sonam kapoor son vaayu : ಬಾಲಿವುಡ್ ನಟಿ ಸೋನಂ ಕಪೂರ್ ಕಳೆದ ತಿಂಗಳು 20ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಾತೃತ್ವದ ಕ್ಷಣಗಳನ್ನು ಅನುಭವಿಸುತ್ತಿರುವ ನಟಿ ಸೋನಂ ಕಪೂರ್ ಇನ್ಸ್ಟಾಗ್ರಾಂನಲ್ಲಿ ಕೆಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ನಟಿ ಸೋನಂ ಕಪೂರ್ ಎಲ್ಲಿ ಕೂಡ ತಮ್ಮ ಪುತ್ರನ ಹೆಸರನ್ನು ಹೇಳಿರಲಿಲ್ಲ. ಆದರೆ ಇದೀಗ ನಟಿ ಸೋನಂ ಕಪೂರ್ ತಮ್ಮ ಪುತ್ರನ ಹೆಸರನ್ನು ಘೋಷಿಸಿದ್ದಾರೆ. ಪತಿ ಹಾಗೂ ಮಗುವಿನ ಜೊತೆಯಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿರುವ ಸೋನಂ ಕಪೂರ್ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಹಳದಿ ಬಣ್ಣದ ಧಿರಿಸಿನಲ್ಲಿ ಸೋನಂ ಕಪೂರ್, ಆನಂದ್ ಅಹುಜಾ ಹಾಗೂ ಮಗು ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಸೋನಂ ಕಪೂರ್ ತಮ್ಮ ಮಗುವಿಗೆ ವಾಯು ಕಪೂರ್ ಅಹುಜಾ ಎಂದು ಹೆಸರಿಟ್ಟಿದ್ದಾರೆ. ಸೋನಂ ಕಪೂರ್ ಫೋಟೋದ ಶೀರ್ಷಿಕೆಯಲ್ಲಿ ವಾಯುವಿನ ಪೂರ್ಣ ಅರ್ಥವನ್ನೂ ತಿಳಿಸಿದ್ದಾರೆ. ನಮ್ಮ ಜೀವನಕ್ಕೆ ಹೊಸ ಅರ್ಥ ಬಂದಿದೆ. ಹನುಮಂತ ಹಾಗೂ ಭೀಮನ ಧೈರ್ಯ ಹಾಗೂ ಶಕ್ತಿಯನ್ನು ನಮಗೆ ನೀಡಿದ್ದಾರೆ. ನಮ್ಮ ಮಗನನ್ನು ನಾವು ಆರ್ಶೀವರ್ದಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ನಮ್ಮ ಮಗುವಿಗೆ ವಾಯು ಕಪೂರ್ ಅಹುಜಾ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ನಟಿ ಸೋನಂ ಕಪೂರ್ ಗಾಢ ಹಳದಿ ಬಣ್ಣ ಅನಾರ್ಕಲಿ ಸೂಟ್ ಧರಿಸಿದ್ದಾರೆ. ತೋಳು ಹಾಗೂ ಕುತ್ತಿಗೆ ಭಾಗದಲ್ಲಿ ಚಿನ್ನದ ಬಣ್ಣದ ದಾರದಿಂದ ಕಸೂತಿ ಮಾಡಲಾಗಿದೆ. ಮ್ಯಾಚಿಂಗ್ ದುಪ್ಪಟ್ಟಾದಲ್ಲಿಯೂ ಚಿನ್ನದ ಬಣ್ಣದ ಕಸೂತಿಯಿದೆ. ತುರುಬು ಹಾಕಿಕೊಂಡು ಅದಕ್ಕೆ ಮಲ್ಲಿಗೆ ಹೂವನ್ನು ಮುಡಿದಿದ್ದಾರೆ. ದೊಡ್ಡ ಕಿವಿಯೋಲೆ, ಬಂಗಾರ ಬಣ್ಣದ ಬಿಂದಿ ಹಾಗೂ ಕೆಂಪು ಬಣ್ಣದ ನೇಲ್ ಪಾಲಿಶ್ ಹಾಕಿದ್ದಾರೆ. ಇತ್ತ ಆನಂದ್ ಅಹುಜಾ ಬಿಳಿ ದಾರದ ಕಸೂತಿ ಹೊಂದಿರುವ ಹಳದಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದಾರೆ. ವಾಯು ಕಪೂರ್ ಅಹುಜಾನನ್ನು ಹಳದಿ ಬಣ್ಣದ ಮಸ್ಲಿನ್ ಬಟ್ಟೆಯಲ್ಲಿ ಇರಿಸಲಾಗಿದೆ.
ಇದನ್ನು ಓದಿ : Bigg boss Kannada season 9: ಸೆಪ್ಟೆಂಬರ್ 24 ರಿಂದ ಬಿಗ್‌ಬಾಸ್ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು
ಇದನ್ನೂ ಓದಿ : Vikrant Rona : ವಿಕ್ರಾಂತ್ ರೋಣ…ರಾ..ರಾ..ರಾ..ರಕ್ಕಮ್ಮ ಹಾಡಿಗೆ ಕುಣಿದವರಿಗೆ ಸಿಕ್ತು ಇಪ್ಪತ್ತೈದು ಸಾವಿರ ಬಹುಮಾನ
sonam kapoor baby boy name vayu kapoor ahuja shares photo of son vaayu instagram