Dhoni Kapil Dev US Open tennis : ಯುಎಸ್ ಓಪನ್ ಟೆನಿಸ್ ಅಂಗಣದಲ್ಲಿ 3 ವಿಶ್ವಕಪ್ ವಿಜೇತ ನಾಯಕರು ; ಟೆನಿಸ್ ಎಂಜಾಯ್ ಮಾಡಿದ ಧೋನಿ, ಕಪಿಲ್ ದೇವ್

ನ್ಯೂಯಾರ್ಕ್: (Dhoni Kapil Dev US Open tennis) ಭಾರತದ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ನಾಯಕರಾದ ಕಪಿಲ್ ದೇವ್ (Kapil Dev) ಮತ್ತು ಮಹೇಂದ್ರ ಸಿಂಗ್ ಧೋನಿ (MS Dhoni) ಟೆನಿಸ್ ಅಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇಬ್ಬರೂ ಟೆನಿಸ್ ಏನೂ ಆಡಿಲ್ಲ. ನ್ಯೂಯಾರ್ಕ್’ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪಂದ್ಯವನ್ನು ವೀಕ್ಷಿಸಿದ್ದಾರೆ.

ಇಟಲಿಯ ಜಾನಿಕ್ ಸಿನ್ನರ್ ಮತ್ತು ಸ್ಪೇನ್’ನ ಕಾರ್ಲೋಸ್ ಅಲ್ಕಾರಜ್ ನಡುವಿನ ರೋಚಕ ಪಂದ್ಯಕ್ಕೆ ಎಂ.ಎಸ್ ಧೋನಿ ಮತ್ತು ಕಪಿಲ್ ದೇವ್ ಸಾಕ್ಷಿಯಾದರು. ಧೋನಿ ಮತ್ತು ಕಪಿಲ್ ದೇವ್ ಒಂದೇ ಸ್ಟ್ಯಾಂಡ್’ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಜಾನಿಕ್ ಸಿನ್ನರ್ ಮತ್ತು ಕಾರ್ಲೋಸ್ ಅಲ್ಕಾರಜ್ ನಡುವಿನ ಪಂದ್ಯ 5 ಗಂಟೆ 15 ನಿಮಿಷಗಳ ಕಾಲ ಸಾಗಿತು. ಇದು ಯುಎಸ್ ಓಪನ್ ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾಗಿ ನಡೆದ ಪಂದ್ಯ ಎಂಬ ದಾಖಲೆಗೆ ಪಾತ್ರವಾಯಿತು. ಕೊನೆಗೆ ಸ್ಪೇನ್’ನ ಅಲ್ಕಾರಜ್ 6-3, 6-7, 6-7, 7-5, 6-3 ಸೆಟ್’ಗಳಿಂದ ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು. ಸೆಮಿಫೈನಲ್’ನಲ್ಲೂ ಗೆದ್ದಿರುವ ಅಲ್ಕಾರಜ್ ಫೈನಲ್’ಗೆ ಲಗ್ಗೆಯಿಟ್ಟಿದ್ದು ಸೋಮವರಾ ನಡೆಯುವ ಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್ ಅವರನ್ನು ಎದುರಿಸಲಿದ್ದಾರೆ.

1983ರ ಐಸಿಸಿ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತುಂಬಾ ವರ್ಷಗಳ ನಂತರ ಟೆನಿಸ್ ಪಂದ್ಯ ವೀಕ್ಷಿಸಿದರು. ಆದರೆ 2007ರ ಐಸಿಸಿ ಟಿ20 ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಎಂ.ಎಸ್ ಧೋನಿಯವರು ಸಮಯ ಸಿಕ್ಕಾಗಲೆಲ್ಲಾ ಟೆನಿಸ್ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಇತ್ತೀಚೆಗಷ್ಟೇ ಲಂಡನ್’ನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯ ಪಂದ್ಯಗಳನ್ನೂ ಧೋನಿ ವೀಕ್ಷಿಸಿದ್ದರು.

40 ವರ್ಷದ ಎಂ.ಎಸ್ ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದು, ಐಪಿಎಲ್’ನಲ್ಲಿ ಮಾತ್ರ ಆಡುತ್ತಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಧೋನಿಯವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಚೆನ್ನೈ ಫ್ರಾಂಚೈಸಿ ಈಗಾಗ್ಲೇ ಘೋಷಿಸಿ ಬಿಟ್ಟಿದೆ. ಮುಂದಿನ ವರ್ಷದ ಟೂರ್ನಿಯಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ಐಪಿಎಲ್’ಗೆ ವಿದಾಯ ಹೇಳುವ ಸಾಧ್ಯತೆಗಳಿವೆ.

ಇದನ್ನೂ ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?

ಇದನ್ನೂ ಓದಿ : Sachin Tendulkar Silent virat Kohli: ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿಗೆ ಶಹಬ್ಬಾಸ್ ಅಂದ್ರೂ ಸಚಿನ್ ತೆಂಡೂಲ್ಕರ್ ಮಾತ್ರ ಗಪ್ ಚುಪ್

World Cup winning captains Mahendra Singh Dhoni Kapil Dev Enjoyed Tension on the US Open tennis court

Comments are closed.