ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮಂದಿ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ತಾನೂ ಕೂಡ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ನಡುವಲ್ಲೇ ನಟ ಸುಶಾಂತ್ ಸಿಂಗ್ ಹಲವು ತಿಂಗಳುಗಳಿಂದಲೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ.

ಈ ನಡುವಲ್ಲೇ ನಟಿ ಖುಷ್ಬೂ ಸುಶಾಂತ್ ಸಿಂಗ್ ಸಾವಿನ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಎಲ್ಲರೂ ಜೀವನದಲ್ಲಿ ಖಿನ್ನತೆ ಅನುಭವಿಸುತ್ತಾರೆ. ನಾನು ಕೂಡ ಖಿನ್ನತೆ ಅನುಭವಿಸಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ.

ನಾನು ಒಂದು ದಿನ ಎಲ್ಲವನ್ನೂ ಅಂತ್ಯ ಮಾಡಬೇಕು ಅಂತಾ ಅಂದುಕೊಂಡಿದ್ದೆ. ಆದರೆ ನನ್ನನ್ನು ಸೋಲಿಸಲು ಪ್ರಯತ್ನಿಸಿದವರಿಗಿಂತ ಗಟ್ಟಿ ಇದ್ದೇನೆ ಎಂಬುವುದನ್ನು ಸಾಬೀತು ಮಾಡಲು ಈ ಆಲೋಚನೆಗಳ ವಿರುದ್ದ ಹೋರಾಡಿದ್ದೇನೆ ಎಂದು ಖುಷ್ಬು ಹೇಳಿಕೊಂಡಿದ್ದಾರೆ.