ ಮಾಡಿದ್ದ ಎನ್ನುವುದು ತಿಳಿದುಬಂದಿದೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಅಪ್ರಾಪ್ತ ಆರೋಪಿಯನ್ನು ಪೊಲೀಸರು ಗುರುತಿಸಿದ್ದಾರೆ. ನಂತರದಲ್ಲಿ ಬಾಲಕನ ಬಗ್ಗೆ ಸ್ಥಳೀಯರಲ್ಲಿ ವಿಚಾರಣೆ ಮಾಡಲಾಗಿದ್ದು, ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮಹಾತ್ಮ ಫುಲೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಅಪ್ರಾಪ್ತ ಆರೋಪಿ ನಡೆದ ಘಟನೆಯನ್ನು ತಿಳಿಸಿದ್ದಾನೆ. 2 ದಿನಗಳ ಹಿಂದೆ ಆತ ಬಾಲಕಿಯ ತಂದೆಯೊಂದಿಗೆ ಜಗಳವಾಡಿದ್ದು, ಹಲ್ಲೆಗೆ ಒಳಗಾಗಿದ್ದ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಬಾಲಕ ಆತನ ಅಪ್ರಾಪ್ತ ಮಗಳನ್ನು ಅಪಹರಿಸಿದ್ದು, ನಂತರ ಅತ್ಯಾಚಾರ ನಡೆಸಿ ಬ್ಲೇಡ್‌ನಿಂದ ಕತ್ತು ಸೀಳಿರುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ : Series Accident: ಗಾಂಜಾ ನಶೆಯಲ್ಲಿ ಡ್ರೈವಿಂಗ್, ಸರಣಿ ಅಪಘಾತ ನಡೆಸಿ ಎಸ್ಕೇಪ್ :12kM ಚೇಸಿಂಗ್ ಮಾಡಿ ಚಾಲಕನ ಸೆರೆ ಹಿಡಿದ ಸ್ಥಳೀಯರು

ಇದನ್ನೂ ಓದಿ : Electrick Shock : ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌ : 2 ಮಕ್ಕಳ ಸ್ಥಿತಿ ಚಿಂತಾಜನಕ

ಈ ಕುರಿತು ಮಹಾತ್ಮ ಫುಲೆ ಠಾಣಾ ಪೊಲೀಸರು ಲೈಂಗಿಕ ಅಪರಾಧಗಳಿಗೆ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ (POCSO)ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.

(Rape and Murder Case) A shocking incident in which a 9-year-old girl was raped and murdered by a 15-year-old boy took place in Kalyan, Maharashtra. The police said that the minor accused had committed this act to take revenge on the father of the deceased girl.

Comments are closed.