ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ ಓವರ್‌ ಕಾರುಗಳಿವು

ಭಾರತದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳು, ಸೆಡಾನ್‌ ಕಾರುಗಳು ಹಾಗೂ ಎಸ್‌ಯುವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಮೂರು ಪ್ರಕಾರಗಳ ಮಿಶ್ರಣವನ್ನು ಹೊಂದಿರುವ ಬಾಡಿ ರಚನೆಯೊಂದಿಗೆ ಕೆಲವು ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ಅಂತಹ ಕಾರುಗಳನ್ನು ಕ್ರಾಸ್‌ಓವರ್‌ ಕಾರುಗಳು (ಸಿಒಸಿ) ಎಂದು ಕರೆಯಲಾಗುತ್ತದೆ.

ಕ್ರಾಸ್‌ಒವರ್ ಕಾರುಗಳು ತಮ್ಮ ನೋಟದಿಂದ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುತ್ತವೆ. ಪ್ರಾಯೋಗಿಕತೆ ಹಾಗೂ ಕ್ರಿಯಾತ್ಮಕತೆಯಲ್ಲಿ ಈ ಶೈಲಿಯ ಕಾರುಗಳ ಬಗ್ಗೆ ಯಾವುದೇ ಅತೃಪ್ತಿ ಇಲ್ಲ. ಆದರೆ ಕೆಲವು ಕ್ರಾಸ್‌ಒವರ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ.

2017 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಕ್ಯಾಪ್ಚರ್ ರೆನಾಲ್ಟ್ ಕಂಪನಿಯ ಪ್ರೀಮಿಯಂ ಕ್ರಾಸ್‌ಒವರ್ ಕಾರ್ ಆಗಿತ್ತು. ಪ್ರೀಮಿಯಂ ಎಸ್‌ಯುವಿಯಂತೆ ಈ ಕಾರು ಆಕರ್ಷಕವಾಗಿದ್ದರೂ ಸಹ ಬಹುತೇಕ ಜನರಿಗೆ ಕ್ಯಾಪ್ಚರ್‌ನ ಒರಟು ನೋಟ ಇಷ್ಟವಾಗಲಿಲ್ಲ. ಈ ಕ್ರಾಸ್‌ಒವರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿತ್ತು. ಆದರೂ ರೆನಾಲ್ಟ್ ಕಂಪನಿಯ ಈ ಕ್ರಾಸ್‌ಒವರ್ ಕಾರು ಗ್ರಾಹಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿತ್ತು. ಇದರ ಪರಿಣಾಮವಾಗಿ ರೆನಾಲ್ಟ್ ಕಂಪನಿಯು 2020 ರಲ್ಲಿ ಭಾರತದಲ್ಲಿ ಕ್ಯಾಪ್ಚರ್ ಕಾರಿನ ಸ್ಥಗಿತಗೊಳಿಸಿತು.

ಫೋಕ್ಸ್‌ವ್ಯಾಗನ್ ಕಂಪನಿಯು ಪೋಲೊ ಕ್ರಾಸ್ ಕಾರನ್ನು 2013 ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆಗ ಭಾರತದಲ್ಲಿ ಕ್ರಾಸ್‌ಒವರ್‌ಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಈ ಕಾರು ಸಾಮಾನ್ಯ ಪೋಲೊ ಹ್ಯಾಚ್‌ಬ್ಯಾಕ್ ಕಾರಿನ ಸ್ಪೋರ್ಟಿಯರ್ ಆವೃತ್ತಿಯಾಗಿದೆ. ಈ ಕಾರು ಸ್ಟಾಂಡರ್ಡ್ ಮಾದರಿಗಿಂತ ಸ್ವಲ್ಪ ಒರಟಾಗಿ ಕಾಣುತ್ತದೆ.

ಸಾಮಾನ್ಯವಾಗಿ ಸ್ಪೋರ್ಟ್ಸ್ ಕಾರುಗಳ ಸುತ್ತಲೂ ಪ್ಲಾಸ್ಟಿಕ್ ಪ್ಯಾನಲ್‌ಗಳನ್ನು ಒದಗಿಸಲಾಗುತ್ತದೆ. ಪೋಲೊ ಕ್ರಾಸ್ ಕಾರು ಸಹ ಇದರಿಂದ ಹೊರತಾಗಿರಲಿಲ್ಲ. ಈ ಬದಲಾವಣೆಗಳಿಂದ ಕ್ರಾಸ್‌ಒವರ್ ಕಾರಿನಂತೆ ಕಾಣುವ ಫೋಕ್ಸ್‌ವ್ಯಾಗನ್ ಕಾರುಗಳು ಗ್ರಾಹಕರಿಗೆ ಇಷ್ಟವಾಗಲಿಲ್ಲ. ಪೋಲೋ ಕ್ರಾಸ್‌ ಕಾರಿನ ಮಾರಾಟವು ಬಿಡುಗಡೆಯಾದ ಎರಡು ವರ್ಷಗಳ ನಂತರ ಅಂದರೆ 2015 ರಲ್ಲಿ ಸ್ಥಗಿತಗೊಂಡಿತು.

ಟಾಟಾ ಅರಿಯಾ ಮಾರಾಟದಲ್ಲಿ ಗಮನಾರ್ಹ ಸಂಖ್ಯೆಯ ಗ್ರಾಹಕರನ್ನು ಪಡೆಯಿತು. ಮಹೀಂದ್ರಾ ಎಕ್ಸ್‌ಯು‌ವಿ 500 ನಂತಹ ಕಾರುಗಳ ಪೈಪೋಟಿಯಿಂದಾಗಿ ಟಾಟಾ ಮೋಟಾರ್ಸ್ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತು. ಟಾಟಾ ಅರಿಯಾ ಕಾರು ಎಂಪಿವಿ, ಎಸ್‌ಯುವಿ ಹಾಗೂ ಸೆಡಾನ್‌ ಸೇರಿದಂತೆ ಮೂರು ರೀತಿಯ ಬಾಡಿ ರಚನೆಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ಕಂಪನಿಯಿಂದ ಹೊರ ಬಂದ ನಯವಾದ ವಿನ್ಯಾಸದ ಕಾರುಗಳಲ್ಲಿ ಅರಿಯಾ ಹೆಸರು ಸಹ ಸೇರಿದೆ.

ದೇಶಿಯ ಮಾರುಕಟ್ಟೆಯಲ್ಲಿ ಇಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್‌ ಕಾರಿಗೆ ದೊರೆತ ಉತ್ತಮ ಸ್ವಾಗತದ ನಂತರ, ಟೊಯೊಟಾ ಕಂಪನಿಯು ಲಿವಾ ಮಾದರಿಯನ್ನು ಆಧರಿಸಿ ಎಟಿಯೋಸ್ ಕ್ರಾಸ್‌ಒವರ್ ಕಾರ್ ಅನ್ನು ಪರಿಚಯಿಸಿತು. ಸುತ್ತಲೂ ಪ್ರಬಲವಾದ ಪ್ಲಾಸ್ಟಿಕ್ ಪ್ಯಾನಲ್‌ಗಳಿಂದ ವಿನ್ಯಾಸಗೊಳಿಸಲಾಗಿರುವ ಈ ಕಾರು ಮುಂಭಾಗದಲ್ಲಿ ಎಟಿಯೋಸ್ ಲಿವಾ ಕಾರಿಗಿಂತ ದೊಡ್ಡ ಬಂಪರ್ ಅನ್ನು ಪಡೆದುಕೊಂಡಿದೆ.

ಎಟಿಯೋಸ್ ಕ್ರಾಸ್‌ನ ಎಲ್ಲಾ ನಾಲ್ಕು ಬದಿಗಳಲ್ಲಿ ಕಪ್ಪು ಪ್ಲಾಸ್ಟಿಕ್ ಪ್ಯಾನಲ್‌, ಸ್ಪೋರ್ಟಿ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ಲಿವಾ ಮಾದರಿಗೆ ಹೋಲಿಸಿದರೆ ಈ ಕ್ರಾಸ್‌ಒವರ್ ಕಾರು ಹೆಚ್ಚುವರಿ ಉದ್ದ, ಅಗಲ ಹಾಗೂ ಎತ್ತರವನ್ನು ಹೊಂದಿದೆ. ಟೊಯೊಟಾ ಕಂಪನಿಯ ಈ ಕಾರನ್ನು ಅತ್ಯಂತ ಸುಂದರವಾದ ಕ್ರಾಸ್‌ಒವರ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿ ದ್ದರೂ, 2020 ರಲ್ಲಿ ನವೀಕರಿಸಿದ ನಂತರ ಇಂಟಿರಿಯರ್ ಫೀಚರ್’ಗಳ ಕೊರತೆಯಿಂದಾಗಿ ಈ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು

Comments are closed.