Sonu Sood reacts : ತಮ್ಮ ನಟನೆಗಿಂತಲೂ ಹೆಚ್ಚಾಗಿ ಸಾಮಾಜಿಕ ಕಾರ್ಯಗಳ ಮೂಲಕ ಹೆಸರುವಾಸಿಯಾಗಿರುವ ನಟ ಸೋನು ಸೂದ್ ಇತ್ತೀಚಿಗೆ ತಮ್ಮ ಅಭಿಮಾನಿಯೊಬ್ಬರಿಗೆ ಆಶ್ಚರ್ಯಕರವಾದ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ. ಅಭಿಮಾನಿಯೊಬ್ಬರು ತಮ್ಮ ರಕ್ತದಿಂದ ಸೋನು ಸೂದ್ರ ಫೋಟೋವನ್ನು ಚಿತ್ರಿಸಿ ಅದನ್ನು ನಟನಿಗೆ ಉಡುಗೊರೆಯಾಗಿ ನೀಡಿದ್ದರು. ಅಭಿಮಾನಿಯ ಈ ಪ್ರೇಮಕ್ಕೆ ಧನ್ಯವಾದ ತಿಳಿಸಿದ ಸೋನು ಸೂದ್ ಇದರ ಜೊತೆಯಲ್ಲಿ ಈ ರೀತಿಯಲ್ಲಿ ರಕ್ತವನ್ನು ಬಳಕೆ ಮಾಡುವ ಬದಲು ರಕ್ತದಾನ ಮಾಡಿ ಎಂದು ತಿಳಿ ಹೇಳಿದ್ದಾರೆ.
ನಟ ಸೋನು ಸೋದ್ ತಮ್ಮ ಅಭಿಮಾನಿ ಹಾಗೂ ಕಲಾವಿದ ಮಧು ಗುರ್ಜಾರ್ ಜೊತೆಯಲ್ಲಿ ಸಂಭಾಷಣೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಸೋನು ಸೂದ್ ಹಾಗೂ ಮಧು ಗುರ್ಜಾರ್ ಈ ಪೇಟಿಂಗ್ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಮಧು ಗುರ್ಜಾರ್ ಅತ್ಯಂತ ಪ್ರತಿಭಾನ್ವಿತ ಕಲಾವಿದ. ಅವರು ನನ್ನ ಕಲಾಕೃತಿಯನ್ನು ರಕ್ತದಲ್ಲಿ ರಚಿಸಿದ್ದಾರೆ. ಆದರೆ ಇದನ್ನು ನೀವು ರಕ್ತದಿಂದ ರಚಿಸಿದ್ದು ತಪ್ಪು ಎಂದು ಸೋನು ಸೂದ್ ಹೇಳಿದ್ದಾರೆ.
प्रताबगढ के श्री माधु जी गुर्जर ने लाखो लोगो की मदद करने वाले @SonuSood जी से मुलाकात कर उनके निवास पर मित्रों संग खून से बनी हुई पेंटिंग भेंट की बहुत बहुत बधाई आपको@SonuSood @ArtMadhu pic.twitter.com/cvpUay7yKK
— Rajaram Gurjar (@BjpRajaram99) September 9, 2022
ನಿಮಗಾಗಿ ನಾನು ಜೀವವನ್ನೇ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಮಧು ಗುರ್ಜಾರ್ ಹೇಳಿದರೆ ಮತ್ತೊಬ್ಬ ನೀವು ದೇವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದಿದ್ದಾರೆ. ಮತ್ತೊಬ್ಬರು ನಿಮ್ಮಂತ ವಿಶಾಲ ಹೃದಯದ ವ್ಯಕ್ತಿಯನ್ನು ನಾವು ಕಂಡೇ ಇಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು ಸೂದ್ ನನಗೆ ಅರ್ಥವಾಗುತ್ತೆ. ಆದರೆ ರಕ್ತದಲ್ಲಿ ಯಾಕೆ..? ರಕ್ತದಲ್ಲಿ ಈ ರೀತಿ ಕಲಾಕೃತಿ ರಚಿಸುವ ಬದಲು ರಕ್ತದಾನ ಮಾಡಿ ಎಂದು ಅಭಿಮಾನಿಗಳಿಗೆ ಸೋನು ಸೂದ್ ಕಿವಿಮಾತು ಹೇಳಿದ್ದಾರೆ.
ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಸೋನು ಸೂದ್, ಮತ್ತೊಮ್ಮೆ ರಕ್ತದಾನ ಮಾಡಿ, ಸಹೋದರ, ನನ್ನನ್ನು ಚಿತ್ರಿಸುವ ಮೂಲಕ ರಕ್ತವನ್ನು ವ್ಯರ್ಥ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ. ಸೋನು ಸೂದ್ ಕೊನೆಯ ಬಾರಿ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪ್ರಥ್ವಿರಾಜ್ ಸಿನಿಮಾದಲ್ಲಿ ಚಾಂದ್ ಬರ್ದಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಸೋನು ಸೂದ್ ಶೀಘ್ರದಲ್ಲೇ ತಮಿಳು ಸಿನಿಮಾ ಥಮಿಳರಸನ್ ಮೂಲಕ ತೆರೆ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಯಲ್ಲಿ ಬಾಲಿವುಡ್ನ ಫತೇಹ್ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗೆ ಅಭಿನಂದನ್ ಗುಪ್ತಾ ನಿರ್ದೇಶನವಿದೆ.
ಇದನ್ನೂ ಓದಿ : Six drown : 2 ಪ್ರತ್ಯೇಕ ಘಟನೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಮುಳುಗಿ ಆರು ಮಂದಿ ಜಲಸಮಾಧಿ
Sonu Sood reacts as fan gifts him his painting made with blood: ‘Donate blood instead’