ಮುಂಬೈ : ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 13 ರ ವಿಜೇತರಾಗಿದ್ದ ಸಿದ್ದಾರ್ಥ್ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಡ್ಯಾನ್ಸ್ ದಿವಾನೆ 3 ರಲ್ಲೂ ತಮ್ಮ ಗೆಳತಿ ಶೆಹನಾಜ್ ಗಿಲ್ ಜೊತೆ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಿದ್ದಾರ್ಥ್ ಶುಕ್ಲಾ ಇಹಲೋಕ ತ್ಯಜಿಸಿರುವುದು ಚಿತ್ರರಂಗದವರನ್ನು ದಿಗ್ಬ್ರಮೆಗೊಳಿಸಿದೆ.
ಇದನ್ನೂ ಓದಿ: ಕಾಶ್ಮೀರದ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಜಿಲಾನಿ ವಿಧಿವಶ
ಡಿಸೆಂಬರ್ 12, 1980 ರಂದು ಮುಂಬೈನಲ್ಲಿ ಸಿದ್ದಾರ್ಥ್ ಶುಕ್ಲಾ ಜನಿಸಿದ್ದು, ಮೂಲತಃ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನವರೆಂದು ತಿಳಿದುಬಂದಿದೆ. ಬಾಲಿವುಡ್ ಚಿತ್ರಗಳಲ್ಲೂ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಕಾರು ಚಲಾಯಿಸಿದ್ದೇ ಕೋರಮಂಗಲ ಅಪಘಾತಕ್ಕೆ ಕಾರಣ !
(Bigg boss 13 winner Sidharth Shukla passes away)