ಭಾನುವಾರ, ಏಪ್ರಿಲ್ 27, 2025
HomeCinemaNayanatara: ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಲೇಡಿ ಸೂಪರ್ ಸ್ಟಾರ್ …! ನಿಶ್ಚಿತಾರ್ಥದ ಗುಟ್ಟು ಬಿಚ್ಚಿಟ್ಟ ನಯನತಾರಾ…!!

Nayanatara: ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಲೇಡಿ ಸೂಪರ್ ಸ್ಟಾರ್ …! ನಿಶ್ಚಿತಾರ್ಥದ ಗುಟ್ಟು ಬಿಚ್ಚಿಟ್ಟ ನಯನತಾರಾ…!!

- Advertisement -

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ತಮ್ಮ ವೈಯಕ್ತಿಕ ಬದುಕಿನ ಗುಟ್ಟು ಬಿಚ್ಚಿಟ್ಟಿದ್ದಾರೆ.ಪ್ರೀತಿಯಲ್ಲಿದ್ದರೂ ಪ್ರೀತಿಗೆ ಅಧಿಕೃತ ಮುದ್ರೆಯೊತ್ತದ ನಯನತಾರಾ ಕೊನೆಗೂ ತಮ್ಮ ಕೈಯಲ್ಲಿನ ಎಂಗೇಜ್ ಮೆಂಟ್ ರಿಂಗ್ ರಹಸ್ಯ ಬಹಿರಂಗಪಡಿಸಿದ್ದು, ಸದ್ಯದಲ್ಲೇ ವಿವಾಹವಾಗುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಪ್ರೀತಿ ಬಹಿರಂಗವಾದ ಮೇಲೂ ಮದುವೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಜೋಡಿ, ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಹಣ ಕೂಡಿ ಹಾಕುತ್ತಿದ್ದೇವೆ ಎಂದಿತ್ತು.

ಕೆಲ ದಿನಗಳ ಹಿಂದೆಯಷ್ಟೇ ನಯನತಾರಾ ವಿಘ್ನೇಶ್ ಶಿವನ್ ನಿರ್ಮಾಣದ ನೇಟ್ರಿಕಣ್ ಸಿನಿಮಾ ಪ್ರಮೋಶನ್ ಶೋವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನಯನತಾರಾ ಕೈಯಲ್ಲಿದ್ದ ಉಂಗುರದ ಬಗ್ಗೆ ನಿರೂಪಕಿ ಪ್ರಶ್ನೆ ಮಾಡಿದ್ದು, ಈ ವೇಳೆ ನಯನತಾರಾ ಇದು ವಿಘ್ನೇಶ್ ಶಿವನ್ ನೀಡಿದ ನಿಶ್ಚಿತಾರ್ಥದ ಉಂಗುರ ಎಂದಿದ್ದಾರೆ.

ಹೀಗಾಗಿ ಈ ಜೋಡಿಯ  ಗುಟ್ಟಾದ ನಿಶ್ಚಿತಾರ್ಥದ ಸಂಗತಿ ಬೆಳಕಿಗೆ ಬಂದಿದ್ದು, ಮೂಲಗಳ ಮಾಹಿತಿ ಪ್ರಕಾರ ಕೊರೋನಾ ಅಬ್ಬರ ತಗ್ಗಿದ ಬಳಿಕ ಜೋಡಿ ಹೊಸಬದುಕಿಗೆ ಕಾಲಿಡಲಿದೆ. ಕಳೆದ ಮಾರ್ಚ್ ತಿಂಗಳಿನಲ್ಲೇ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ಜೋಡಿ ಪೋಟೋದಲ್ಲಿ ನಯನತಾರಾ ಕೈಯಲ್ಲಿದ್ದ ಈ ಉಂಗುರ ಗಮನ ಸೆಳೆದಿತ್ತು.

ನಯನತಾರಾ ಹಾಗೂ ವಿಘ್ನೇಶ್ ಶಿವನ್ 2015 ರಲ್ಲಿ ಪೋಡಾಪೋಡಿ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದು ಅದೇ ವರ್ಷ ನಿರ್ದೇಶಿಸಿದ ನಾನು ರೌಡಿಧಾನ್ ಸಿನಿಮಾ ವೇಳೆಯೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ.

ಇತ್ತೀಚಿಗಷ್ಟೇ ನಯನತಾರಾ ತಂದೆ ಅನಾರೋಗ್ಯಕ್ಕಿಡಾಗಿದ್ದು, ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನಯನಾತಾರಾ ಮದುವೆ ನೋಡಲು ಬಯಸುತ್ತಿರೋದರಿಂದ ಸದ್ಯದಲ್ಲೇ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗುತ್ತಿದೆ.  

RELATED ARTICLES

Most Popular